ಶಿವಮೊಗ್ಗ, ಅಕ್ಟೋಬರ್ 3: ಶಿವಮೊಗ್ಗ ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣದಲ್ಲಿ ಗಲಾಟೆ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಆವಾಜ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಅವರಿಗೆ ಆವಾಜ್ ಹಾಕಿದ್ದ. ಒಂದು ನಾವು ಸಾಯಬೇಕು, ಇಲ್ಲದಿದ್ದರೆ ಅವ್ರು ಸಾಯಬೇಕು. ನಾವು ಸಾಬ್ರು ಹೇಗೆ ಅಂತಾ ಗೊತ್ತಲ್ಲ ಎಂದು ಪೊಲೀಸರ ಎದುರೇ ಆವಾಜ್ ಹಾಕಿದ್ದ. ಹಾಗೆ ಧಾರ್ಷ್ಯತನದಿಂದ ಆವಾಜ್ ಹಾಕಿದ್ದ ರಾಗಿಗುಡ್ಡದ ಸಲೀಂ ಎಂಬಾತನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈದ್​-ಮಿಲಾದ್(Eid Milad)​ ಹಬ್ಬದಲ್ಲಿ ಆದ ಗಲಾಟೆಯ ಕುರಿತು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹಬ್ಬುತ್ತಿವೆ. ಬೇರೆ ಬೇರೆ ರಾಜ್ಯದ ವೀಡಿಯೋಗಳನ್ನು ಸಾಮಾಜಿಕ‌ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಈ ರೀತಿ ಊಹಾಪೋಹಗಳನ್ನ ಹರಿಬಿಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ  ಎಚ್ಚರಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!