ಇಂದು ಟೆಲಿಕಮ್ಯುನಿಕೇಶನ್‌ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ಮುಂಬರುವ ದಿನದಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ಪರೀಕ್ಷಾ ಸಂದೇಶವನ್ನು ಎಲ್ಲರ ಮೊಬೈಲ್ ಗೆ ರವಾನಿಸಲಾಗಿದೆ.

ಭೂಕಂಪ, ಸುನಾಮಿ, ಅಗ್ನಿ ದುರಂತ ಮತ್ತು ಹಠತ್ ಪ್ರವಾಹ, ಯುದ್ಧಗಳಂತಹ ವಿಪತ್ತುಗಳ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಸನ್ನದ್ಧರಾಗಿರಿಸಲು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ್ ಈ ಪರೀಕ್ಷಾರ್ಥ ಸಂದೇಶ ರವಾನಿಸಲಾಗಿದ್ದು ಅದರಂತೆಯೇ ಹೆಚ್ಚಿನ ಮೊಬೈಲ್ ಬಳಕೆದಾರರಿಗೆ ಈ ಸಂದೇಶ ರವಾನಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಕೋಪಗಳು ಸಂಭವಿಸಬಹುದಾದ ಸ್ಥಳದಲ್ಲಿ ಸ್ಥಳಗಳಲ್ಲಿನ ಮೊಬೈಲ್ ಬಳಕೆದಾರರಿಗೆ ಈ ಫ್ಲಾಶ್ ಸಂದೇಶದ ಮೂಲಕ ಎಚ್ಚರಿಸಲಾಗುತ್ತದೆ.

ಇಂದಿನ ಪರೀಕ್ಷಾರ್ಥ ಪ್ರಯೋಗದಲ್ಲಿ ಮೊಬೈಲ್ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್ ಶಬ್ದದೊಂದಿಗೆ ಕಂಪಿಸಿ ತಕ್ಷಣ ಅಲರ್ಟ್ ಸಂದೇಶ ಫ್ಲಾಶ್ ಆಗಿದೆ. ಬಳಕೆದಾರರು ಓಕೆ ಎಂದು ಒತ್ತುವವರೆಗೂ ಬೀಪ್ ಶಬ್ದ ಬರುತ್ತಲೇ ಇರುತ್ತದೆ.

ಯಾಕೆಂದರೆ ಎಚ್ಚರಿಕೆ ಸಂದೇಶವನ್ನು ಓದಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

By admin

Leave a Reply

Your email address will not be published. Required fields are marked *

error: Content is protected !!