ವಿಟ್ಲ: ನಿನ್ನೆ ವಿಟ್ಲದಿಂದ ನಾಪತ್ತೆಯಾಗಿದ್ದ ಮಹಿಳೆ ಇಂದು ಮುಡಿಪುವಿನಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಕಡಂಬು ನಿವಾಸಿ ನಾಗೇಶ್ ಎಂಬವರ ಪತ್ನಿ ಕವಿತಾ(29)‌ ನಿನ್ನೆ ಕಾಣೆಯಾಗಿದ್ದರು. ಕವಿತಾ ರವರು ವಿಟ್ಲ ಮಂಗಳೂರು ರಸ್ತೆಯಲ್ಲಿರುವ ಸ್ವೀಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅ.29 ರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆಂದು ತೆರಳಿದಾಕೆ ಸಂಜೆ ಸಹ ಕೆಲಸಗಾರರಲ್ಲಿ ತಾನು ತಾಯಿ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು, 6 ಗಂಟೆಯಾದರೂ ಆಕೆ ತಾಯಿ ಮನೆಗೆ ಬಂದಿಲ್ಲವೆಂದು ಆಕೆಯ ಸಹೋದರ ಗಿರೀಶ್ ಆಕೆಯ ಮೊಬೈಲ್ ಗೆ ಕರೆ ಮಾಡಿದ್ದಾರೆ.

ಆದರೆ ಆಕೆಯ ಫೋನ್ ಸ್ವಿಚ್ ಆಪ್ ಆಗಿರುವುದನ್ನು ಆಕೆಯ ಪತಿಗೆ ಕರೆ ಮಾಡಿ ತಿಳಿಸಿದ್ದಾರೆ. ಆಕೆಯ ಮನೆಯವರು ಮನೆಗೆ ಬರುವ ಪರಿಸರದಲ್ಲಿ ಹುಡುಕಾಡಿದರೂ ಕವಿತಾ ಪತ್ತೆಯಾಗಿರುವುದಿಲ್ಲ. ಈ ವಿಚಾರವನ್ನು ಆಕೆಯ ಪತಿ ನೆರೆ ಹೊರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ತಿಳಿಸಿ ವಿಚಾರಿಸಿದಾಗ ಪತ್ನಿಯ ಬಗ್ಗೆ ತಿಳಿದು ಬಂದಿಲ್ಲ. ಈ ಕುರಿತು ನಾಗೇಶ್ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ್ದ ವಿಟ್ಲ ಪೊಲೀಸರಿಂದ ವ್ಯಾಪಕ ಶೋಧಕಾರ್ಯ ನಡೆಸಿ ಮಹಿಳೆಯನ್ನು ಮುಡಿಪುವಿನಲ್ಲಿ ಪತ್ತೆ ಹಚ್ಚಿ ಯಶಸ್ವಿಯಾಗಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!