ಸೋಲೆ ಗೆಲುವಿನ ಸೋಪಾನ ಎನ್ನುವುದು ಎನ್ನುವ ಗಾದೆ ಮಾತು ಎಷ್ಟೋ ವಿದ್ಯಾರ್ಥಿಗಳು ಮರೆತುಬಿಟ್ಟಿರುತ್ತಾರೆ. ಜೀವನದಲ್ಲಿ ಉನ್ನತ ಗುರಿಯ ಬೆನ್ನೇರಿ ಹೊರಟಾಗ ಏಳುಬೀಳುಗಳನ್ನು ಅನುಭವಿಸುವುದು ಸಹಜ ಆದರೆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸುವುದು ನಿಜವಾದ ಜಾಣತನ. ಇದಕ್ಕೆ ತಕ್ಕ ನಿದರ್ಶನ ಐಎಎಸ್ ರುಕ್ಮಣಿ ರಿಯಾರ್.

ಸಾಮಾನ್ಯ ವಿದ್ಯಾರ್ಥಿನಿಯಾಗಿದ್ದ ರುಕ್ಮಣಿ ರಿಯಾರ್ ಅವರು 6ನೇ ತರಗತಿಯಲ್ಲಿ ಫೇಲ್ ಆಗಿದ್ದರು. ಆದರೆ ಅದಕ್ಕಾಗಿ ಕೊರಗುತ್ತಾ ಕಾಲಕಳೆಯದೆ ಅದನ್ನೇ ಸವಾಲಾಗಿ ಸ್ವೀಕರಿಸಿದವರು. ಹೀಗಾಗಿ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎರಡನೇ ರ್ಯಾಂಕ್ ಪಡೆದ ಹೆಗ್ಗಳಿಕೆ ರುಕ್ಮಣಿ ಅವರಿಗೆ ಸಲ್ಲುತ್ತದೆ.

ಪಂಜಾಬ್ ರಾಜ್ಯದಲ್ಲಿ ಹುಟ್ಟಿ ಬೆಳೆದ ಐಎಎಸ್ ರುಕ್ಮಣಿ ಪ್ರಸ್ತುತ ರಾಜಸ್ಥಾನದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದ ರುಕ್ಮಣಿಯವರಿಗೆ ಆ ಘಟನೆ ಜೀವನದ ದೊಡ್ಡ ಪಾಠ ಕಲಿಸಿತ್ತು. ನಿರುತ್ಸಾಹವನ್ನು ಬಿಟ್ಟು ಹೇಗೆ ನಿರಂತರವಾಗಿರಬೇಕು ಮತ್ತು ಜೀವನದಲ್ಲಿ ಎಂದಿಗೂ ಕೈಚೆಲ್ಲಬಾರದು ಎಂಬುವುದನ್ನು ಅರ್ಥಮಾಡಿಕೊಂಡರು.

ಶಾಲಾ ಶಿಕ್ಷಣದ ನಂತರ, ಅವರು ಅಮೃತಸರ್‌ದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನದಲ್ಲಿ ಪದವಿ ಪಡೆದರು. ನಂತರ, ಅವರು ಸ್ನಾತಕೋತ್ತರ ಪದವಿಗಾಗಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ಗೆ ಸೇರಿದರು.

ತನ್ನ ಸ್ನಾತಕೋತ್ತರ ಪದವಿಯ ನಂತರ, ಮೈಸೂರಿನ ಅಶೋಕ ಮತ್ತು ಮುಂಬೈನ ಅನ್ನಪೂರ್ಣ ಮಹಿಳಾ ಮಂಡಲದಂತಹ NGO ಗಳಲ್ಲಿ ರುಕ್ಮಣಿ ಇಂಟರ್ನ್‌ಶಿಪ್ ಮಾಡಿದರು. NGO ದೊಂದಿಗೆ ಕೆಲಸ ಮಾಡುವಾಗ, ರುಕ್ಮಣಿ ನಾಗರಿಕ ಸೇವೆಯತ್ತ ಆಕರ್ಷಿತರಾಗಿ ಈ ವೇಳೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಶುರು ಮಾಡಿದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಅದ್ಭುತ ಎರಡನೇ ರ್ಯಾಂಕ್ ಅನ್ನು ಪಡೆದರು. ಯಾವುದೇ ಕೊಚೀಂಗ್ ಇಲ್ಲದೆ ಸ್ವಯಂ-ಅಧ್ಯಯನದಿಂದ UPSC ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರೆ ಸ್ಥಿರತೆ ಮತ್ತು ಪ್ರಯತ್ನವಿದ್ದರೆ ತಮ್ಮ ಗುರಿ ಎಂದು ಸಾಬೀತುಪಡಿಸಿದರು.

By admin

Leave a Reply

Your email address will not be published. Required fields are marked *

error: Content is protected !!