ಮಂಗಳೂರು: ಅಮೆಝಾನ್ ಕಂಪೆನಿಯಲ್ಲಿ ಡೆಲಿವರಿ ಬಾಯ್ 50 ಹುದ್ದೆಗಳಿಗೆ ಸೆ.7ರಂದು ನೇರ ಸಂದರ್ಶನವನ್ನು ದ.ಕ.ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯು ಆಯೋಜಿಸಿದೆ. ಯಾವುದೇ ವಿದ್ಯಾರ್ಹತೆಯುಳ್ಳ ಸ್ವಂತ ದ್ವಿಚಕ್ರ ವಾಹನವನ್ನು ಹೊಂದಿರುವ ಉರ್ವಸ್ಟೋರ್, ಕದ್ರಿ, ದೇರಳಕಟ್ಟೆ, ಸುರತ್ಕಲ್ ಹಾಗೂ ವೆಲೆನ್ಸಿಯಾ ಪ್ರದೇಶದ ಆಸಕ್ತ ಉದ್ಯೋಗಾಕಾಂಕ್ಷಿಗಳು ದ್ವಿಚಕ್ರ ವಾಹನ ಪರವಾನಿಗೆ, ಪಾನ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, Android Smart Phone ಹಾಗೂ ಇತರ ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ವೇತನ ಮಾಸಿಕ 26 ಸಾವಿರ ರೂ. ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ದೂ.ಸಂ.: 0824-2453222 ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

By admin

Leave a Reply

Your email address will not be published. Required fields are marked *

error: Content is protected !!