ಮೈಸೂರು: ಸುಳ್ಳು ಹೇಳಿ ಬರೋಬ್ಬರಿ 15 ಮಹಿಳೆಯರನ್ನು ಮದುವೆಯಾದ ವ್ಯಕ್ತಿಯನ್ನು ಮೈಸೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನಿವಾಸಿಯಾಗಿರುವ 35 ವರ್ಷದ ಮಹೇಶ್ ಕೆಬಿ ನಾಯಕ್, ಮ್ಯಾಟ್ರಿಮೋನಿಯಲ್ ಸೈಟ್​ನಲ್ಲಿ (Matrimonial Site) ಮಹಿಳೆಯರನ್ನು ಸಂಪರ್ಕಿಸಿ ತಾನು ವೈದ್ಯ ಮತ್ತು ಇಂಜಿನಿಯರ್ ಅಂತ ಹೇಳಿಕೊಂಡು ಪರಿಚಯ ಮಾಡಿಕೊಂಡು ಸುಲಭವಾಗಿ ಬುಟ್ಟಿಗೆ ಬೀಳಿಸುತ್ತಿದ್ದನು.

ಅಷ್ಟೇ ಅಲ್ಲದೆ, ವಿಶೇಷವಾಗಿ ವಯಸ್ಸಾದ ಅವಿವಾಹಿತ ಮಹಿಳೆಯರು ಹಾಗೂ ವಿಚ್ಛೇದಿತ ಮಹಿಳೆಯರೇ ಈತನ ಟಾರ್ಗೆಟ್ ಆಗಿತ್ತು.

ಇತ್ತೀಚೆಗಷ್ಟೇ ಮದುವೆಯಾದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೈಸೂರಿನ ಕುವೆಂಪು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಶ್​ನನ್ನು ಬಂಧಿಸಿದ್ದಾರೆ.

ಆರೋಪಿಗೆ ಬೇರೆ ಬೇರೆ ಮಹಿಳೆಯರೊಂದಿಗೆ ನಾಲ್ವರು ಮಕ್ಕಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ 5ನೇ ತರಗತಿವರೆಗೆ ಓದಿದ್ದು, ವೈದ್ಯ, ಇಂಜಿನಿಯರ್ ಅಥವಾ ಸಿವಿಲ್ ಕಂಟ್ರಾಕ್ಟರ್‌ನಂತೆ ವರ್ತಿಸಿ ಮಹಿಳೆಯರನ್ನು ಮದುವೆಯಾಗಿದ್ದಾನೆ.

ಮಹೇಶ್​​ನನ್ನು ಬಂಧಿಸಿದ ಪೊಲೀಸರು ಆತನಿಂದ 2 ಲಕ್ಷ ರೂಪಾಯಿ ನಗದು, ಎರಡು ಕಾರುಗಳು, ಚಿನ್ನಾಭರಣಗಳು ಮತ್ತು ಏಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ತಾನು ವೈದ್ಯ ಎಂದು ಜನರನ್ನು ನಂಬಿಸಲು ತುಮಕೂರಿನಲ್ಲಿ ಮಹೇಶ್ ನಕಲಿ ಕ್ಲಿನಿಕ್ ಸ್ಥಾಪಿಸಿದ್ದ ಎನ್ನಲಾಗಿದೆ.

ಆದಾಗ್ಯೂ, ಇಂಗ್ಲಿಷ್‌ನಲ್ಲಿ ಮಾತನಾಡಲು ಹೆಣಗಾಡಿದ ನಂತರ ಅವನು ಮದುವೆಯಾಗಲು ಪ್ರಯತ್ನಿಸಿದ ಅನೇಕ ಮಹಿಳೆಯರು ಅನುಮಾನ ವ್ಯಕ್ತಪಡಿಸಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

By admin

Leave a Reply

Your email address will not be published. Required fields are marked *

error: Content is protected !!