ಕಾಸರಗೋಡು, ಎರಡು ವರ್ಷಗಳ ಬಳಿಕ ಕೇರಳದಲ್ಲಿ ನಾಳೆ ಶಾಲೆಗಳು ಪುನರಾರಂಭಗೊಳ್ಳಲಿದೆ. ಕೊರೊನಾ ಕಾರಣದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟು ಬಳಿಕ ಕೆಲ ಸಮಯಗಳ ಕಾಲ ಶಾಲೆಗಳು ಪುನರಾರಂಭಗೊಂಡಿತ್ತು. ಆದರೆ, ಈ ಶೈಕ್ಷಣಿಕ ವರ್ಷದಿಂದ ಪೂರ್ಣಪ್ರಮಾಣದಲ್ಲಿ ಶಾಲೆಗಳು ಆರಂಭಗೊಳ್ಳಲಿವೆ.

ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಐದು ತಿಂಗಳ ಕಾಲ ಮಾತ್ರ ಕೋವಿಡ್ ಮಾನದಂಡ ದಂತೆ ಶಾಲೆಗಳು ಕಾರ್ಯಾಚರಿಸಿದ್ದವು. ಆನ್ ಲೈನ್ ಮೂಲಕ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಇದೀಗ ಶಾಲೆಗಳು ಶಾಲೆಯ ಮೆಟ್ಟಲೇರುತ್ತಿದ್ದಾರೆ. ಶಾಲೆ ಗಳಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಎಲ್ಲಾ ಶಾಲೆ ಗಳಲ್ಲಿ ಪ್ರವೇಶೋತ್ಸವ ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಿಗೆ ಈಗಾಗಲೇ ಶೇಕಡಾ 70ರಷ್ಟು ಪಠ್ಯ ಪುಸ್ತಕ ವಿತರಣೆ ಪೂರ್ಣಗೊಂಡಿದೆ. ಜೂನ್ 15 ರೊಳಗೆ ಎಲ್ಲಾ ಪಠ್ಯ ಪುಸ್ತಕ ವಿತರಣೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಪಠ್ಯ ಪುಸ್ತಕ ವಿತರಣೆ ವಿಳಂಬಗೊಂಡಿದ್ದು, ಮುದ್ರಣ ವಿಳಂಬ ಕಾರಣವಾಗಿದ್ದು, ಎರಡು ವಾರದೊಳಗೆ ಪೂರ್ಣ ಗೊಳಿಸುವ ನಿರೀಕ್ಷೆ ಶಿಕ್ಷಣ ಇಲಾಖೆ ಹೊಂದಿದೆ.

By admin

Leave a Reply

Your email address will not be published. Required fields are marked *

error: Content is protected !!