ಬೆಂಗಳೂರು, ಇಂದು ಕೃಷಿ ಹವಾಮಾನ ಶಾಸ್ತ್ರ ಕ್ಷೇತ್ರದ ಪದವೀಧರರಿಗೆ ಬೇಡಿಕೆ ಹೆಚ್ಚುತ್ತಿದೆ. ಐಎಂಡಿ, ನವದೆಹಲಿಯ ಐಸಿಎಆರ್
ಮೂಲಕ ದೇಶದ ಎಲ್ಲ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದಲ್ಲಿ ಕೃಷಿ ಹವಾಮಾನ ಶಾಸ್ತ್ರದ ಸ್ನಾತಕೋತ್ತರ ಪದವೀಧರ
ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ದೇಶಾದ್ಯಂತ ಸುಮಾರು 130 ಕೆವಿಕೆಗಳಿವೆ. ಮೊದಲ ಹಂತದಲ್ಲಿ ಈಗಾಗಲೇ
200 ಪದವೀಧರರನ್ನು ಕೆವಿಕೆಗಳಲ್ಲಿ ನೇಮಿಸಿಕೊಳ್ಳಲಾಗಿದೆ. ಮುಂಬರುವ 2-3 ವರ್ಷಗಳಲ್ಲಿ ಎಲ್ಲ ಕೆವಿಕೆಗಳಲ್ಲಿ ಹವಾಮಾನ
ಶಾಸ್ತ್ರತಜ್ಞರ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ. ಇದರ ಹೊರತಾಗಿ ದೇಶಾದ್ಯಂತ ಇರುವ ಕೃಷಿ ವಿಶ್ವವಿದ್ಯಾಲಯಗಳು
ಕೃಷಿ ಹವಾಮಾನ ಕ್ಷೇತ್ರದಲ್ಲಿ ಪರಿಣಿತ ಪದವೀಧರರನ್ನು ಅಧ್ಯಾಪಕರಾಗಿ ನೇಮಿಸಿಕೊಳ್ಳುವು ನಿರೀಕ್ಷೆಯಿದೆ.
ಇಂದು ರೈತರು ಬೆಳೆಗಳಿಗೆ ವಿಮೆ ಮಾಡಿಸಲು ಮೊದಲಿಗಿಂತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಬೆಳೆ ವಿಮೆ ವ್ಯವಹಾರ ಕ್ಷೇತ್ರಕ್ಕೆ
ಇಂದು ಹೆಚ್ಚು ಹೆಚ್ಚು ಖಾಸಗಿ ಏಜೆನ್ಸಿಗಳು ಬರುತ್ತಿವೆ. ಈ ಕಂಪನಿಗಳಿಗೆ ವೈಜ್ಞಾನಿಕವಾಗಿ ಹಾಗೂ ಸರಿಯಾದ ಬೆಳೆ ನಷ್ಟ ಮತ್ತು
ಪರಿಹಾರ ಅಂದಾಜು ಮಾಡಲು ಮತ್ತು ನಿರ್ಣಯಿಸಲು ಹವಾಮಾನ ಶಾಸ್ತ್ರ ತಜ್ಞ ಪದವೀಧರರ ಅಗತ್ಯವಿದೆ.

By admin

Leave a Reply

Your email address will not be published. Required fields are marked *

error: Content is protected !!