ಬ್ರದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್(79) ಅವರು ಮಂಗಳೂರಿನ ಕೆ ಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಅವರು ಮಂಗಳೂರು ಧರ್ಮಪ್ರಾಂತ್ಯಕ್ಕೆ ಸೇರಿದ ಬೆಳ್ಳೂರಿನ ಸಂತ ಮೈಕಲ್ ಚರ್ಚ್ ವ್ಯಾಪ್ತಿಯಲ್ಲಿ ಜನಿಸಿದ್ದರು. ದಿವಂಗತ ಜಾನ್ ರೋಡ್ರಿಗಸ್ ಮತ್ತು ಕೋಸೆಸ್ ರೋಡ್ರಿಗಸ್ ದಂಪತಿಗಳ ಮಗನಾಗಿ ಜನಿಸಿದರು.
1944 ರ ಜೂನ್ 22,‌ರಂದು ಜನಿಸಿದ ಬ್ರ. ಬ್ಯಾಪ್ಟಿಸ್ಟ್ 1963 ರಲ್ಲಿ ಕೇರಳದ ಅಲ್ವೇಯಲ್ಲಿ ಕಾರ್ಮೆಲೈಟ್ ಆರ್ಡರ್ ಅನ್ನು ಸೇರಿದರು. ಅವರು 1969ಮಾರ್ಚ್ 19/ರಂದು ತಮಿಳುನಾಡಿನ ಪೋದನೂರಿನಲ್ಲಿ ತಮ್ಮ ಮೊದಲ ಸೇವೆ ಸಲ್ಲಿಸಿದರು. ಅವರ ಜೀವನದುದ್ದಕ್ಕೂ ಅವರು ನಿಸ್ವಾರ್ಥ ಮತ್ತು ಉದಾರ ಸೇವೆಯನ್ನು ಸಲ್ಲಿಸಿದ್ದಾರೆ.‌ ವಿಶೇಷವಾಗಿ ಪುಷ್ಪಾಶ್ರಮ ಮೈಸೂರು, ಸಂತ ಜೋಸೆಫ್ ಮಠ ಮಂಗಳೂರು, ಆಶಾ ದೀಪ ಮಡಂತ್ಯಾರ್, ಮತ್ತು ಕಾರ್ಮೆಲ್ ಆಶ್ರಮ ಕೋಟೇಶ್ವರದಲ್ಲಿ ತನ್ನ ಸೇವೆ ಸಲ್ಲಿಸಿದ್ದಾರೆ‌.
ಬ್ಯಾಪ್ಟಿಸ್ಟ್ ಅವರ ಅಂತ್ಯಕ್ರಿಯೆಯು ಅಕ್ಟೋಬರ್ 6, ಶುಕ್ರವಾರದಂದು ಮಂಗಳೂರಿನ ಕಾರ್ಮೆಲ್ ಹಿಲ್‌ನಲ್ಲಿರುವ ಇನ್ಫೆಂಟ್ ಜೀಸಸ್ ಶ್ರೈನ್‌ನಲ್ಲಿ ಮಧ್ಯಾಹ್ನ 3:30 ಕ್ಕೆ ನಡೆಯಲಿದೆ.

By admin

Leave a Reply

Your email address will not be published. Required fields are marked *

error: Content is protected !!