ಬಂಟ್ವಾಳ : ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಚಡ್ಡಿ- ಲಂಗ ಒಣಗಲು ಹಾಕಿದ ಪ್ರಯಾಣಿಕರು.

ಬಂಟ್ವಾಳ: ವಾಯುವ್ಯ ಕರ್ನಾಟಕ ಸಾರಿಗೆ ಬಸ್ ನಲ್ಲಿ ಬಟ್ಟೆ ಒಣಗಲು ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ. ಬಸ್ಸಿನಲ್ಲಿ ಪ್ರಯಾಣಿಕರಿಗೆ ಅಸಹ್ಯ ಹುಟ್ಟಿಸುವ ಬಟ್ಟೆಗಳು ನೇತಾಡುತ್ತಿದ್ದು, ಇದು ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ಸುಬ್ರಹ್ಮಣ್ಯದಿಂದ ಕಾರವಾರ ಕ್ಕೆ…

ವಿಟ್ಲ: ತಂಡದಿಂದ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ: ಕಂಬಳಬೆಟ್ಟು ಭಾಗದ 5 ಮಂದಿ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಕಂಬಳಬೆಟ್ಟುವಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳನ್ನು ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಮಣಿ ನಾಲ್ಕೂರು ಗ್ರಾಮದ ಅಜಲುಮೊಗೆರು ನಿವಾಸಿ ಮಹಮ್ಮದ್ ಸರ್ವನ್ (27) ಹಾಗೂ ಜತೆಗೆ ಕೆಲಸ ಮಾಡುವ…

ಫೇಸ್ಬುಕ್ನಲ್ಲಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಶ್ರೀರಾಮಸೇನೆ ಮುಖಂಡ ಅವಹೇಳನಕಾರಿ ಪೋಸ್ಟ್; ದೂರು ದಾಖಲು

ಚಿಕ್ಕಮಗಳೂರು: ವಿಧಾನಸಭೆಯಲ್ಲಿ ಭರ್ಜರಿ ಜಯಗಳಿಸಿದ ಕಾಂಗ್ರೆಸ್, ಆಡಳಿತ ಚುಕ್ಕಾಣಿ ಹಿಡಿದಿದೆ. ಅದರಂತೆ ನೂತನ ಸಭಾಧ್ಯಕ್ಷರಾದ ಉಳ್ಳಾಲ ಕ್ಷೇತ್ರದ ಯು.ಟಿ ಖಾದರ್ ಸಭಾಧ್ಯಕ್ಷರಾಗಿದ್ದಾರೆ. ಇದೀಗ ಸ್ಪೀಕರ್ ಖಾದರ್ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ. ಹೌದು ಶ್ರೀರಾಮಸೇನೆ ಮುಖಂಡ ಪ್ರೀತೇಶ್ ಎಂಬಾತ ಖಾದರ್ ವಿರುದ್ಧ ಪೋಸ್ಟ್ ಮಾಡಿದ್ದಾನೆ. ಈ ಹಿನ್ನಲೆ ಇದೀಗ ಕಾಂಗ್ರೆಸ್ ಕಾರ್ಯಕರ್ತರು…

ಮಂಗಳೂರು: ಕೋಲ, ಯಕ್ಷಗಾನ, ಧಾರ್ಮಿಕ ಕಾರ್ಯಕ್ರಮ ನಿರ್ಬಂಧ ಇಲ್ಲ- ಮತಯಾಚನೆಗೆ ಅವಕಾಶ ಇಲ್ಲ.

ಮಂಗಳೂರು, ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಜನರಿಗೆ ಇರುವ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ದ.ಕ ಜಿಲ್ಲೆಯಲ್ಲಿ ಕೋಲ, ಕಂಬಳ ಯಕ್ಷಗಾನಕ್ಕೆ ನಿರ್ಬಂಧ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.…

ಟ್ಯಾಂಕರ್ ಡಿಕ್ಕಿ ದಂಪತಿ ದಾರುಣ ಸಾವು

ಮುಲ್ಕಿ : ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಸ್ಕೂಟರ್ ಗೆ ಟ್ಯಾಂಕರ್ ಡಿಕ್ಕಿಯಾಗಿ ದಂಪತಿಗಳು ಸಾವನ್ನಪ್ಪಿದ ದಾರುಣ ಘಟನೆ ಇಂದು ಮಂಗಳವಾರ ಮದ್ಯಾಹ್ನ ನಡೆದಿದೆ. ಮೃತ ದುರ್ದೈವಿಗಳನ್ನು ತೀರ್ಥಹಳ್ಳಿ ಕೋಳಿ ಕಾಲು ಗುಡ್ಡೆ…

ಬೆಳ್ತಂಗಡಿ:ಮಕ್ಕಳ, ಪ್ರವಾಸದ ಬಸ್-ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಅಪಘಾತ-ಹಲವು ಮಕ್ಕಳಿಗೆ ಗಾಯ

ಬೆಳ್ತಂಗಡಿ: ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ ಮಕ್ಕಳ ಪ್ರವಾಸದ ಬಸ್‌ ಹಾಗೂ ಕೆಎಸ್‌‌ಆರ್‌‌ಟಿಸಿ ಬಸ್‌ ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿದ ಪರಿಣಾಮ ಟೂರಿಸ್ಟ್‌ ಬಸ್‌ ಚಾಲಕ ಅಭಿಷೇಕ್‌ ಹಾಗೂ ಬಸ್‌ ಪ್ರಯಾಣಿಕ ದುಗೇಶ್‌ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆನಡೆದಿದೆ. ಸಿಂಧನೂರಿನ…

ಪುತ್ತೂರು : ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ – ಯುವಕನ ದಾರುಣ ಸಾವು

ಪುತ್ತೂರು: ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಪುತ್ತೂರಿನ ದರ್ಬೆ ಬೈಪಾಸಿನಲ್ಲಿ ನಡೆದಿದೆ. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಟ್ಟಡದಲ್ಲಿರುವ ರೆಡ್ ಪ್ರೀಮಿಯರ್ ಸಂಸ್ಥೆಯ ಸಿಬ್ಬಂದಿ ಸಂಪ್ಯ ನಿವಾಸಿ ಅಬ್ದುಲ್…

ದೇಶಕ್ಕೆ ಗಲಭೆ ತರುವಂತಹ ಯಾವುದೇ ಸಂಘಟನೆಗಳು ಆದರೂ ಅದರ ಮೇಲೆ ಸರ್ಕಾರ ನಿಯಂತ್ರಣ ಹೇರುವುದು ಸರಿ – ಯು.ಟಿ ಖಾದರ್

ಮಂಗಳೂರು: ಸರ್ಕಾರ ಕೆಲವು ನೀತಿಗಳಲ್ಲಿ ತಾರತಮ್ಯ ಮಾಡುತ್ತದೆ. ಪರಿಹಾರ ಕೊಡುವುದರಲ್ಲಿ ಕೂಡಾ ಸರ್ಕಾರ ಭೇಧಭಾವ ಮಾಡಿದೆ. ಈ ರೀತಿಯ ತಾರತಮ್ಯ ಧೋರಣೆಯನ್ನು ನಾವು ಸಹಿಸುವುದಿಲ್ಲ. ಪಿಎಫ್‌ಐ ಬ್ಯಾನ್ ಮಾಡಿದಂತೆ ಯಾವ ಸಂಘಟನೆಗಳು ದೇಶದಲ್ಲಿ ಕೊಲೆ, ಅನಾಚಾರಕ್ಕೆ ಕಾರಣವಾಗುತ್ತಿದೆಯೋ ಅವೆಲ್ಲದರ ಮೇಲೆ ಸರ್ಕಾರ…

ಬೆಂಗಳೂರು: ವಿಧಾನಪರಿಷತ್ ಫಲಿತಾಂಶ ವಿಧಾನಸಭೆ ಚುನಾವಣೆಗೆ ಪರಿಣಾಮ ಬೀರಲ್ಲ-ನಳಿನ್

ಚಾಮರಾಜನಗರ : ‘ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತಗಳು ಸ್ಥಿರವಾಗಿವೆ. ಜೆಡಿಎಸ್ ಮತಗಳು ಬಿಜೆಪಿಗೆ ಬಂದಿವೆ. ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

ಹಿರಿಯ ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ

ಕಳೆದ ಐದು ದಶಕ ಗಳಿಂದ ಯಕ್ಷಗಾನ ರಂಗ ದಲ್ಲಿ ವೇಷಧಾರಿ ಯಾಗಿ ಸೇವೆ ಸಲ್ಲಿಸುತ್ತಿರುವ ತೆಂಕು ತಿಟ್ಟಿನ ಆಗ್ರ ಪಂಕ್ತಿ ಯ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ ಅವರಿಗೆ ಮಾರ್ಚ್ 23 ರಂದು ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ…

ಸೋತು ಶರಣಾದ ಪುತ್ತಿಲ: ಸ್ವಾಭಿಮಾನ ಉಳಿಸಿಕೊಂಡ ಶಕುಂತಳಾ!

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಿಲ್ಲ ಅಂತ ರಾಂಗ್ ಆಗಿದ್ದ ಪುತ್ತಿಲ, ಈಗ ಅದೇ ಪಕ್ಷದ ಎದುರು ಬೆಂಡಾಗಿದ್ದಾರೆ‌. ಪುತ್ತೂರಿನಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆ ಮಾಡಿ, ಸಂಘ ಪರಿವಾರಕ್ಕೆ ಪರ್ಯಾಯ ಪರಿವಾರ ಮಾಡಿದ ಪುತ್ತಿಲ ಇತ್ತೀಚೆಗೆ ಮತ್ತೆ…

ಪುತ್ತಿಲ ಪರಿವಾರದಿಂದ ಗೂಂಡಾಗಿರಿ-ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರ ನಡುವೆ ಘರ್ಷಣೆ!

ಅರುಣ್ ಕುಮಾರ್ ಪುತ್ತಿಲ ಪರಿವಾರದ ಕಾರ್ಯಕರ್ತನೊಬ್ಬ ದ.ಕ. ಬಿಜೆಪಿ ಜಿಲ್ಲಾ ಕಚೇರಿಯಲ್ಲೇ ಪತ್ರಕರ್ತರ ಮೇಲೆ ಶನಿವಾರ ಗೂಂಡಾಗಿರಿ ಎಸಗಿದ ಆರೋಪ ಕೇಳಿ ಬಂದಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಕಾರ್ಯಕ್ರಮವು ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದಿದ್ದು, ಈ ಸಂದರ್ಭ…

ನಳಿನ್ ಕುಮಾರ್ ಹೊರಕ್ಕೆ, ಪುತ್ತಿಲ ಒಳಕ್ಕೆ: ಅರುಣ್ ಪುತ್ತಿಲ ಘರ್ ವಾಪಸಿ:

ಬೆಂಗಳೂರು. ಮಂಗಳೂರು, (ಮಾರ್ಚ್ 14): ಲೋಕಸಭಾ ಚುನಾವಣೆ (Loksabha Elections 2024) ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್‌ ಪುತ್ತಿಲ (Arun Kumar Puthila) ಜತೆಗಿನ ಬಿಜೆಪಿ ನಾಯಕರ ಸಂಧಾನ ಯಶಸ್ವಿಯಾಗಿದೆ. ಇಂದು(ಮಾರ್ಚ್ 14) ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಂಧಾನ ಸಭೆ ನಡೆದಿದ್ದು,…

ಸಂಸದ ನಳಿನ್, ಸದಾನಂದ ಗೌಡ, ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್

ಮಂಗಳೂರು, ದ.ಕ. ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಭಾರೀ ಅಂತರದ ಮತಗಳಿಂದ ಗೆಲುವು ದಾಖಲಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಈ ಬಾರಿ ಬಿಜೆಪಿ ಕೈ ಬಿಟ್ಟಿದೆ. ಅತ್ತ ಮೈಸೂರು ಸಂಸದ ಪ್ರತಾಪ್ ಸಿಂಹರಿಗೂ ಟಿಕೆಟ್ ನೀಡಿಲ್ಲ. ಮತ್ತೊಂದೆಡೆ…

ದ. ಕ . ಬ್ರಿಜೇಶ್ ಚೌಟಗೆ ಟಿಕೆಟ್- ನಳಿನ್ ಕುಮಾರ್ ಗೆ ಕೋಕ್

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ದ.ಕ. ಜಿಲ್ಲೆಯಿಂದ ಕ್ಯಾ. ಬ್ರಿಜೇಶ್ ಚೌಟ ಉಡುಪಿಯಿಂದ ಕೋಟ ಶ್ರೀವಾಸ್ ಪೂಜಾರಿ, ಮೈಸೂರಿನಲ್ಲಿ ಯಧುವೀರ್ ಒಡೆಯರ್, ಬೆಂ. ಉತ್ತರದಲ್ಲಿ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ದ.ಕ.ದಲ್ಲಿ ನಳಿನ್ ಕುಮಾರ್ ಹಾಗೂ ಸದಾನಂದ ಗೌಡಗೆ ಕೋಕ್…

ಮಂಗಳೂರು: ಮೆಡಿಕಲ್ ರೆಪ್ ಯುವಕ ಆತ್ಮಹತ್ಯೆ

ನಗರದ ಕೆಎಸ್ ರಾವ್ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್ ಒಂದರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂಂನೊಳಗೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯನ್ನು 27 ವರ್ಷದ ಅಭಿಷೇಕ್‌ ಎಂದು ಗುರುತಿಸಲಾಗಿದೆ. ಅಭಿಷೇಕ್‌ ಮೆಡಿಕಲ್‌ ರೆಪ್ರೆಸೆಂಟೇಟಿವ್‌ ಆಗಿ…

ಕಾಸರಗೋಡು:ಟಿಪ್ಪರ್ ಲಾರಿ, ಬೈಕ್ ನಡುವೆ ಅಪಘಾತ-ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಬಂದ್ಯೋಡು ಬಳಿಯ ಮುಟ್ಟಂ ಗೇಟ್ ಬಳಿ ನಡೆದಿದೆ. ಉಪ್ಪಳ ನಯಾಬಜಾರಿನ ಮುಹಮ್ಮದ್ ಮುಸಾಬ್ ( 20) ಮತ್ತು ಮಂಜೇಶ್ವರ ವಾಮಂಜೂರಿನ ಮುಹಮ್ಮದ್ ಅಮೀನ್…

ರಾಬರ್ಟ್ ರೊಸಾರಿಯೋ ಕ್ರೈಸ್ತ ಮುಖಂಡನಲ್ಲ: ಧರ್ಮಪ್ರಾಂತ್ಯ ಸ್ಪಷ್ಟನೆ

ತನ್ನನ್ನು ತಾನು ಕ್ಯಾಥೊಲಿಕ್ ನಾಯಕನೆಂದು ಬಿಂಬಿಸಿಕೊಳ್ಳುತ್ತಿರುವ ಮತ್ತು ಅಧಿಕೃತ ಅನುಮತಿಯಿಲ್ಲದೆ ವಿವಿಧ ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುತ್ತಿರುವ ರಾಬರ್ಟ್ ರೊಸಾರಿಯೊ ಅವರಿಂದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯವು ಅಂತರ ಕಾಯ್ದುಕೊಂಡಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಅಧಿಕೃತ ಪ್ರಕಟಣೆ ತಿಳಿಸಿದೆ. ಕ್ಯಾಥೊಲಿಕ್ ಸಮುದಾಯವನ್ನು ಪ್ರತಿನಿಧಿಸಲು ರಾಬರ್ಟ್…

error: Content is protected !!