Month: October 2022

ಕುಂದಾಪುರ : 13 ವರ್ಷದ ಬಾಲಕಿಗೆ ಹೃದಯಾಘಾತವಾಗಿ ಸಾವು

ಕುಂದಾಪುರ: ಪ್ರೌಢಶಾಲಾ ಬಾಲಕಿಯೋರ್ವಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ. ಅಕ್ಷರ ದಾಸೋಹ ಯೋಜನೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಹಾಗೂ ಪ್ರೌಢಶಾಲೆ ಶಿಕ್ಷಕಿ ಭಾರತಿ ದಂಪತಿಯ ಪುತ್ರಿ ಅನುಶ್ರೀ ಮೃತ ದುರ್ದೈವಿ. ಈಕೆ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿದ್ದು ನಿನ್ನೆ ಮನೆಯಲ್ಲಿ…

ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ ರೀಲ್ಸ್ ಮಾಡಿದ ಯುವತಿ- ತುಳುವರ ಆಕ್ರೋಶಕ್ಕೆ ವೀಡಿಯೋ ಡಿಲೀಟ್

ಮಂಗಳೂರು: ಯುವತಿಯೋರ್ವಳು ಇನ್ಸ್ಟಾಗ್ರಾಮ್‌ನಲ್ಲಿ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆಗೆ ಇದೀಗ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸದ್ಯ ಸಿನೆಮಾ ಜಗತ್ತಿನಲ್ಲಿ ಹವಾ ಸೃಷ್ಟಿಸಿದ್ದು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಈ…

ಇಂದು ಸಂಜೆ(ಅ.28) ಬಂಟ್ವಾಳದ ಜನಾರ್ದನ ಪೂಜಾರಿ ಮನೆಗೆ ಭೇಟಿ ನೀಡಲಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ

ಮಂಗಳೂರು : ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಸಂಜೆ (ಅಕ್ಟೋಬರ್ 28 ) ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿಯವರ ಮನೆಗೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಂಗಳೂರಿನಲ್ಲಿ ನಡೆಯುವ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮಾಜಿ…

ಸುರತ್ಕಲ್ ಟೋಲ್ ಗೇಟ್ ಸುತ್ತಮುತ್ತ ಸೆ. 144ರಡಿಯಲ್ಲಿ ನಿಷೇಧಾಜ್ಞೆ-ಪ್ರತಿಭಟನೆ, ರಸ್ತೆ ತಡೆಗೆ ಅವಕಾಶವಿಲ್ಲ

ನಗರ ಹೊರವಲಯದ ಸುರತ್ಕಲ್ ಠಾಣಾ ವ್ಯಾಪ್ತಿಯ ಎನ್.ಐ.ಟಿ.ಕೆ. ಟೋಲ್ ಪ್ಲಾಜಾದಲ್ಲಿ ಅಹೋರಾತ್ರಿ ಧರಣಿಗೆ ಸಿದ್ಧತೆ ನಡೆಸಿರುವಾಗಲೇ ಟೋಲ್ ಗೇಟ್ ನ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 28ರಿಂದ…

ಸ್ನಾನಕ್ಕೆ ಬಳಸುವ ಶ್ಯಾಂಪುವಿನಲ್ಲಿ ಕ್ಯಾನ್ಸರ್ ಅಂಶ ಪತ್ತೆ-ಯಾವೆಲ್ಲ ಶ್ಯಾಂಪ್ ಗಳು ಅಪಾಯಕಾರಿ ಗೊತ್ತಾ?

ಮುಂಬೈ : ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಪ್ರಸಿದ್ಧ ಬ್ರ್ಯಾಂಡ್‌ಗಳು ಮಾರಕ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕವಾದ ಬೆಂಜೀನ್‌ನಿಂದ ಕಲುಷಿತಗೊಂಡಿದೆ ಎಂದು ಸಾಬೀತದ ಬಳಿಕ ಯೂನಿಲಿವರ್ ತನ್ನ ಉತ್ಪನ್ನಗಳನ್ನು ಹಿಂಪಡೆಯಲು ಆದೇಶಿಸಿದೆ. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನ ವೆಬ್‌ಸೈಟ್‌ನಲ್ಲಿ ಶುಕ್ರವಾರ ಪೋಸ್ಟ್…

ಪ್ರತಿಭಾ ಕುಳಾಯಿ ವಿರುದ್ದ ಅವಹೇಳನಕಾರಿ ಪೋಸ್ಟ್ ಪ್ರಕರಣ – 2 ನೇ ಆರೋಪಿ ಕೆ.ಆರ್ ಶೆಟ್ಟಿ ನ್ಯಾಯಾಲಯದಲ್ಲಿ ಶರಣು

ಮಂಗಳೂರು : ಸಾಮಾಜಿಕ ಕಾರ್ಯಕರ್ತೆ ಹಾಗೂ ಕೆಪಿಸಿಸಿ ಸಂಯೋಜಕಿಯಾಗಿರುವ ಪ್ರತಿಭಾ ಕುಳಾಯಿ  ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಮಾಡಿರುವ ಪ್ರಕರಣದ 2ನೆ ಆರೋಪಿ ಕೆ.ಆರ್. ಶೆಟ್ಟಿ ಎಂಬಾತ ಇಂದು ತನ್ನ ವಕೀಲರ ಮೂಲಕ ಕೋರ್ಟ್‌ಗೆ ಹಾಜರಾಗಿದ್ದಾನೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸ್…

ಉಳ್ಳಾಲ : ಪತ್ನಿಯನ್ನು ಕತ್ತು ಹಿಸುಕಿ ಕೊಂದು ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ – ಪತ್ನಿಯ ಮೇಲೆ ಅತಿಯಾದ ಸಂಶಯ ಪಡುತ್ತಿದ್ದ ಸೈಕೋ ಪತಿ

ಉಳ್ಳಾಲ : ಪತ್ನಿಯ ಮೇಲೆ ಅತಿಯಾದ ಸಂಶಯ ಪಡುತ್ತಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನ ಕತ್ತು ಹಿಸುಕಿ ಕೊಂದು ತಾನೂ ತೋಟದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿ ನಡೆದಿದೆ. ಪಿಲಾರು ನಿವಾಸಿಗಳಾದ ಶೋಭಾ…

ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶ್ರೀಧರ್ ಎಚ್. ಜಿ.ಯವರ ಕಾದಂಬರಿಗೆ ಚಡಗ ಕಾದಂಬರಿ ಪ್ರಶಸ್ತಿ

ಉಡುಪಿ, ಅ.26: ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾಗುವ 13ನೇ ವರ್ಷದ ‘ಚಡಗ ಕಾದಂಬರಿ ಪ್ರಶಸ್ತಿ’ಗೆ ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ…

ಮಂಗಳೂರು : ನೀವು ಫ್ಲಿಪ್‌ಕಾರ್ಟ್‌ ನಲ್ಲಿ ಆರ್ಡರ್ ಮಾಡುವುದಾದ್ರೆ ಸ್ವಲ್ಪ ಎಚ್ಚರಿಕೆ ವಹಿಸಿ – ಲ್ಯಾಪ್ ಟಾಪ್ ಆರ್ಡರ್ ಮಾಡಿದ ಮಂಗಳೂರಿನ ವ್ಯಕ್ತಿಗೆ ಬಂದಿದ್ದು ಕಲ್ಲು

ಮಂಗಳೂರು : ಫ್ಲಿಪ್‌ಕಾರ್ಟ್‌ನಿಂದ ವ್ಯಕ್ತಿಯೊಬ್ಬರು ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದು, ಇದರ ಬದಲಾಗಿ ಅವರಿಗೆ ದೊಡ್ಡ ಕಲ್ಲು ಮತ್ತು ಇ-ತ್ಯಾಜ್ಯ ಬಂದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ತಮಗೆ ಮೋಸವಾಗಿರುವ ವಿಚಾರವನ್ನು ಮಂಗಳೂರಿನ ಚಿನ್ಮಯ ರಮಣ ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದು, ನಾನು ಲ್ಯಾಪ್‌ಟಾಪ್‌ ಆರ್ಡರ್…

ಉಡುಪಿ : ಕಾರಿನ ಟಾಪ್ ಮೇಲೆ ಪಟಾಕಿ ಸಿಡಿಸಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಯುವಕನ ಹುಚ್ಚಾಟ

ಉಡುಪಿ: ದೀಪಾವಳಿ ಸಂಭ್ರಮದ ನಡುವೆ ಮಣಿಪಾಲದಲ್ಲಿ ಯುವಕನೋರ್ವ ಹುಚ್ಚಾಟ ಮೆರೆದಿದ್ದಾನೆ. ಕಾರಿನ ಟಾಪ್ ಮೇಲೆ ಪಟಾಕಿ ಇಟ್ಟು ಸಿಡಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಿನ ಮೇಲೆ 50 ಕಂಟಿನ್ಯೂ ರಾಕೆಟ್ ಶಾಟ್ಸ್…

error: Content is protected !!