ಬಂಟ್ವಾಳ: ವಿಟ್ಲ ಸಮೀಪದ ಪೆರುವಾಯಿ ನಿವಾಸಿ, ಟಿ.ವಿ9 ಮಂಗಳೂರು ಕ್ಯಾಮಾರ ಮ್ಯಾನ್ ವಿಲ್ಪ್ರೆಡ್ ಡಿಸೋಜಾ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶ್ರೀ ಕೆ. ವಿಲ್ಫ್ರೆಡ್ ಡಿಸೋಜ (Tv9 ವೀಡಿಯೊ ಜರ್ನಲಿಸ್ಟ್) ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದವರು. ಸುಮಾರು 25 ವರ್ಷಗಳಿಂದ ಟಿ.ವಿ. ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

1997-98 ರಲ್ಲಿ ಟಿವಿ ಮಾಧ್ಯಮಕ್ಕೆ ಪ್ರವೇಶ
1997-2000 ರಲ್ಲಿ ನ್ಯೂ ಮ್ಯಾಂಗಳೂರ್ ಚಾನೆಲ್ ನಲ್ಲಿ 3 ವರ್ಷಗಳ ಸೇವೆ
2000-2003 ರವರೆಗೆ ಸಿಟಿ ಕೇಬಲ್ ನಲ್ಲಿ 3 ವರ್ಷಗಳ ಸೇವೆ
2003–2005 ರ ವರೆಗೆ ಉದಯ ಟಿವಿ ಯಲ್ಲಿ 2 ವರ್ಷಗಳ ಸೇವೆ
2005- 2006 ರ ವರೆಗೆ ದೂರದರ್ಶನ ದಲ್ಲಿ 1 ವರ್ಷ ಸೇವೆ
2006 ಅಗಸ್ಟ್ ನಿಂದ ಇಂದಿನವರೆಗೆ Tv9 ಮಾಧ್ಯಮದಲ್ಲಿ 16 ವರ್ಷಗಳ ಸೇವೆ

  1. 2000-2022 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪರ್ತಕರ್ತರ ಸಂಘದ ಸದಸ್ಯರು
  2. 2011-2014 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪರ್ತಕರ್ತರ ಸಂಘದ ಕಾರ್ಯದರ್ಶಿ
  3. 2014-2018 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪರ್ತಕರ್ತರ ಸಂಘದ ಉಪಾಧ್ಯಕ್ಷರು
  4. 2015-2022 ರ ವರೆಗೆ ಮಂಗಳೂರು ಪ್ರೆಸ್ ಕ್ಲಬ್ ನ ಸದಸ್ಯರು
  5. 2019-2022 ರ ವರೆಗೆ ಮಂಗಳೂರು ಪ್ರೆಸ್ ಕ್ಲಬ್ ನ ಕಾರ್ಯಕಾರಿಣಿ ಸಮಿತಿ ಸದಸ್ಯರು
    ಸಮಾಜ ಸೇವೆ :
  6. ಮಂಗಳೂರಿನ ಕದ್ರಿಯ ಮುಂದಾಣ ನಿವಾಸಿ ಶ್ರೀಮತಿ ಪ್ರಮೀಳ ಇವರು ವಿಧವೆಯಾಗಿದ್ದು, ಎರಡು ಹೆಣ್ಣು ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಬಹಳ ಕಷ್ಟವಾಗಿರುವುದರಿಂದ, ಪಾಳು ಬೀಳುವ ಸ್ಥಿತಿಯಲ್ಲಿದ್ದ ಮನೆಯನ್ನು ದುರಸ್ಥಿಗೊಳಿಸಲು ಸಾಧ್ಯವಿಲ್ಲದ ಕಾರಣ ಮಂಜುನಾಥ ಫ್ರೆಂಡ್ಸ್ ಸರ್ಕಲ್ ಕದ್ರಿ ಇದರ ವತಿಯಿಂದ ಶ್ರಿ ಕೆ. ವಿಲ್ಫ್ರೆಡ್ ಡಿಸೋಜ ರವರ ನೇತೃತ್ವದಲ್ಲಿ 2014 ರಲ್ಲಿ ಶ್ರೀಮತಿ ಪ್ರಮೀಳ ಇವರಿಗೆ ಹೊಸ ಮನೆ ಕಟ್ಟಿ ಹಸ್ತಾಂತರಿಸಿದರು.
  7. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಮುಕ್ಢಾಪು ನಿವಾಸಿ ಶ್ರೀಮತಿ ಜುಲಿಯಾನ ಡಿಸೋಜ ಇವರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಈ ಬಡ ಕುಟುಂಬಕ್ಕೆ ಡೆನಿಮ್ ಗೈಸ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಶ್ರೀ ಕೆ. ವಿಲ್ಫ್ರೆಡ್ ಡಿಸೋಜ ರವರ ನೇತೃತ್ವದಲ್ಲಿ 2018 ರಲ್ಲಿ ಹೊಸ ಮನೆ ಕಟ್ಟಿ ಹಸ್ತಾಂತರಿಸಿದರು.
    3.ಗ್ರಾಮದಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅವರನ್ನು ಸನ್ಮಾನ ಮಾಡಿ ಹುರಿದುಂಬಿಸುವ ಕೆಲಸ ಮಾಡಿದ್ದಾರೆ.
  8. ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಸರಕಾರಿ ಬಸ್ ವ್ಯವಸ್ಥೆಯನ್ನು ಒದಗಿಸುವಲ್ಲಿ ಶ್ರಮವಹಿಸಿದರು.
  9. ಗ್ರಾಮದ ರಸ್ತೆಗಳನ್ನು ದುರಸ್ಥಿಗೊಳಿಸಲು ಸರಕಾರಕ್ಕೆ ಒತ್ತಡ ಹಾಕಿ ದುರಸ್ಥಿಗೊಳ್ಳುವಂತೆ ಮಾಡಿದರು.
  10. ಗ್ರಾಮದಲ್ಲಿ ಸರ್ವಧರ್ಮ ಸೌಹಾರ್ದ ಕೂಟದ ಆಯೋಜನೆಯನ್ನು ಮಾಡಿದರು.
    ರಾಜ್ಯ ಪ್ರಶಸ್ತಿ: ಅತ್ಯುತ್ತಮ ವೀಡಿಯೋ ಚಿತ್ರೀಕರಣಕ್ಕೆ ಕಲ್ಕುರ ಪ್ರತಿಷ್ಠಾನದಿಂದ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸಂದಿದೆ.

By admin

Leave a Reply

Your email address will not be published. Required fields are marked *

error: Content is protected !!