ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಳಿಗಾಲದ ಋತುವಿನ ವೇಳಾಪಟ್ಟಿಯು ಅಕ್ಟೋಬರ್ 29 ರಿಂದ ಆರಂಭವಾಗುತ್ತಿದ್ದು ಈ ಅವಧಿಯಲ್ಲಿ ವಿಮಾನಗಳ ಹಾರಾಟದಲ್ಲಿ ಹೆಚ್ಚಳವಾಗಲಿದೆ.

ಅ. 29ರಿಂದ ನ.15ರ ಅವಧಿಯಲ್ಲಿ ವಿಮಾನಗಳ ಹಾರಾಟದಲ್ಲಿ ಶೇ. 26ರಷ್ಟು ವಿಮಾನಗಳ ಹಾರಾಟ ಹೆಚ್ಚಾಗಲಿದೆ. ಈ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ಚಳಿಗಾಲದ ವೇಳಾಪಟ್ಟಿಯನ್ನು ಹಂತ ಹಂತವಾಗಿ ಹೆಚ್ಚಿಸುತ್ತಿವೆ. ಪ್ರಸ್ತುತ 136 ವಿಮಾನಗಳು ಹಾರಾಟ ನಡೆಸುತ್ತಿದ್ದು ಈ ಸಂಖ್ಯೆ 172ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದೆ. ಚಳಿಗಾಲದ ಋತು ಮಾರ್ಚ್ 30, 2024 ರಂದು ಕೊನೆಗೊಳ್ಳಲಿದೆ.

ನ. 15ರಿಂದ ಬೆಂಗಳೂರಿಗೆ ನಿತ್ಯ ಎರಡು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸಂಚರಿಸಲಿದ್ದು, ಈ ಪೈಕಿ ಒಂದು ವಿಮಾನ ಕಣ್ಣೂರು/ತಿರುವನಂತಪುರಕ್ಕೆ ಸಂಪರ್ಕ ಕಲ್ಪಿಸಲಿದೆ. ಇಂಡಿಗೊ ಸಂಸ್ಥೆಯೂ ನ. 3ರಿಂದ ಮುಂಬಯಿಗೆ ನಾಲ್ಕನೇ ದೈನಂದಿನ ವಿಮಾನ ಯಾನವನ್ನು ಪ್ರಾರಂಭಿಸಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು 5 ಇಂಡಿಗೋ ವಿಮಾನಗಳು ಹಾರಾಟ ನಡೆಸಲಿವೆ. ಚೆನ್ನೈಗೆ ದೈನಂದಿನ ವಿಮಾನದ ಜತೆಗೆ ವಾರಕ್ಕೆ ನಾಲ್ಕು ಹೆಚ್ಚುವರಿ ವಿಮಾನಗಳನ್ನು ಕಲ್ಪಿಸಲಾಗುತ್ತಿದೆ. ಮುಂದಿನ ವರ್ಷದ ಮಾರ್ಚ್ ಒಳಗಾಗಿ ಇಂಡಿಗೋ ವಿಮಾನವು ಮಂಗಳೂರಿನಿಂದ ಪಾಟ್ನಾ, ರಾಂಚಿ, ಕೋಲ್ಕತಾ ನಡುವೆ ವಿಮಾನಯಾನ ಆರಂಭಿಸಲಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ಅಂತರಾಷ್ಟ್ರೀಯವಾಗಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುಬೈಗೆ ( ದಿನನಿತ್ಯ 2 ), ಅಬುಧಾಬಿಗೆ (ವಾರದಲ್ಲಿ4) ಕಾರ್ಯನಿರ್ವಹಿಸುತ್ತದೆ; ದಮನ್ ಮತ್ತು ಮಸ್ಕತ್ (ವಾರದಲ್ಲಿ3), ದೋಹಾ ಮತ್ತು ಬಹ್ರೇನ್ (ವಾರದಲ್ಲಿ2) ಮತ್ತು ಕುವೈತ್ (ವಾರದಲ್ಲಿ1). ಇಂಡಿಗೋ ದುಬೈಗೆ ವಾರದಲ್ಲಿ 4 ಬಾರಿ ವಿಮಾನಗಳನ್ನು ಹಾರಾಟ ನಿರ್ವಹಿಸುತ್ತಿದ್ದು, ಸ್ಪೈಸ್ ಜೆಟ್ ಕೂಡ ದುಬೈ ವಲಯದ ಮೇಲೆ ಕಣ್ಣಿಟ್ಟಿದೆ.

By admin

Leave a Reply

Your email address will not be published. Required fields are marked *

error: Content is protected !!