ಕಳೆದ ಐದು ದಶಕ ಗಳಿಂದ ಯಕ್ಷಗಾನ ರಂಗ ದಲ್ಲಿ ವೇಷಧಾರಿ ಯಾಗಿ ಸೇವೆ ಸಲ್ಲಿಸುತ್ತಿರುವ ತೆಂಕು ತಿಟ್ಟಿನ ಆಗ್ರ ಪಂಕ್ತಿ ಯ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ ಅವರಿಗೆ ಮಾರ್ಚ್ 23 ರಂದು ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ 2024 ನೀಡಿ ಸನ್ಮಾನಿಸ ಲಾಗುವುದು.

ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಥಮ ತಂಡ ದ ಕಲಾವಿದನಾಗಿ ಯಕ್ಷ ನಾಟ್ಯ ಕಲಿತು, ಧರ್ಮಸ್ಥಳ ಮೇಳ ದಲ್ಲಿ ಹಂತ ಹಂತ ವಾಗಿ ಬೆಳೆದು ಪುಂಡು, ಸ್ತ್ರೀ, ರಾಜವೇಶ, ಎದುರು ವೇಶ ಗಳಲ್ಲಿ ಪ್ರಬುದ್ಧತೆ ಸಾಧಿಸಿ, ಕದ್ರಿ, ಕುಂಬ್ಳೆ, ಮಧೂರು, ಸಸಿಹಿತ್ಲು, ಬಪ್ಪನಾಡು ಮೇಳಗಳಲ್ಲಿ ತುಳು -ಕನ್ನಡ ಪ್ರಸಂಗ ಗಳಲ್ಲಿ ವೈವಿದ್ಯ ಪಾತ್ರ ಗಳಲ್ಲಿ ಮೆರೆದು, ಕಳೆದ ಇಪ್ಪತ್ತು ವರ್ಷ ಗಳಿಂದ ಕಟೀಲು ಮೇಳ ದಲ್ಲಿ ಸೇವೆ ಸಲ್ಲಿಸುತ್ತಿರುವ ಮುಂಡಾಜೆ ಅವರು ಮೇಳದ ಪ್ರಬಂಧಕರಾಗಿಯೂ ಜನಪ್ರಿಯತೆ ಗಳಿಸಿದ್ದಾರೆ.

ಕದ್ರಿ ಕಂಬಳ ಗುತ್ತಿನ ಯಜಮಾನನಾಗಿ, ಹವ್ಯಾಸಿ ತಾಳಮದ್ದಳೆ ಅರ್ಥಧಾರಿ ಯಾಗಿ, ಸಂಘಟಕನಾಗಿ, RSS ನ ಹಿರಿಯ ಸ್ವಯಂಸೇವಕ ನಾಗಿ
ಜನಸಂಘ -ಭಾ. ಜ. ಪ ದ ಹಿರಿಯ ನಾಯಕ ನಾಗಿ, ಕೃಷಿಕ ನಾಗಿದ್ದ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸ್ಮರಣರ್ಥ ಪ್ರಶಸ್ತಿ ನೀಡಲಾಗುತ್ತಿದೆ.

ಶ್ರೀಮತಿ ವಾಸವಿ ಬಾಲಕೃಷ್ಣ ಶೆಟ್ಟಿ ಮತ್ತು ಮಕ್ಕಳ ಕಟೀಲು ಮೇಳ ದ ಸೇವೆ ಯಕ್ಷಗಾನ “ವೀರ ನರೇಂದ್ರ ವಿಜಯ ” ಬಯಲಾಟ ಕದ್ರಿ ಕಂಬಳ ಗದ್ದೆ ಯಲ್ಲಿ ಜರಗಲಿದೆ ಎಂದು ಕದ್ರಿ ನವನೀತ ಶೆಟ್ಟಿ ಮತ್ತು ಭಾಸ್ಕರ ಶೆಟ್ಟಿ ತಿಳಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!