Month: January 2023

ಅಂಚೆ ಇಲಾಖೆ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅವಿಭಜಿತ ದ.ಕ. ಜಿಲ್ಲೆಯಲ್ಲಿ 273 ಹುದ್ದೆ

ಮಂಗಳೂರು: ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಸಂಬಂಧಿಸಿದಂತೆ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆಪಾಲಕ ಮತ್ತು ಢಾಕ್‌ ಸೇವಕ್‌ ಹುದ್ದೆಗಳಿಗೆ ನೇಮಕಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ವಿಭಾಗದಲ್ಲಿ 95 ಸೇರಿದಂತೆ ಅವಿಭಜಿತ…

ಧರ್ಮಸ್ಥಳ : ಯುವತಿಯ ಬೆತ್ತಲೆ ಜಗತ್ತಿನಲ್ಲಿ ಸಿಲುಕಿಕೊಂಡ ಯುವಕ – ಹೆದರಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಮಂಗಳೂರು: ಕರಾವಳಿಯಲ್ಲಿ ಬ್ಲಾಕ್ ಮೇಲ್ (blackmailing) ಜಾಲ ಬೀಡುಬಿಟ್ಟಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರೇ ಇವರ ಟಾರ್ಗೆಟ್. ಇವರ ತಂಡದ ಸುಂದರ ಯುವತಿಯ ಅಂಗಾಂಗ ನೋಡಿ ಜೊಲ್ಲು ಸುರಿಸಿದ್ರೆ ನಿಮ್ಮ ಜೇಬಿಗೆ ಕತ್ತರಿ ಬಿತ್ತು ಅಂತಾನೆ ಅರ್ಥ. ಇದೇ ಗ್ಯಾಂಗ್ ನಿಂದಾಗಿ…

ಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿ – ಒಂದು ವರ್ಷದ ಮಗುವಿನ ದುರ್ಮರಣ

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿಯಾಗಿ ಮಗುವೊಂದು ಮೃತಪಟ್ಟ ಘಟನೆ ಮಾಲಾಡಿಯಲ್ಲಿ ಸೋಮವಾರ ಸಂಭವಿಸಿದೆ. ಕಾರ್ಕಳ ನಿಟ್ಟೆ ನಿವಾಸಿಗಳಾಗಿರುವ ಸಂತೋಷ್ ಹಾಗೂ ಗೀತಾ ದಂಪತಿಯ ಒಂದು ವರ್ಷದ ಮಗು ಅಪಘಾತದಲ್ಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಇವರು ಸಂಬಂಧಿಕರ…

ತಲಪಾಡಿ ಟೋಲ್ ಸಿಬ್ಬಂದಿಗಳ ಗೂಂಡಾ ವರ್ತನೆ – ವೀಡಿಯೋ ವೈರಲ್

ಟೋಲ್ ಸಿಬ್ಬಂದಿಗಳ ಗೂಂಡಾ ವರ್ತನೆಯಿಂದ ಕಾರು ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ತಲಪಾಡಿ ಟೋಲ್ ಪ್ಲಾಜಾದಲ್ಲಿ ಭಾನುವಾರ ನಡೆದಿರುವುದು, ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ವೀಡಿಯೋ ವೈರಲ್ ಆಗಿದೆ. ಕೇರಳ ಗಡಿಭಾಗದ ತಲಪಾಡಿ ಟೋಲ್ ಗೇಟ್ ನಲ್ಲಿ ಘಟನೆ ನಡೆದಿದ್ದು…

ಮಂಗಳೂರು: ಮೊಬೈಲ್ ಬಳಕೆ ಬುದ್ದಿವಾದ ಹೇಳಿದ್ದಕ್ಕೆ ೯ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು, ಅತಿಯಾಗಿ ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಪೋಷಕರು ಮಗನನ್ನು ಗದರಿಸಿದ ಹಿನ್ನೆಲೆ ಬಾಲಕ ನೇಣು ಬಿಗಿದುಕೊಂಡು ಆತ್ಕಹತ್ಯೆ ಮಾಡಿಕೊಂಡ ಘಟನೆ ನಗರದ ಪದವು ಗ್ರಾಮದ ಕೋಟಿಮುರ ಎಂಬಲ್ಲಿ ನಡೆದಿದೆ. ಕೋಟಿಮುರ ನಿವಾಸಿ ಜಗದೀಶ್ ಎಂಬವರ ಪುತ್ರ ಜ್ಞಾನೇಶ್(14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.…

ಮಂಗಳೂರು: ಫೆ. 1ರಿಂದ ನಗರದಲ್ಲಿ ಕಸ ಸಂಗ್ರಹ, ನೀರು ಪೂರೈಕೆ ಅನಿರ್ದಿಷ್ಟಾವಧಿ ಸ್ಥಗಿತ

ಮಂಗಳೂರು, ನಗರದ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೊಳಪಡಿಸಿ ಹಂತ ಹಂತವಾಗಿ ಖಾಯಂಗೊಳಿಸುವಂತೆ ಆಗ್ರಹಿಸಿ ಕಸ ಸಾಗಿಸುವ ವಾಹನಗಳ ಚಾಲಕರು, ನೀರು ಸರಬರಾಜು ಸಹಾಯಕರು, ಲೋಡರ್‌ಗಳು, ಕ್ಲೀನರ್‌ಗಳು, ಹೆಲ್ಪರ್, ಒಳಚರಂಡಿ ಕಾರ್ಮಿಕರು ಫೆ.1 ರಿಂದ ಅನಿರ್ದಿಷ್ಟಾವಧಿ…

ಸಹೋದರಿಬ್ಬರನ್ನು ಬಲಿ ಪಡೆದ ಭೀಕರ ಕಾರು ಅಪಘಾತ

ರಾ.ಹೆ.66ರ ಕೊಲ್ಯ -ಅಡ್ಕ ನಡುವೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿಯೇ ಕಾರು ಚಲಾಯಿಸುತ್ತಿದ್ದ ಸಹೋದರ ಅಬ್ದುಲ್ ರಿಫಾಯಿ ನಿನ್ನೆಯೇ ಮೃತಪಟ್ಟಿದ್ದು, ಉಪ್ಪಳ ಹಿದಾಯತ್ ನಗರದ ಬಾಷರ್ ಅಹಮ್ಮದ್…

ಅರವಿಂದ ಬೋಳಾರ್ ಅವರ ಜೀವ ಉಳಿಸಿದ್ದು ಹೆಲ್ಮೆಟ್-ಆರೋಗ್ಯವಾಗಿದ್ದೇನೆ ಎಂದ ತುಳುನಾಡ ಮಾಣಿಕ್ಯ

ಮಂಗಳೂರು, ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದ್ದ ಅರವಿಂದ ಬೋಳಾರ್ ಅವರ ಅರೋಗ್ಯ ಚೆನ್ನಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ಅಪಾಯವಾಗಲಿಲ್ಲ ಎಂದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪಂಪ್ ವೆಲ್ ಸಮೀಪ ದ್ವಿಚಕ್ರ ವಾಹನ ಸ್ಕಿಡ್ ಆಗಿರುವ ಪರಿಣಾಮದಿಂದಾಗಿ…

ಮಂಗಳೂರು: ಶರಣ್ ಪಂಪ್ ವೆಲ್ ರನ್ನು ಗಡಿಪಾರು ಮಾಡಿ-ಯು.ಟಿ. ಖಾದರ್

ಮಂಗಳೂರು, ಜ.30: ರಾಜಕೀಯ ಲಾಭ, ವ್ಯಾಪಾರಕ್ಕಾಗಿ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಅವಿಶ್ವಾಸ, ದ್ವೇಷ, ಕೊಲೆ, ಅಹಿತಕರ ಘಟನೆಗಳಿಗೆ ಕಾರಣರಾಗುವ ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಇಲ್ಲಿನ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಅಂತಹವರು ಸಮಾಜಕ್ಕೆ ಅಪಾಯಕಾರಿ ಎಂದು ಶಾಸಕ ಹಾಗೂ ವಿಧಾನಸಭಾ…

ವಿಟ್ಲ: ಮಾಣಿಲ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ-ಉದ್ಘಾಟನೆ ನೆರವೇರಿಸಿದ ಶಾಸಕ ಮಠಂದೂರು

ವಿಟ್ಲ, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ,ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ ಸಮರ್ಪಕವಾಗಿ ದೊರೆತಾಗ ಹಳ್ಳಿಗಳು ಸ್ವಾವಲಂಬಿಗಳಾಗುತ್ತವೆ.ಮಾಣಿಲದಂತಹ ಹಿಂದುಳಿದ ಗಡಿ ಗ್ರಾಮಕ್ಕೆ ಕಳೆದ ಐದು ವರ್ಷಗಳಲ್ಲಿ ಸುಮಾರು ಆರು ಕೋಟಿ ಅನುದಾನ ಲಭಿಸಿದೆ. ಜನಪ್ರತಿನಿಧಿಗಳನ್ನು ಜಾಗೃತ ಗೊಳಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕು ಎಂದು ಪುತ್ತೂರು…

error: Content is protected !!