ನವದೆಹಲಿ: ಕರ್ನಾಟಕ ಸೇರಿದಂತೆ ಒಟ್ಟು 21 ರಾಜ್ಯಗಳಿಗೆ ಹಣಕಾಸು ಸಚಿವಾಲಯ 86,912 ಸರಕು ಮತ್ತು ಸೇವಾ ತೆರಿಗೆ (GST) ಪರಿಹಾರ ಹಣ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೂ ಭಾರೀ ಪರಿಹಾರ ಬಿಡುಗಡೆ ಮಾಡಲಾಗಿದೆ. 86,912 ಕೋಟಿ ರೂ.ಗಳಲ್ಲಿ 8,633 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ.

ಭಾರತದ ಜಿಡಿಪಿ ದರ ಏರಿಕೆಯಾಗಿದ್ದು, 2021-22 ಆರ್ಥಿಕ ವರ್ಷದ ಜಿಡಿಪಿ ದರ ಶೇ.8.7 ರಷ್ಟಿದೆ. ಕ್ವಾರ್ಟರ್ 4ರ ಜಿಡಿಪಿ ದರ ಶೇ.4 ರಷ್ಟಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.

ಮಹಾರಾಷ್ಟಕ್ಕೆ ಹೆಚ್ಚಿನ ಪರಿಹಾರ: ಒಟ್ಟಾರೆ ಜಿಎಸ್‌ಟಿ ಹಣದಲ್ಲಿ ಮಹಾರಾಷ್ಟ್ರಕ್ಕೆ 14,145 ಕೋಟಿ ರೂ. ಹೆಚ್ಚಿನ ಪರಿಹಾರ ನೀಡಲಾಗಿದೆ. ಇನ್ನುಳಿದಂತೆ ತಮಿಳುನಾಡಿಗೆ 9,602 ಕೋಟಿ, ಉತ್ತರ ಪ್ರದೇಶಕ್ಕೆ 8,874 ಕೋಟಿ ಹೊರತುಪಡಿಸಿದರೆ 3ನೇ ಸ್ಥಾನದಲ್ಲಿ ಕರ್ನಾಟಕ ಇದ್ದು 8,633 ಕೋಟಿ ರೂ. ಪರಿಹಾರ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!