ವಾಷಿಂಗ್ಟನ್‌: ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರು ಬೀಚ್ ಸಮೀಪ ಬರ್ಬರ ಹತ್ಯೆ

ವಾಷಿಂಗ್ಟನ್‌: ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರು ಅಮೆರಿಕದ ಈಕ್ವೆಡಾರ್‌ ಬೀಚ್‌ನಲ್ಲಿ ಭೀಕರ ಹತ್ಯೆಗೀಡಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ನಂತರ ಸಂತ್ರಸ್ತರು ಕಳುಹಿಸಿದ್ದ ಸಂದೇಶ ಬಹಿರಂಗವಾಗಿದೆ.

ಪ್ರವಾಸಕ್ಕೆಂದು ತೆರಳಿದ್ದ ಡೆನಿಸ್ ರೆಯ್ನಾ (19) ಯುಲಿಯಾನಾ ಮಾಸಿಯಾಸ್ (21) ಹಾಗೂ ನಯೆಲಿ ತಫಿಯಾ (22) ಯುವತಿಯರು ಏಪ್ರಿಲ್‌ 4ರಂದು ನಾಪತ್ತೆಯಾಗಿ, ಏಪ್ರಿಲ್‌ 5 ರಂದು ಹತ್ಯೆಗೀಡಾಗಿದ್ದರು.

ಆದ್ರೆ ಅದಕ್ಕೂ ಮುನ್ನ ತಮ್ಮ ಆಪ್ತರಿಗೆ ʻಇಲ್ಲೇನಾದರು ಘಟನೆ ಸಂಭವಿಸಬಹುದು ಅನ್ನಿಸುತ್ತಿದೆʼ ಅಂತಾ ಸಂದೇಶ ಕಳುಹಿಸಿರುವುದು ಇದೀಗ ಬೆಳಕಿಗೆ ಬಂದಿದೆ.

ಹತ್ಯೆಯಾವದರಲ್ಲಿ ಮಾಸಿಯಾಸ್ ಗಾಯಕಿಯಾಗಿದ್ದರು, ಮೃತ ನಯೆಲಿ ತಫಿಯಾ ತಾಯಿ ಹಾಗೂ ಡೆನಿಸ್‌ ರೆಯ್ನಾ ಕೃಷಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದರು.

ಮಾಹಿತಿ ಪ್ರಕಾರ, ಇದೇ ಏಪ್ರಿಲ್‌ 5 ರಂದು ಮೂವರು ಯುವತಿಯರನ್ನ ಚಿತ್ರಹಿಂಸೆ ನೀಡಿ ಯಾರೋ ಹತ್ಯೆ ಮಾಡಿದ್ದಾರೆ. ನಂತರ ಈಕ್ವೆಡಾರ್‌ನ ಕ್ವಿನಿಂಡೆ ಬಳಿಯ ಎಸ್ಮೆರಾಲ್ಡಾಸ್ ನದಿಯ ಬಳಿ ಹೂತುಹಾಕಿದ್ದಾರೆ.

ಈ ಸ್ಥಳದಲ್ಲಿ ನಾಯಿಯೊಂದು ದುರ್ವಾಸನೆ ಹೊರಬರುತ್ತಿರುವುದನ್ನು ಗುರುತಿಸಿದೆ. ಇದನ್ನು ಕಂಡ ಮೀನುಗಾರರ ಗುಂಪು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ

error: Content is protected !!