ಉಚಿತ ಮದ್ಯ ನೀಡುವಂತೆ ಮದ್ಯಪ್ರಿಯರು ಸರಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು.

ರಾಜ್ಯ ಕಾಂಗ್ರೆಸ್ ಚುನಾವಣೆ ಪೂರ್ವ ನೀಡಿದ ಉಚಿತ ಗ್ಯಾರಂಟಿ ಯೋಜನೆಗಳನ್ನು ಹಂತಹಂತವಾಗಿ ಜಾರಿ ಮಾಡುತ್ತಿದೆ. ಮದ್ಯವನ್ನು ಉಚಿತವಾಗಿ ನೀಡುವಂತೆ ಮದ್ಯಪ್ರಿಯರು ಸರಕಾರದ ವಿರುದ್ಧ ಪ್ರತಿಭಟನೆ‌ ನಡೆಸಿ, ಮನವಿ ಮಾಡಿದರು.

ನಾಗರಿಕ ಸಮಿತಿ ನಿತ್ಯಾನಂದ ಒಳಕಾಡು, ಗೋವಿಂದ ಶೆಟ್ಟಿ ಮಾತನಾಡಿ, ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ ಉಚಿತವಾಗಿ ‌ನೀಡುವಂತೆ ಒತ್ತಾಯಿಸಿದರು‌‌. ಸರಕಾರಕ್ಕೆ ಹೆಚ್ಚು ಆರ್ಥಿಕ ಬಲ ನೀಡುವುದು ಮದ್ಯಪ್ರಿಯರ ಸುಂಕ.

ಹೀಗಿರುವಾಗ ಮದ್ಯಕ್ಕೂ ಉಚಿತ ಯೋಜನೆ ಜಾರಿಯಾಗಬೇಕು ಎಂದರು. ಇಷ್ಟೆಲ್ಲಾ ಮದ್ಯದಿಂದ ಸರಕಾರಕ್ಕೆ ಲಾಭವಿದ್ದರು, ಬೆಲೆ ಏರಿಕೆ ಮಾಡಿ ಸರಕಾರ ಮದ್ಯಪ್ರಿಯರಿಗೆ ಅನ್ಯಾಯ ಮಾಡಿದೆ. ಒಂದೋ ಮದ್ಯ ಉಚಿತ ನೀಡಿ, ಇಲ್ಲವೇ ಮದ್ಯ ಬಂದ್ ಮಾಡಿ ಎಂದು ಮದ್ಯಪ್ರಿಯರು ಸರಕಾರವನ್ನು ‌ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಂಕರ, ಶೇಖರ, ಹನುಮಂತ, ನೀಲಪ್ಪ, ಮಂಜು, ಕನಕಪ್ಪ ಸೇರಿದ್ದಂತೆ ಅನೇಕರು ಇದ್ದರು.

By admin

Leave a Reply

Your email address will not be published. Required fields are marked *

error: Content is protected !!