Tag: bus

ಪೆರುವಾಯಿ ಸಮೀಪ ಚರಂಡಿಗೆ ಜಾರಿದ ಕೆ.ಎಸ್.ಆರ್.ಟಿ.ಸಿ. ಬಸ್

ಪೆರುವಾಯಿ, ಇಲ್ಲಿನ ಕೆದುವಾರು ಸಮೀಪ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಮರಿಗೆ ಜಾರಿದೆ. ವಿಟ್ಲದಿಂದ ಪಕಳಕುಂಜ ತೆರಳುವ ವೇಳೆ ಘಟನೆ ನಡೆದಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ.

ಕಾಸರಗೋಡು: ಇಂದು ಖಾಸಗಿ ಬಸ್ ಮುಷ್ಕರ – ಕೇರಳ ರಾಜ್ಯವ್ಯಾಪಿ ಸಂಚಾರ ಸ್ಥಗಿತ

ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಬಸ್ಸು ಮಾಲಕರು ಕೇರಳ ರಾಜ್ಯವ್ಯಾಪಿ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಖಾಸಗಿ ಬಸ್ಸು ಮುಷ್ಕರದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ ಕೆಎಸ್ಆರ್ ಟಿಸಿ ಬಸ್ಸುಗಳು ಎಂದಿನಂತೆ…

ಕರಾವಳಿಗೆ ತಟ್ಟಿಲ್ಲ ಬಂದ್ ಬಿಸಿ: ಜನಜೀವನ, ಬಸ್ ಸಂಚಾರ ಯಥಾಸ್ಥಿತಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ. ಬಂದ್ ನಿಂದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಕರಾವಳಿಯಲ್ಲಿ ಬಂದ್ ಗೆ ನೇರವಾಗಿ ಇಂಗಿತ…

ಸುರತ್ಕಲ್: ಖಾಸಗಿ ಬಸ್ ಚಾಲಕನ ಅಟ್ಟಹಾಸ: ರಸ್ತೆ ದಾಟಲು ನಿಲ್ಲಿಸಿದ್ದ ಬೈಕ್ ಗೆ ಬಸ್ ಡಿಕ್ಕಿ: ವಿದ್ಯಾರ್ಥಿಗಳಾದ ಶಾಹೀಲ್, ಅರಾಫತ್ ಗಂಭೀರ

ಡಿವೈಡರ್ ಬಳಿ ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ಇಲ್ಲಿನ ಹೊಸಬೆಟ್ಟು  ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಹಳೆಯಂಗಡಿ ನಿವಾಸಿ ಮೊಹಮ್ಮದ್ ಶಾಹೀಲ್(20) ಮತ್ತು ಪಕ್ಷಿಕೆರೆಯ ಅರಾಫತ್(19) ಎಂದು ಗುರುತಿಸಲಾಗಿದೆ.…

ಬಸ್ ನ ಸ್ಟೆಪ್’ನಲ್ಲಿ ನೇತಾಡುವವರೇ ಎಚ್ಚರ-ಮಂಗಳೂರಿನಲ್ಲಿ ನಡೆದಿದೆ ಭರ್ಜರಿ ಕಾರ್ಯಾಚರಣೆ

ಮಂಗಳೂರು, ಇಂದು ಬಸ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಫುಟ್‌ಬೋರ್ಡ್ ಪ್ರಯಾಣಕ್ಕೆ ಸಂಬಂಧಿಸಿದಂತೆ 123 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಂಡಕ್ಟರ್ ಸಾವಿಗೀಡಾದ ಬಳಿಕ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಬಸ್ ಗಳಿಗೆ ಬಾಗಿಲು ಕಡ್ಡಾಯಗೊಳಿಸಿದ್ದಾರೆ. ಈ ನಡುವೆ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಫುಟ್‌ಬೋರ್ಡ್‌ನಲ್ಲಿ ನಿಂತವರ ವಿರುದ್ಧ…

ಖಾಸಗಿ ಬಸ್‌ಗೆ ಡೋರ್ ಕ್ಲೋಸ್ ಮಾಡೋದು ಕಡ್ಡಾಯ-ಯಾರೂ ಕೂಡ ನೇತಾಡುವಂತಿಲ್ಲ

ನಂತೂರಿನಲ್ಲಿ ಖಾಸಗಿ ಬಸ್ ನಿರ್ವಾಹಕ ನಿಧನ ಹಿನ್ನಲೆಎಲ್ಲಾ ಖಾಸಗಿ ಬಸ್‌ಗಳಿಗೆ ಇನ್ನು ಡೋರ್ ಕಡ್ಡಾಯಕಂಡಕ್ಟರ್ ಸೇರಿ ಯಾರು ಕೂಡಾ ಫುಟ್‌ಬೋರ್ಡ್‌ನಲ್ಲಿ ನಿಲ್ಲುವಂತಿಲ್ಲಸಮಯ ಫಾಲೋ ಮಾಡಬೇಡಿ, ಸೇಫ್ಟಿ ಮುಖ್ಯ ಎಂದುಮಂಗಳೂರು ಪೊಲೀಸ್ ಕಮೀಷನರ್ ಕುಲ್‌ದೀಪ್ ಕುಮಾರ್ ಜೈನ್ ಆದೇಶ ನೀಡಿದ್ದಾರೆ.

KSRTC ಬಸ್ ಚಾಲಕರಾಗಲು ದ.ಕ. ಉಡುಪಿ ಜಿಲ್ಲೆಯವರಿಗೆ ಸುವರ್ಣಾವಕಾಶ: ಗುತ್ತಿಗೆ ಆಧಾರದಲ್ಲಿ ನಡೆಯಲಿದೆ ನೇಮಕಾತಿ

ರಾಜ್ಯ ಸರಕಾರದ ಸಾರಿಗೆ ನಿಗಮದ ಬಸ್ ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕಗೊಳಿಸುವ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದ್ದು, ನೇರ ನೇಮಕ ಪ್ರಕ್ರಿಯೆ ನಡೆಯಲಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ ತಿಂಗಳ…

ಅಪಘಾತದ ರಭಸಕ್ಕೆ ಬಸ್ ಮೇಲೆ ಉರುಳಿದ ಮರ:ಪ್ರಯಾಣಿಕರು ಪಾರು

ಎನ್.ಆರ್.ಪುರ ತಾಲೂಕಿನ ಸೀಕೆ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್ಸೊಂದು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮೇಲೆ ಮರ ಬಿದ್ದ ಘಟನೆ ನಡೆದಿದೆ. ಎನ್.ಆರ್.ಪುರದಿಂದ ಬಸ್ ಮೈಸೂರಿಗೆ ಹೊರಟಿದ್ದು, ಈ ವೇಳೆ ಸುಮಾರು ಹದಿನೈದು ಕಿಲೋಮೀಟರ್…

ಮಂಗಳೂರು: ಉಚಿತ ಪ್ರಯಾಣ ದುರುಪಯೋಗ ಆರೋಪ: ಗುರುತಿನ ಚೀಟಿ ಕಡ್ಡಾಯವೆಂದ ಇಲಾಖೆ

ಸರಕಾರ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ರಾಜ್ಯದ ನಿವಾಸಿಗಳಾಗಿರುವುದಕ್ಕೆ ಸಾಕ್ಷಿಯಾಗಿ ಗುರುತಿನ ಚೀಟಿ ಕಡ್ಡಾಯವಾಗಿ ತೋರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ…

ಪುತ್ತೂರು: ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಮುಸ್ಲಿಂ ಮಹಿಳೆಗೆ ಅಪರಿಚಿತನಿಂದ ಕಿರುಕುಳ: ಪ್ರಕರಣ ದಾಖಲು

ಪುತ್ತೂರು : ಯುವತಿಯೊಬ್ಬಳು ತನ್ನ ತಾಯಿಯೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಮೈ ಕೈ ಮುಟ್ಟಿ ಕಿರುಕುಳ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 20…

error: Content is protected !!