ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ನಡೆಯಲಿದೆ. ಭಾರತದಲ್ಲಿ ಮಧ್ಯರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ಚಂದ್ರಗ್ರಹಣ ಮಧ್ಯರಾತ್ರಿ 1:5 ಗಂಟೆಗೆ ಶುರುವಾಗಿ, 2:24ಕ್ಕೆ ಮುಕ್ತಾಯಗೊಳ್ಳಲಿದೆ. ಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಪೂಜೆಯ ಸಮಯ ಬದಲಾಗಿದ್ದು, ಕೆಲವು ದೇವಾಲಯಗಳು ಬೇಗನೆ ಮುಚ್ಚಿದರೆ, ಮತ್ತೆ ಕೆಲವೆಡೆ ಗ್ರಹಣ ಕಾಲದಲ್ಲಿ ಭಕ್ತರಿಗೆ ವಿಶೇಷಪೂಜೆ, ಪುನಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗ್ರಹಣ ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಂಜೆ 7.30ರಿಂದ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೂರದರ್ಶಕದ ಮೂಲಕ ಗುರು ಗ್ರಹ, ಶನಿ ಗ್ರಹ ಮತ್ತು ಚಂದ್ರನನ್ನು ಕಣ್ತುಂಬಿಕೊಳ್ಳಬಹುದು.

ಇದೇ ಸಮಯದಲ್ಲಿ ಕಾಣಸಿಗುವ ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳನ್ನು ಗುರುತಿಸುವುದು ಮತ್ತು ಗ್ರಹಣಗಳ ಬಗ್ಗೆ ಮಾಹಿತಿಯನ್ನು ಕೇಂದ್ರದ ಸಿಬ್ಬಂದಿಗಳು ನೀಡುತ್ತಾರೆ.

ಆಸಕ್ತರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಗ್ರಹಣವನ್ನು ವೀಕ್ಷಿಸಲು ಸಹ ಅನುವು ಮಾಡಿಕೊಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಲಾಗದ ಸಾರ್ವಜನಿಕರು ಈ ಗ್ರಹಣವನ್ನು ತಮ್ಮ ಮನೆಯಲ್ಲಿಯೇ ವೀಕ್ಷಿಸಲು ಪ್ರಶಸ್ತ್ಯ ಸ್ಥಳವನ್ನು ಆಯ್ಕೆ ಮಾಡಿಕೊಂಡು ಬರೀಗಣ್ಣಿನಿಂದ ನೋಡಬಹುದು. ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಇದ್ದರೆ ಉಪಯೋಗಿಸಿ. ಯಾವ ವಿಶೇಷ ತರಹದ ಮುಂಜಾಗ್ರತೆ ಅಗತ್ಯವಿಲ್ಲ. ಮೋಡಗಳಿಲ್ಲದ ಶುಭ್ರ ವಾತಾವಾರಣವು ಈ ವಿದ್ಯಾಮಾನವನ್ನು ವೀಕ್ಷಿಸಲು ಅನುಕೂಲಕರ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

By admin

Leave a Reply

Your email address will not be published. Required fields are marked *

error: Content is protected !!