ಕಾಲೇಜಿಗೆ ಓದಲು ಹೋದ ಅನ್ಯಕೋಮಿನ ಯುವಕ – ಯುವತಿ ಪ್ರೀತಿ ಮಾಡಿ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಮಂಗಳವಾರ ಸುಳ್ಯದಲ್ಲಿ ನಡೆದಿದೆ .
ಓದುತ್ತಿದ್ದ ಅನ್ಯಕೋಮಿನ ಯುವಕ – ಯುವತಿ ಕದ್ದು ಮುಚ್ಚಿ ಲಡವಿಯಲ್ಲಿ ತೊಡಗಿದ್ದರು . ಈ ವಿಚಾರ ಕಾಲೇಜಿನಾದ್ಯಂತ ಹರಡಿತ್ತು . ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಇತರ ಕೆಲವರು ಅವರನ್ನು ಮಂಗಳವಾದ ಬೆಳಗ್ಗೆ ಹಿಡಿದಿದ್ದಾರೆ. ಮಾತ್ರವಲ್ಲ ಹುಡುಗಿಯ ಎದುರು ಹುಡುಗನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆನ್ನಿನ ಚರ್ಮ ಜಾರುವಂತೆ ಬಾರಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಯುವತಿ ತಾನು ಪ್ರೀತಿ ಮಾಡುತ್ತಿದ್ದು ಈ ಬಗ್ಗೆ ಪ್ರಶ್ನೆ ಮಾಡಲು ನೀವು ಯಾರು ? ನೀವು ನನಗೆ ಅನ್ನ ಕೊಟ್ಟಿದ್ದೀರಾ ? ನನಗೆ ಯಾರನ್ನು ಬೇಕಾದರೂ ಮದುವೆಯಾಗುವ ಹಕ್ಕಿದೆ ಎಂದು ಪ್ರಶ್ನಿಸಿದವರಲ್ಲಿ ಕೇಳಿದ್ದಾಳೆ ಎನ್ನಲಾಗಿದೆ . ಸದ್ಯ ಈ ವಿಚಾರ ಸುಳ್ಯದಾದ್ಯಂತ ವೈರಲ್ ಆಗುತ್ತಿದೆ. ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!