ಉಡುಪಿ: ಉಡುಪಿ ಕೃಷ್ಣಾಷ್ಟಮಿ ಸಂದರ್ಭದಲ್ಲಿ ಕಳೆದ ಏಳು ವರ್ಷಗಳಿಂದ ಹಾಲಿವುಡ್‌ ಚಲನಚಿತ್ರ ಮಾದರಿಯಲ್ಲಿ ವೇಷ ಹಾಕಿ ಪ್ರೇಕ್ಷಕರನ್ನು ರಂಜಿಸುತ್ತಾ ಸಂಗ್ರಹವಾದ ಹಣವನ್ನು ಬಡಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುವ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ವೇಷ ಧರಿಸಿ 1 ಕೋಟಿಯ ಗುರಿ ತಲುಪಿದ್ದಾರೆ.

ಈ ಹಿಂದೆ ಒಟ್ಟು 90 ಲಕ್ಷ ರೂಪಾಯಿ ಸಂಗ್ರಹಿಸಿ 66 ಮಂದಿ ಮಕ್ಕಳ ಚಿಕಿತ್ಸೆಗೆ ನೀಡಿದ್ದರು. ಈ ವರ್ಷ ಎರಡು ದಿನ ಡೀಮನ್ ರಾಕ್ಷಸ ಮಾದರಿಯ ಭಯಾನಕ ವೇಷ ಹಾಕಿ ಮತ್ತೆ 14 ಲಕ್ಷ ರೂಪಾಯಿ ಸಂಗ್ರಹಿಸಿ, ಒಟ್ಟು 1 ಕೋಟಿ ದೇಣಿಗೆ ಸಂಗ್ರಹಿಸಿ ತನ್ನ ಗುರಿಯನ್ನು ಸಾಧಿಸಿದ್ದಾರೆ.

ಈ ಮೂಲಕ ಮತ್ತೆ 8 ಮಕ್ಕಳಿಗೆ ಈ ಹಣವನ್ನು ನಾಳೆ ಉಡುಪಿ ಜಿಲ್ಲಾಧಿಕಾರಿಗಳ ಮುಖಾಂತರ ವಿತರಿಸಲಾಗುವುದು ಎಂದು ರವಿ ಕಟಪಾಡಿ ಹೇಳಿದ್ದಾರೆ.

7 ವರ್ಷಗಳ ಸುಧೀರ್ಘ ಅವಧಿಯಲ್ಲಿ ರವಿ ಫ್ರೆಂಡ್ಸ್ ತಂಡದ ಸದಸ್ಯರ ಸತತ ಪರಿಶ್ರಮ ಹಾಗೂ ದಾನಿಗಳ ಬೆಂಬಲದಿಂದ 1 ಕೋಟಿ ರೂಪಾಯಿ ನೆರವು ನೀಡುವ ಮಹಾತ್ಕಾರ್ಯ ಮಾಡಲು ಸಾಧ್ಯವಾಗಿದೆ.

ಮಂಗಳವಾರ ಕಟಪಾಡಿ ಪೇಟೆ ಬೆಟ್ಟು ಶ್ರೀ ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ಹಣವನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದ್ದು, ಕೇಮಾರು ಮಠದ ಈಶ ವಿಠಲ ದಾಸ ಸ್ವಾಮೀಜಿ, ಜಿಲ್ಲಾಧಿಕಾರಿ ಕೂರ್ಮರಾವ್‌ ಮೊದಲಾದವರು ಉಪಸ್ಥಿತರಿರಲಿದ್ದಾರೆ

By admin

Leave a Reply

Your email address will not be published. Required fields are marked *

error: Content is protected !!