ಬೆಂಗಳೂರು : ಮಕ್ಕಳು ಮೊಬೈಲ್ ಶಾಲೆಗೆ ತರುವಂತಿಲ್ಲ ಎಂಬ ನಿಯಮದ ಹಿನ್ನಲೆ ಶಾಲಾ ಸಿಬ್ಬಂದಿಗಳು ಪರಿಶೀಲನೆಗೆ ಒಳಪಡಿಸಿದಾಗ ವಿವಿಧ ಶಾಲೆಗಳಲ್ಲಿ ಹಲವು ಆಘಾತಕಾರಿ ವಸ್ತು ಸಿಕ್ಕಿರುವುದು ಕಂಡು ಸಿಬ್ಬಂದಿಗೆ ಆಘಾತವನ್ನುಂಟು ಮಾಡುವಂತೆ ಮಾಡಿದೆ. ಮೊಬೈಲ್‌ ಫೋನ್‌ ಅಷ್ಟೇ ಅಲ್ಲದೆ ನಗದು, ಕಾಂಡೋಮ್‌ಗಳು, ಗರ್ಭ ನಿರೋಧಕ ಮಾತ್ರೆಗಳು, ಲೈಟರ್‌, ಸಿಗರೇಟ್‌ಗಳು, ಮತ್ತೇರುವ ವೈಟ್‌ನರ್‌ಗಳು 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಂಡುಬಂದಿದ್ದು , ಇದು ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯನ್ನು ಆತಂಕಕ್ಕೆ ಕಾರಣವಾಗಿದೆ.

ತರಗತಿಗೆ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ ತರುತ್ತಾರೆ, ಮಕ್ಕಳ ಏಕಾಗ್ರತೆ ಮತ್ತು ಕಲಿಕೆಗೆ ಸ್ಮಾರ್ಟ್​ಫೋನ್​ಗಳಿಂದ ಭಂಗ ಬರುತ್ತಿದೆ ಎಂದು ಕೆಲವು ಶಿಕ್ಷಕರು ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಲು ಕೆಲವು ಶಾಲೆಗಳು ಆರಂಭಿಸಿವೆ. ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ಕೂಡ ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಹಾಗೂ ಹೊರವಲಯದ ಶೇ 80ರಷ್ಟು ಶಾಲೆಗಳಲ್ಲಿ ತಪಾಸಣೆ ನಡೆದಿದೆ.

ಯಾರ ಬ್ಯಾಗ್​ನಲ್ಲಿ ಏನೆಲ್ಲಾ ಸಿಕ್ಕಿದೆ ಎಂಬುದನ್ನು ಬಹಿರಂಗಪಡಿಸಿದರೆ ವಿದ್ಯಾರ್ಥಿಗಳಿಗೆ ಅವಮಾನ ಆಗಬಹುದು. ಅವರು ಮಾನಸಿಕವಾಗಿ ಕುಗ್ಗಬಹುದು ಎಂಬ ಕಾರಣಕ್ಕೆ ಆಪ್ತ ಸಮಾಲೋಚನೆಯ ಮೂಲಕ ವಿದ್ಯಾರ್ಥಿಗಳ ನಡವಳಿಕೆಗಳಲ್ಲಿ ಬದಲಾವಣೆ ತರಲು ಮುಂದಾಗಿವೆ. ಇಂಥ ವಿದ್ಯಾರ್ಥಿಗಳಿಗೆ 10 ದಿನಗಳ ರಜೆ ಕೊಡಲು ಶಾಲಾ ಆಡಳಿತ ಮಂಡಳಿಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ.

By admin

Leave a Reply

Your email address will not be published. Required fields are marked *

error: Content is protected !!