ಕರಾವಳಿ ಜಿಲ್ಲೆಗಳಲ್ಲಿ ಐದು ದಿನ ಭಾರಿ ಮಳೆ ಆಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಸೆ. 28ರಂದು ಉತ್ತರ ಒಳನಾಡಿನ ಬೀದರ್, ಬೆಳಗಾವಿ, ವಿಜಯನಗರ ಜಿಲ್ಲೆಗಳಲ್ಲಿಯೂ ಹೆಚ್ಚಿನ ಮಳೆಯಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಒಂದಷ್ಟು ದಿನ ತೆರೆಮರೆಗೆ ಸರಿದಿದ್ದ ಮಳೆ ಸೆ 26ರಿಂದ ಮತ್ತೆ ಕರಾವಳಿ ಪ್ರದೇಶದಲ್ಲಿ ಆರ್ಭಟಿಸುತ್ತಿವೆ. ಸೆ. 27ರಂದು ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಸೆ. 28ರಂದು ಮತ್ತೆ ಅತ್ತಿತ್ತ ಹರಿದಾಡಿರುವ ಮುಂಗಾರು ಮಾರುತಗಳು, ಕರಾವಳಿ ಹಾಗೂ ಉತ್ತರ – ಮಧ್ಯ ಹಾಗೂ ದಕ್ಷಿಣ ಕರ್ನಾಟಕಗಳಲ್ಲಿ ಉತ್ತಮ ಮಳೆ ತರಲಿವೆ ಎಂದು ಉಪಗ್ರಹ ಆಧಾರಿತ ಚಿತ್ರಗಳು ಹೇಳಿವೆ.

ಬೆಳಗಾವಿಯ ಪಶ್ಚಿಮ ಭಾಗ, ಉತ್ತರ ಕನ್ನಡ, ಉಡುಪಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರಿನ ಪಶ್ಚಿಮ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ. ತಜ್ಞರ ಅಂದಾಜಿನ ಪ್ರಕಾರ, ಈ ಜಿಲ್ಲೆಗಳಲ್ಲಿ 90ರಿಂದ 250 ಮಿ.ಮೀ. ಮಳೆಯಾಗಬಹುದುರಲ್ಲೂ ವಿಶೇಷವಾಗಿ ಸಮುದ್ರ ತೀರದ ಜಿಲ್ಲೆಗಳಾದ ಕಾರವಾರ, ಉಡುಪಿ, ಮಂಗಳೂರಿಗೆ ಗರಿಷ್ಠ ಮಟ್ಟದಲ್ಲಿ (250 ಮಿ.ಮೀ. ವರೆಗೆ) ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಕರ್ನಾಟಕದಲ್ಲಿ ಮಳೆಯ ಅರ್ಭಟ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಹಾಗಾಗಿಯೂ, ಈ ಮಳೆಗಾಳದಲ್ಲಿ ಈವರೆಗೆ ವಾಡಿಕೆಗಿಂತ ಕಡಿಮೆ ಮಳೆ ಕರಾವಳಿ ಭಾಗದಲ್ಲಿ ಬಿದ್ದಿದ್ದು, ರೈತಾಪಿ ವರ್ಗ ಆತಂಕದಲ್ಲಿದೆ. ಮುಂದಿನ ಒಂದು ತಿಂಗಳು ನಿರಂತರ ಮಳೆ ಸುರಿದರೆ ಈ ಬಾರಿಯ ಬೇಸಿಗೆಯನ್ನು ತಕ್ಕಮಟ್ಟಿಗೆ ಸುಧಾರಿಸಬಹುದು. ಇಲ್ಲದಿದ್ದಲ್ಲಿ ಏಪ್ರಿಲ್‌ ಮೇ ತಿಂಗಳಿನಲ್ಲಿ ಕರಾವಳಿ ಭಾಗದಲ್ಲಿ ನಿರಿಗೆ ಹಾಹಾಕಾರ ಎಳಬಹುದು ಎಂಬ ಅಭಿಪ್ರಾಯ ಜನ ವ್ಯಕ್ತಪಡಿಸುತ್ತಿದ್ದಾರೆ

By admin

Leave a Reply

Your email address will not be published. Required fields are marked *

error: Content is protected !!