ವಿಟ್ಲ, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ,ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ ಸಮರ್ಪಕವಾಗಿ ದೊರೆತಾಗ ಹಳ್ಳಿಗಳು ಸ್ವಾವಲಂಬಿಗಳಾಗುತ್ತವೆ.ಮಾಣಿಲದಂತಹ ಹಿಂದುಳಿದ ಗಡಿ ಗ್ರಾಮಕ್ಕೆ ಕಳೆದ ಐದು ವರ್ಷಗಳಲ್ಲಿ ಸುಮಾರು ಆರು ಕೋಟಿ ಅನುದಾನ ಲಭಿಸಿದೆ. ಜನಪ್ರತಿನಿಧಿಗಳನ್ನು ಜಾಗೃತ ಗೊಳಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಮಾಣಿಲಗ್ರಾಮದ ವಿವಿಧ ಕಾಮಗಾರಿಗಳಿಗೆ ಚಾಲನೆ ಮತ್ತು ಉದ್ಘಾಟನೆ ಮಾಡಿ ಓಟೆಪಡ್ಪುವಿನಲ್ಲಿ ನಡೆದ ಗ್ರಾಮದ ಕಮಲ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಪುತ್ತೂರು ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್, ಮಾಣಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು,ಮಾಣಿಲ ಶಕ್ತಿ ಕೇಂದ್ರದ ಅಧ್ಯಕ್ಷ ಗೀತಾನಂದ ಶೆಟ್ಟಿ ಮಾಣಿಲಗುತ್ತು ಬೂತ್ ಅಧ್ಯಕ್ಷ ಲವಕುಮಾರ ಮಾಣಿಲಬೀಡು ವಿವಿಧ ಬೂತ್ ಸಮಿತಿ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಮುಂತಾದವರು ಉಪಸ್ಥಿತರಿದ್ದರು.ಶಕ್ತಿ ಕೇಂದ್ರದ  ಅಧ್ಯಕ್ಷರಾದ  ಗೀತಾ ನಂದ ಶೆಟ್ಟಿ ಸ್ವಾಗತಿಸಿದರು.ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಬ್ರಮಣ್ಯಧನ್ಯವಾದಅರ್ಪಿಸಿದರು.ಗೋಪಾಲಕೃಷ್ಣ ಭಟ್.ಆರ್.ನಿರೂಪಿಸಿದರು.

ಕಾಮಗಾರಿಗಳ ವಿವರ:–
  1.ಬಾಳೆಕಾನ-ಬಟ್ಯಡ್ಕ ರಸ್ತೆಯ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ.10 ಲಕ್ಷ.
2.ಬಾಳೆಕಾನ-ಬಟ್ಯಡ್ಕ ರಸ್ತೆ ಯ ಕಾಂಕ್ರೀಟೀಕರಣ ಉದ್ಘಾಟನೆ -15ಲಕ್ಷ.
3.ಪಕಳಕುಂಜ-ಮೈಂದಮೂಲೆ-ಬಟ್ಯಡ್ಕ ಕಾಂಕ್ರೀಟೀಕರಣ ಶಿಲಾನ್ಯಾಸ -10ಲಕ್ಷ.
4.ತಾರಿದಳ-ನಾಣೀಲು-ಕಕ್ವೆ ರಸ್ತೆ ಕಾಂಕ್ರೀಟೀಕರಣ ಶಿಲಾನ್ಯಾಸ. 10 ಲಕ್ಷ.
5.ಅರಳ್ತಡ್ಕ-ದೇಲಂತ್ತಡ್ಕ ರಸ್ತೆ ಕಾಂಕ್ರೀಟೀಕರಣ ಶಿಲಾನ್ಯಾಸ 20 ಲಕ್ಷ.
6.ಕೊಮ್ಮುಂಜೆ ವೆಂಕಪ್ಪ ನಾಯ್ಕ ರಸ್ತೆ- ಕಾಂಕ್ರೀಟೀಕರಣ ಉದ್ಘಾಟನೆ 15 ಲಕ್ಷ
7.ನೆಕ್ಕರೆ -ದೇವರಮೂಲೆ ರಸ್ತೆ – ಕಾಂಕ್ರೀಟಿಕರಣ ಶಿಲಾನ್ಯಾಸ – 20 ಲಕ್ಷ
8.ಮುರುವ-ಓಟೆಪಡ್ಪು-ಕೊಮ್ಮುಂಜೆ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆ -45ಲಕ್ಷ.
9.ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಮುರುವದಲ್ಲಿ.-1.91ಕೋಟಿ.
10.ಕೊಮ್ಮುಂಜೆ-ಕೂಟೇಲು ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ 10ಲಕ್ಷ.
11.ಮುರುವ ಮತ್ತು ಕಾಮಜಾಲು ಹಿಂದೂ ರುದ್ರ ಭೂಮಿಗೆ ಶಿಲಾನ್ಯಾಸ.

By admin

Leave a Reply

Your email address will not be published. Required fields are marked *

error: Content is protected !!