ಬೆಂಗಳೂರು: ಎರಡು ದಶಕಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಭೂಗತಪಾತಕಿ ರವಿ ಪೂಜಾರಿಯನ್ನು ನಗರದ ವಿಶೇಷ ಕೋರ್ಟ್, ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. ಬಿಲ್ಡರ್ ಸುಬ್ಬರಾಜು ಅವರನ್ನು 2001ರ ಜನವರಿ 5ರಂದು ಬಿಲ್ಡರ್ ಸುಬ್ಬರಾಜು ಅವರನ್ನು ಶೇಷಾಧ್ರಿಪುರಂನ ಅವರ ಕಚೇರಿಯಲ್ಲೇ ಕೊಲೆ ಮಾಡಲಾಗಿತ್ತು. ಸುಬ್ಬರಾಜು ಅವರ ಇಬ್ಬರು ಮಕ್ಕಳ ಕಣ್ಣೆದುರೇ ಆ ಘಟನೆ ನಡೆದುಹೋಗಿತ್ತು.

ಬೆಂಗಳೂರಿನಲ್ಲಿ ಪ್ರತಿಷ್ಠಿತ ಪ್ರದೇಶದಲ್ಲಿ ಸುಬ್ಬರಾಜು ಆಸ್ತಿ ಖರೀದಿಸಲು ಮುಂದಾಗಿದ್ದರು. ಆಗ ಮುತ್ತಪ್ಪ ರೈ ಅವರಿಂದ ಸುಬ್ಬರಾಜುಗೆ ಬೆದರಿಕೆ ಇತ್ತು ಎನ್ನಲಾಗಿದೆ. ರವಿ ಪೂಜಾರಿ ಮತ್ತಿತರರನ್ನು ಬಳಸಿ ಮುತ್ತಪ್ಪ ರೈ ಸುಬ್ಬರಾಜುವಿನ ಹತ್ಯೆ ಮಾಡಿಸಿದ್ದರು ಎಂಬ ಆರೋಪ ಇದೆ. ರವಿ ಪೂಜಾರಿ ಇತರ ಏಳು ಮಂದಿ ಜೊತೆ ಸೇರಿ ಸುಬ್ಬರಾಜು ಹತ್ಯೆಗೆ ಸಂಚು ರೂಪಿಸಿದ್ದ.

ಯೂಸುಫ್ ಬಚಕಾನ ಮತ್ತು ನಿತಿನ್ ಸಾವಂತ್ ಎಂಬಿಬ್ಬರು ಶೂಟರ್‌ಗಳನ್ನು ನೇಮಿಸಲಾಗಿತ್ತು. ಈ ಇಬ್ಬರು ಶೂಟರ್‌ಗಳಿಗೆ ಹವಾಲಾ ಜಾಲದ ಮೂಲಕ ಪಿಸ್ತೂಲು ಹಾಗೂ ಗುಂಡುಗಳನ್ನು ರವಿ ಪೂಜಾರಿ ಪೂರೈಸಿದ್ದ ಎಂದು ಆರೋಪಿಸಲಾಗಿತ್ತು. ಈ ಹಿಂದೆ ನಡೆದ ವಿಚಾರಣೆ ವೇಳೆ ಮುತ್ತಪ್ಪ ರೈ ಹಾಗೂ ಇತರ ನಾಲ್ವರನ್ನು ಸಾಕ್ಷ್ಯಾಧಾರ ಕೊರತೆಯಿಂದ ಕೋರ್ಟ್ ಖುಲಾಸೆಗೊಳಿಸಿತ್ತು. ಈ ಪ್ರಕರಣದಲ್ಲಿ ಶೂಟರ್ ಯೂಸುಫ್ ಬಚಕಾನಗೆ ಮಾತ್ರ ಶಿಕ್ಷೆಯಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2020 ಮಾ.10ರಂದು ವೈಯಾಲಿಕಾವಲ್ ಪೊಲೀಸ್ ಇನ್ಸ್ಪೆಕ್ಟರ್ ಯೋಗೇಂದ್ರ ಕುಮಾರ್ ಅವರು ರವಿ ಪೂಜಾರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿದ್ದರು. ಅದನ್ನು ಸಾಕ್ಷಿಯಾಗಿ ಕೋರ್ಟ್ಗೆ ನೀಡಲಾಗಿತ್ತು. ಆದರೆ, ಪೊಲೀಸರಿಗೆ ನೀಡಿದ್ದ ತಪ್ಪೊಪ್ಪಿಗೆಯು ಕೋರ್ಟ್ನಲ್ಲಿ ಸಾಕ್ಷಿ ಎಂದು ಪರಿಗಣಿಸಬಾರದು ಎಂದು ಪೂಜಾರಿ ಪರ ವಕೀಲರು ವಾದಿಸಿದ್ದರು.

By admin

Leave a Reply

Your email address will not be published. Required fields are marked *

error: Content is protected !!