ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯ ಪಯಣ ವಿಶ್ವಕಪ್‌ನಲ್ಲಿ ಅಷ್ಟೇನೂ ಚೆನ್ನಾಗಿರಲಿಲ್ಲ. ಆರಂಭಿಕ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಆಸ್ಟ್ರೇಲಿಯ ವಿಶ್ವಕಪ್‌ನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಅನುಮಾನವಿತ್ತು. ಆದರೆ ಲೀಗ್ ಮುಗಿಸಿದ ಆಸ್ಟ್ರೇಲಿಯದ ವಿಶ್ವಕಪ್ ಪಯಣ ಕ್ರಿಕೆಟ್ ಜಗತ್ತೇ ಅಚ್ಚರಿಯನ್ನುಂಟು ಮಾಡಿತು.
ಅ.8ರಂದು ಭಾರತದ ವಿರುದ್ಧ ವಿಶ್ವಕಪ್ ಪಯಣ ಆರಂಭಿಸಿದ ಆಸ್ಟ್ರೇಲಿಯ 6 ವಿಕೆಟ್ ಗಳಿಂದ ಸೋಲೊಪ್ಪಿಕೊಂಡಿತು. ಬಳಿಕ ಅ.12ಕ್ಕೆ ದಕ್ಷಿಣ ಆಫ್ರಿಕ ವಿರುದ್ಧ 134 ರನ್ ಗೆ ಸೋತಿತು. ಆಗಷ್ಟೇ ಭಾರತ ವಿರುದ್ಧ ಸರಣಿ ಮುಗಿಸಿದ್ದ ಆಸ್ಟ್ರೇಲಿಯ ತಂಡದ ಕಳಪೆ ಪ್ರದರ್ಶನ ಅದು ಮುಂದಿನ ಹಂತಕ್ಕೆ ತೇರ್ಗಡೆಯಾಗುವುದೇ ಎನ್ನುವ ಪ್ರಶ್ನೆ ಹುಟ್ಟುಹಾಕಿತ್ತು. ಬಳಿಕ ಅ.16ರಂದು ಶ್ರೀಲಂಕ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದ ಆಸ್ಟ್ರೇಲಿಯ ವಿಶ್ವಕಪ್‌ನಲ್ಲಿ ಫೀನಿಕ್ಸ್ ಹಕ್ಕಿಯಂತೆ ಎದ್ದು ನಿಂತಿತು. ಬಳಿಕ ಒಂದೇ ಒಂದು ಪಂದ್ಯ ಸೋಲದ, ನಿಧಾನವಾಗಿ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಆಸ್ಟ್ರೇಲಿಯಾ ಹಂತ ಹಂತವಾಗಿ ವಿಶ್ವಕಪ್ ನಲ್ಲಿ ತಾನೂ ಬಲಿಷ್ಟ ತಂಡ ಎಂದು ತೋರಿಸಿಕೊಟ್ಟಿತು

By admin

Leave a Reply

Your email address will not be published. Required fields are marked *

error: Content is protected !!