ಕಲ್ಲೇಗದ ಅಕ್ಷಯ್ ಕೊಲೆ ಪ್ರಕರಣ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ಷಯ್ ಸ್ನೇಹಿತ ವಿಖ್ಯಾತ್ ದೂರು ದಾಖಲಿಸಿದ್ದಾರೆ.

ದೂರಿದಾರರಾದ ವಿಖ್ಯಾತ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು  ದಿನಾಂಕ: 06.11.2023 ರಂದು ರಾತ್ರಿ 9.00 ಗಂಟೆಗೆ ಮನೆಯಿಂದ ಹೊರಟು ಪುತ್ತೂರಿನ ನೆಹರು ನಗರದ ಜಂಕ್ಷನ್‌ಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು ಇರುವ ಬೀಡಾ ಅಂಗಡಿಯಲ್ಲಿ ತನ್ನ  ಸ್ನೇಹಿತರಾದ ಅಕ್ಷಯ್ ಕಲ್ಲೇಗ ಮತ್ತು ಅಲ್ತಾಫ್ ನೊಂದಿಗೆ ನಿಂತುಕೊಂಡಿದ್ದಾಗ ವಿವೇಕಾನಂದ ಕಾಲೇಜಿನ ಹುಡುಗನೊಬ್ಬ ನೆಹರು ನಗರದ ಪಂಚಮಿ ಹೋಟೆಲ್ ನಿಂದ ಪಾರ್ಸಲ್ ತೆಗೆದುಕೊಂಡು ರಸ್ತೆ ದಾಟಿಕೊಂಡು ಬರುವಾಗ ಸಮಯ ಸುಮಾರು 9.30 ಗಂಟೆಯಷ್ಟರಲ್ಲಿ ಮಂಗಳೂರು ಕಡೆಯಿಂದ ಒಂದು ಹೊಸ ಬೈಕನ್ನು ಅದರ ಸವಾರ ಚಲಾಯಿಸಿಕೊಂಡು ಬಂದು ಆ ಹುಡುಗನಿಗೆ ಡಿಕ್ಕಿ ಹೊಡೆದನು, ಈ ಅಪಘಾತದಿಂದ ವಿವೇಕಾನಂದ ಕಾಲೇಜಿನ ಹುಡುಗನಿಗೆ ಮತ್ತು ಬೈಕ್ ಸವಾರನಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು ಕೂಡಲೇ ಪಿರ್ಯಾದಿದಾರರು , ಅಕ್ಷಯ್ ಕಲ್ಲೇಗ ಮತ್ತು ಅಲ್ತಾಫ್ ಸೇರಿಕೊಂಡು ಆ ಇಬ್ಬರು ಹುಡುಗರನ್ನು ಒಂದು ಆಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಬಂದು ಹೋರರೋಗಿಯಾಗಿ ಚಿಕಿತ್ಸೆ ಕೊಡಿಸಿದ್ದು , ಇಬ್ಬರ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ರೂ.1800/- ಗಳನ್ನು ಆಸ್ಪತ್ರೆಗೆ ಪಾವತಿಸುವಂತೆ ಬೈಕ್ ಸವಾರನಲ್ಲಿ ಅಕ್ಷಯ್ ಕಲ್ಲೇಗ ತಿಳಿಸಿದನು. ಆಗ ಬೈಕ್ ಸವಾರ ಆತನಿಗೆ ಪರಿಚಯವಿದ್ದ ಮನೀಶ್ ಮತ್ತು ಚೇತನ್ ಎಂಬುವರಿಗೆ ಕರೆ ಮಾಡಿಕೊಟ್ಟಾಗ ದೂರವಾಣಿಯಲ್ಲಿ ಚೇತನ್ ಎಂಬುವನು ಅಕ್ಷಯನಿಗೆ ನಾವು ಆಸ್ಪತ್ರೆಯ ಬಿಲ್ ಪಾವತಿಸುವುದಿಲ್ಲ ನೀವು ಬೇಕಾದರೆ ಪೊಲೀಸ್ ಕಂಪ್ಲೆಂಟ್ ನೀಡಿ ಎಂದು ಉಡಾಫೆಯಾಗಿ ಮಾತನಾಡಿ ಕರೆ ಕಟ್ ಮಾಡಿರುತ್ತಾನೆ .  ಬಳಿಕ ಪಿರ್ಯಾದಿದಾರರ ಪರಿಚಯದ ಕಾರ್ತಿಕ್ ರವರು ಆಸ್ಪತ್ರೆಗೆ ಬಂದು ಬಿಲ್ ಪಾವತಿ ಮಾಡಿ ಗಾಯಾಳುಗಳನ್ನು ಮತ್ತು ಪಿರ್ಯಾದಿದಾರರು ಮತ್ತು ಅಕ್ಷಯ್ ಕಲ್ಲೇಗ ,ಅಲ್ತಾಪ್  ರವರನ್ನು ಅವರ  ಕಾರಿನಲ್ಲಿ ನೆಹರು ನಗರದ ತನಕ ಡ್ರಾಫ್ ನೀಡಿ ಹೋದರು. ಆಗ ಪಿರ್ಯಾದಿದಾರರು , ಅಕ್ಷಯ್ ಕಲ್ಲೇಗ ಮತ್ತು ಅಲ್ತಾಫ್  ನಗರದ ಕೆನರಾ ಬ್ಯಾಂಕ್ ಎಟಿಎಂ ಪಕ್ಕದಲ್ಲಿ ನಿಂತಿರುವಾಗ ಅಕ್ಷಯನು ಮನೀಶ್ ಹಾಗೂ ಚೇತನ್ ರವರಿಗೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಾ “ನೀವು ಬೇಕಾದರೆ ನಗರಕ್ಕೆ ಬನ್ನಿ” ಎಂದು ಮಾತನಾಡುತ್ತಿದ್ದನು.

ಸ್ವಲ್ಪ ಸಮಯದ ನಂತರ ದಿನಾಂಕ: 06-11-2023 ರಂದು ರಾತ್ರಿ 11.30 ಗಂಟೆ ಸಮಯಕ್ಕೆ ಪುತ್ತೂರು ಕಡೆಯಿಂದ ಒಂದು ಗ್ರೇ ಬಣ್ಣದ ನ್ಯಾನೋ ಕಾರಿನಲ್ಲಿ ಚೇತನ್, ಮನೀಶ್, ಮಂಜ ಮತ್ತು ಕೇಶವ ಎಂಬುವರು ಬಂದಿದ್ದು , ಆಗ ಚೇತನನು ಅಕ್ಷಯ್ ನಲ್ಲಿ ತುಳು ಭಾಷೆಯಲ್ಲಿ “ಏನು ಕರೆದದ್ದು ಬಾರಿ ಅಹಂಕಾರಾನಾ ನಿನಗೆ?” ಎಂದು ಜೋರು ಜೋರು ಮಾತನಾಡುತ್ತಾ ಅಕ್ಷಯನ ಮೈ ಮೇಲೆ ಕೈ ಹಾಕಿ ಕೈಯಿಂದ ಹೊಡೆಯಲು ಪ್ರಾರಂಭಿಸಿದನು ಆಗ ಪಿರ್ಯಾದಿದಾರರು  ಮತ್ತು ಅಲ್ತಾಫ್ ರವರು ಅಕ್ಷಯ್ ನನ್ನು ಬಿಡಿಸಲು ಮುಂದಾದಾಗ ಅವರ ಕಾರಿನಿಂದ ಚೇತನ್ ಮತ್ತು ಮನೀಶ್ 02 ತಲವಾರುಗಳನ್ನು ತೆಗೆದು ಅದರಲ್ಲಿ ಚೇತನನು ತಲವಾರಿನಿಂದ ಅಕ್ಷಯನ ಬಲಕೈಗೆ ಕಡಿದನು ಮನೀಶನು ತಲವಾರು ಹಿಡಿದುಕೊಂಡು ಪಿರ್ಯಾದಿದಾರರ  ಕಡೆಗೆ ಬೀಸುತ್ತಾ ತುಳುಭಾಷೆಯಲ್ಲಿ “ಬೇವಾರ್ಸಿ ರಂಡೆ ಮಕ್ಕಳ ಬನ್ನಿ ನಿಮ್ಮನ್ನು ಈಗಲೇ ಕೊಲ್ಲದೇ ಬಿಡುವುದಿಲ್ಲ” ಎಂದು ಹೇಳುತ್ತಾ ಪಿರ್ಯಾದಿದಾರರನ್ನು  ಕೊಲ್ಲಲು ಪ್ರಯತ್ನಿಸುತ್ತಿದ್ದನು ಆಗ ಪಿರ್ಯಾದಿದಾರರು  ತಪ್ಪಿಸಿಕೊಂಡು ಅಕ್ಷಯನನ್ನು ಆತನ DUKE ಬೈಕಿನಲ್ಲಿ ಕುಳ್ಳಿರಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಚೇತನ್ ಮತ್ತು ಮನೀಶನು ತಲವಾರಿನಿಂದ ಅಕ್ಷಯನ ಕುತ್ತಿಗೆಯ ಮುಂದೆ ಮತ್ತು ಮುಖಕ್ಕೆ ಕಡಿದರು, ಆಗ ಮಂಜ ಮತ್ತು ಕೇಶವ ಪಿರ್ಯಾದಿದಾರರನ್ನು  ಹಿಡಿಯಲು ಬಂದಾಗ ಪಿರ್ಯಾದಿದಾರರು ಬೈಕನ್ನು ಅಲ್ಲೇ ಬಿಟ್ಟು  ಅಲ್ಲಿಂದ ಓಡಿ ಹೋಗುತ್ತಿರುವಾಗ ಅಕ್ಷಯನನ್ನು ತಲವಾರಿನಿಂದ ಕಡಿಯುತ್ತಾ ಮುಖ್ಯರಸ್ತೆ ಕಡೆಗೆ ಓಡಿಸಿಕೊಂಡು ಹೋಗುತ್ತಿದ್ದರು, ಪಿರ್ಯಾದಿದಾರರು  ಅಲ್ಲಿಂದ ತಪ್ಪಿಸಿಕೊಂಡು   ಪರಿಚಯದ ದಿವಾಕರ ಎಂಬುವರ ಮನೆಗೆ ಹೋಗಿ ಅಲ್ತಾಫನಿಗೆ ಕರೆ ಮಾಡಿದಾಗ ಅಲ್ತಾಫನು ಕೂಡ ಅಲ್ಲಿಂದ ಓಡಿ ಹೋಗಿರುವುದಾಗಿ ತಿಳಿಸಿರುತ್ತಾನೆ . ನಂತರ  ಪಿರ್ಯಾದಿದಾರರು  ತನ್ನ  ಸ್ನೇಹಿತರ ಜೊತೆ ನೆಹರು ನಗರಕ್ಕೆ ಬಂದು ನೋಡಿದಾಗ ಅಡುಗೆ ಮನೆ ಹೋಟೆಲ್ ನ ಪೂರ್ವಬದಿಯ ಹುಲ್ಲು ಪೊದೆಯಲ್ಲಿ ಅಕ್ಷಯ ಕಲ್ಲೇಗನನ್ನು ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿಕೊಂಡು ತಲವಾರಿನಿಂದ ಮುಖಕ್ಕೆ, ಕೈಗೆ, ಕುತ್ತಿಗೆಗೆ ಹಾಗೂ ದೇಹದ ಇತರ ಭಾಗಗಳಿಗೆ ಕಡಿದು ಕೊಲೆ ಮಾಡಿ ಹೋಗಿರುತ್ತಾರೆ. ಈ ಕೊಲೆಗೆ ಕಾರಣವೇನೆಂದರೆ ದಿನಾಂಕ: 06-11-2023 ರಂದು ರಾತ್ರಿ ಸಮಯ ಸುಮಾರು 09.30 ಗಂಟೆಗೆ ನಡೆದ ಬೈಕ್ ಅಪಘಾತದಲ್ಲಿ ಗಾಯಾಳುಗಳ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸುವ ವಿಚಾರದಲ್ಲಿ ಅಕ್ಷಯ ಕಲ್ಲೇಗನಿಗೂ ಹಾಗೂ ಚೇತನ್ ಮತ್ತು ಮನೀಶ್ ರವರಿಗೆ ನಡೆದ ಗಲಾಟೆಯ ವಿಚಾರವಾಗಿ ದಿನಾಂಕ: 06-11-2023 ರಂದು ರಾತ್ರಿ 11.30 ಗಂಟೆಯಿಂದ 11.50 ಗಂಟೆ ಸಮಯದಲ್ಲಿ ಆರೋಪಿತರಾದ ಚೇತನ್, ಮನೀಶ್, ಮಂಜ ಮತ್ತು ಕೇಶವ ರವರು ಅಕ್ಷಯ್ ಕಲ್ಲೇಗನನ್ನು ನೆಹರು ನಗರದ ಜಂಕ್ಷನ್‌ ಬಳಿ ತಲವಾರಿನಿಂದ ಕಡಿದು ಕೊಲೆ ಮಾಡಿ ಪಿರ್ಯಾದಿದಾರರನ್ನು ಮತ್ತು ಅಲ್ತಾಪ್ ನನ್ನು  ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ ಎಂಬಿತ್ಯಾದಿ ನೀಡಿದ ಪಿರ್ಯಾದಿಯಾಗಿರುತ್ತದೆ  .

By admin

Leave a Reply

Your email address will not be published. Required fields are marked *

error: Content is protected !!