ಹುಬ್ಬಳ್ಳಿ: ಖಾಸಗಿ ಬಸ್‌ವೊಂದು ಟಯರ್ ಸ್ಫೋಟಗೊಂಡು ಏಕಾಏಕಿ ಹೊತ್ತಿ ಉರಿದುಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಗಿನ ಜಾವ ಹುಬ್ಬಳ್ಳಿ ಹೊರವಲಯದ ಬೈಪಾಸ್​ ರಸ್ತೆಯಲ್ಲಿ ನಡೆದಿದೆ. ಸುಖವಿಹಾರಿ ಖಾಸಗಿ ಬಸ್ ಮುಂಬೈನಿಂದ ಮಂಗಳೂರಿನಿಂದ ಕಡೆಗೆ ಚಲಿಸುತ್ತಿತ್ತು. ಟೈರ್ ಸ್ಫೋಟಗೊಂಡು ಏಕಾಏಕಿ ಬಸ್​​ಗೆ ಬೆಂಕಿ ತಗುಲಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಲರ್ಟ್ ಆದ ಡ್ರೈವರ್ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಘಟನೆಯಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರಿಂದ ಅಪಾರ ನಷ್ಟ ಉಂಟಾಗಿದೆ. ಬಸ್ಸು ಹೊತ್ತಿ ಸುಟ್ಟು ಭಸ್ಮವಾಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

By admin

Leave a Reply

Your email address will not be published. Required fields are marked *

error: Content is protected !!