ಕೋವಿಡ್ ಸಂದರ್ಭ ಜಾತಿ, ಮತ ಭೇದ ಮರೆತು ಹತ್ತು ಸಾವಿರಕ್ಕೂ ಅಧಿಕ ಅರ್ಹ ಕುಟುಂಬಗಳಿಗೆ ಅಕ್ಕಿ ವಿತರಣೆ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಹಿತ ಅನೇಕ ಸಮಾಜ ಸೇವೆಯನ್ನು ಗುರುತಿಸಿ ಭಾರತೀಯ ಕೌನಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಹಾಗೂ ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್ ಕೊಲಂಬೊ ಮತ್ತು ಹೈ ಕಮಿಷನ್ ಆಫ್ ಇಂಡಿಯಾ ಕೊಲಂಬೊ ಕೊಡಮಾಡುವ ಏಷ್ಯಾ ಅಚೀವರ್ಸ್ ಅವಾರ್ಡ್ ಗೆ ಡಾ. ಅಬ್ದುಲ್ ಶಕೀಲ್ ಆಯ್ಕೆಯಾಗಿದ್ದಾರೆ.

ಅ.25ರಂದು ಶ್ರೀಲಂಕಾದ ಯುನಿವರ್ಸಿಟಿ ಆಫ್ ವಿಶುವಲ್ ಆ್ಯಂಡ್ ಫರ್ಪಾಮಿಂಗ್ ಆರ್ಟ್ಸ್ ಸಭಾಂಗಣದಲ್ಲಿ ಅಯೋಜಿ ಸಲಾದ 40ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಶ್ರೀಲಂಕಾ ಸರಕಾರದ ಧಾರ್ಮಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ವಿದುರ ವಿಕ್ರೆಮನಾಯಕೆ ಹಾಗೂ ಶ್ರೀ ಲಂಕಾ ಸರಕಾರದ ಉನ್ನತ ಶಿಕ್ಷಣ ಸಚಿವ ಸುರೆನಾ ರಾಘವನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ

ಉಳ್ಳಾಲ ತಾಲೂಕಿನ ದೇರಳಕಟ್ಟೆ ರೆಂಜಾಡಿ ನಿವಾಸಿ ಅಬ್ದುಲ್ ಖಾದರ್ ಹರೇಕಳ ಮತ್ತು ಮೈಮುನಾ ದಂಪತಿಯ ಪುತ್ರನಾದ ಡಾ. ಅಬ್ದುಲ್ ಶಕೀಲ್ ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂಎಂಎ ಜಾಹೀರಾತು ಮತ್ತು ಒಳಾಂಗಣ ಸೌದಿ ಅರೇಬಿಯಾ, ದುಬೈ ಇದರ ವ್ಯವಸ್ಥಾಪಕ ನಿರ್ದೇಶಕ, ಗ್ರೇ ಲೈನ್ ಇಂಟಿರಿಯರ್ ಮತ್ತು ಜಾಹೀರಾತು (ಯುಎಇ) ಇದರ ವ್ಯವಸ್ಥಾಪಕ ನಿರ್ದೇಶಕ, ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೀಟ್ ಇಂಡಿಯಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ. ಅಬ್ದುಲ್ ಶಕೀಲ್ ಅನಿವಾಸಿ ಭಾರತೀಯ ಉದ್ಯಮಿ. ತನ್ನ ಉದ್ಯಮದ ಲಾಭ ಶೇ.50ರಷ್ಟು ಸಮಾಜ ಮುಖಿ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದಾರೆ. ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.

ಕೋರೋನ ಸಂದರ್ಭ ಜೀವ ಹಂಗು ತೊರೆದು ದುಡಿದ ವೈದ್ಯರಿಗೆ, ಸಹಾಯಕರಿಗೆ, ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿದ್ದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ ಮತ್ತು ಇತರ ಚಟುವಟಿಕೆಗಳಿಗೆ ಆರ್ಥಿಕವಾಗಿ ಹಿಂದುಳಿದಿರುವ ಯುವಕರಿಗೆ ಬೆಂಬಲ ನೀಡುತ್ತಿರುವ ಡಾ. ಅಬ್ದುಲ್ ಶಕೀಲ್ ನೂರಾರು ಮಕ್ಕಳ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡಿದ್ದರು. ಅನೇಕರ ಮಕ್ಕಳ ದತ್ತು ಸ್ವೀಕರಿಸಿದ್ದರು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚಗಳನ್ನು ಭರಿಸಿ ಅವರ ಪೂರ್ಣ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡಿದ್ದರು. ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಟ್ಟಿದ್ದರು. ವಿದೇಶಗಳಲ್ಲಿ ಸಮಸ್ಯೆಗೆ ಸಿಲುಕಿರುವ ಅನೇಕರಿಗೆ ಧನ ಸಹಾಯ ನೀಡಿದ್ದರು. ನೂರಾರು ಮಂದಿಗೆ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಗಳನ್ನು ಒದಗಿಸಿದ್ದಾರೆ

By admin

Leave a Reply

Your email address will not be published. Required fields are marked *

error: Content is protected !!