ನಮ್ಮಲ್ಲಿರುವ ದುರ್ಗುಣಗಳನ್ನು ತ್ಯಜಿಸಿ, ಉತ್ತಮ ಮನೋಭವನೆಗಳನ್ನು ಬೆಳೆಸಿ ಸತ್ಕರ್ಮ, ದೇವರ ದ್ಯಾನದ ಮೂಲಕ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಪಾಲಿಸಿ ಮೌಲ್ಯಯುತ ಜೀವನ ಸಾಗಿಸಬೇಕು ಎಂದು ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಜ.೨೨ ರಿಂದ ಜ. ೨೭ ರವರೆಗೆ ನಡೆಯಲಿರುವ ಸುಳ್ಯಮೆ ಪೊಯ್ಯತಬೈಲ್ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ದೇವತಾರಾಧನೆ, ದೈವಾರಾಧನೆ ಈ ನೆಲದಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದ ಸಂಪ್ರದಾಯ. ಆದರೆ ದೈವಗಳಿಗೆ ಮದ್ಯ ಇಡುವ ಸಂಪ್ರದಾಯವನ್ನು ನಾವು ನಿಲ್ಲಿಸಬೇಕು. ಆನೇಕ ಕಡೆ ಅಮಲು ಪದಾರ್ಥ ಇಡುವ ಸಂಪ್ರದಾಯವನ್ನು ನಾವು ನಿಲ್ಲಿಸಬೇಕು ಆನೇಕ ಕಡೆ ಅಮಲು ಪದಾರ್ಥ ಇಡುವ ಸಂಪ್ರದಾಯವನ್ನು ನಾನೇ ನಿಲ್ಲಿಸಿದ್ದೇನೆ. ಈ ವಿಚಾರ್‍ದಲ್ಲಿ ನಾನು ಯಾವುದೇ ತರ್ಕಕ್ಕೂ ಸಿದ್ದನಿದ್ದೇನೆ ಎಂದು ಸ್ವಾಮೀಜಿ ಹೇಳಿದರು. ಕಾರ್ಯಕ್ರಮದಲ್ಲಿ ಕಣಂತೂರು ಕ್ಷೇತ್ರದ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ , ಕಣಂತೂರಿನ ಅನುವಂಶಿಕ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯರು, ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷ, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶಂಕರ ಮೋಹನ ಪೂಂಜ, ಭಾರತಿ ಸತೀಶ್, ಟಿ.ಜಿ ರಾಜಾರಾಮ್ ಭಟ್, ಸಂತೋಷ್ ಕುಮಾರ್ ರೈ, ಜಗದೀಶ್ ಆಳ್ವ, ಕೃಷ್ಣಪ್ಪ ಪೂಜಾರಿ ಮತ್ತಿತ್ತರು ಉಪಸ್ಥಿತರಿದ್ದರು.

By admin

Leave a Reply

Your email address will not be published. Required fields are marked *

error: Content is protected !!