ಒಂದು ವರ್ಷದ ಬಳಿಕ ಭಾರತ-ಪಾಕಿಸ್ತಾನ (India vs Pakistan) ತಂಡಗಳು ಮತ್ತೊಮ್ಮೆ ವಿಶ್ವ ಕ್ರಿಕೆಟ್ನಲ್ಲಿ ಮುಖಾಮುಖಿಯಾಗಲಿವೆ. ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ನಲ್ಲಿ (ODI World Cup 2023) ಉಭಯ ತಂಡಗಳಿಗೆ ಆತಿಥ್ಯವಹಿಸಲು ಅಹಮದಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium) ಸರ್ವಸನ್ನದ್ಧವಾಗಿದೆ. ಆದರೆ ಪಾಕ್ ತಂಡ ಭಾರತಕ್ಕೆ ಬರಲು ಹಲವಾರು ಅಡೆತಡೆಗಳು ಎದುರಾಗಿದ್ದು, ಪಾಕ್ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪಾಕ್ ತಂಡದ ವಿಶ್ವಕಪ್ ಭವಿಷ್ಯ ಅಡಗಿದೆ. ಆದರೆ ಅದಕ್ಕೂ ಮುನ್ನ ಪಾಕ್ ತಂಡದ ಮಾಜಿ ಆಲ್ರೌಂಡರ್ ನೀಡಿರುವ ಹೇಳಿಕೆ ಟೀಂ ಇಂಡಿಯಾ (Team India) ಅಭಿಮಾನಿಗಳನ್ನು ಕೆರಳಿಸಿದೆ. ವಾಸ್ತವವಾಗಿ ಉಭಯ ದೇಶಗಳ ನಡುವಣ ಸಂಬಂಧ ಹದಗೆಟ್ಟಿರುವುದರಿಂದ ಎರಡೂ ದೇಶಗಳ ತಂಡಗಳು ದ್ವಿಪಕ್ಷೀಣ ಸರಣಿಯನ್ನು ಆಡುತ್ತಿಲ್ಲ. ಆದರೆ ಇದಕ್ಕೆ ಹೊಸ ಬಣ್ಣ ಹಚ್ಚಿರುವ ಪಾಕ್ ಮಾಜಿ ಕ್ರಿಕೆಟಿಗ ಸೋಲುವ ಭೀತಿಯಿಂದ ಭಾರತ ತಂಡ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಣ ಸರಣಿ ಆಡುತ್ತಿಲ್ಲ ಎಂದಿದ್ದಾರೆ.

ಅತಿರೇಕವೆನಿಸಿದ ಅಬ್ದುಲ್ ರಜಾಕ್ ಹೇಳಿಕೆ
ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸರಣಿಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್, ‘ಭಾರತ-ಪಾಕಿಸ್ತಾನ ತಂಡವು ಪರಸ್ಪರ ಗೌರವ ಮತ್ತು ಸೌಹಾರ್ದತೆಯ ಭಾವನೆಯನ್ನು ಹೊಂದಿದೆ. 1997-98 ರಿಂದ ಭಾರತ ತಂಡ ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಣ ಸರಣಿ ಆಡಿಲ್ಲ. ಏಕೆಂದರೆ ಪಾಕ್ ತಂಡ ಭಾರತದ ವಿರುದ್ಧ ಯಾವಾಗಲೂ ಮೇಲುಗೈ ಸಾಧಿಸಿದೆ. ಇತ್ತ ಟೀಂ ಇಂಡಿಯಾ ನಮ್ಮೇದುರು ಯಾವಾಗಲೂ ಸೋತಿದೆ. ಹೀಗಾಗಿ ಭಾರತ ನಮ್ಮೊಂದಿಗೆ ಆಡಲು ಹಿಂದೇಟು ಹಾಕುತ್ತಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಾವು 2023 ರಲ್ಲಿ ಇದ್ದೇವೆ. ನಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಬೇಕು. ಯಾವುದೇ ತಂಡವು ತುಂಬಾ ದುರ್ಬಲವಲ್ಲ ಅಥವಾ ತುಂಬಾ ಬಲಿಷ್ಠವಲ್ಲ. ಆ ದಿನ ನೀವು ಹೇಗೆ ಪ್ರದರ್ಶನ ನೀಡುತ್ತೀರಿ? ಅದು ಮುಖ್ಯವಾಗಿದೆ’ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ರಜಾಕ್, ಭಾರತ ಯಾವಾಗಲೂ ನಮ್ಮೇದುರು ಸೋಲುತ್ತದೆ. ಆದ್ದರಿಂದ ಅವರು 1998 ರಿಂದ ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಣ ಸರಣಿಯನ್ನು ಆಡಿಲ್ಲ. ಆದರೆ ಈಗ ಎರಡೂ ತಂಡಗಳು ಉತ್ತಮವಾಗಿವೆ. ಪಾಕಿಸ್ತಾನ ತಂಡ ದುರ್ಬಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ನೀವು ಆಶಸ್ ಸರಣಿಯನ್ನು ವೀಕ್ಷಿಸಿ. ಯಾವ ತಂಡ ಉತ್ತಮವಾಗಿದೆ ಎಂದು ನೀವು ಹೇಳಬಲ್ಲಿರಾ? ಪ್ರದರ್ಶನ ನೀಡುವ ತಂಡ ಗೆಲ್ಲುತ್ತದೆ. ನಾವು ಪರಸ್ಪರ ದ್ವಿಪಕ್ಷೀಯ ಸರಣಿಯ ಪಂದ್ಯಗಳನ್ನು ಆಡಬೇಕಾಗಿದೆ ಎಂದು ರಜಾಕ್ ಹೇಳಿದ್ದಾರೆ.

ಉಭಯ ದೇಶಗಳ ದ್ವಿಪಕ್ಷೀಯ ಸರಣಿ
ಇನ್ನು ಉಭಯ ದೇಶಗಳ ದ್ವಿಪಕ್ಷೀಯ ಸರಣಿ ಬಗ್ಗೆ ಹೇಳುವುದಾದರೆ, 1999 ರಲ್ಲಿ ಪಾಕ್ ತಂಡ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬಂದಿತ್ತು. ಆ ನಂತರ ಉಭಯ ತಂಡಗಳು 2004 ರವರೆಗೆ ದ್ವಿಪಕ್ಷೀಯ ಸರಣಿಯನ್ನು ಆಡಲಿಲ್ಲ. 2004 ರಿಂದ 2007 ರ ನಡುವೆ ಭಾರತ ಮತ್ತು ಪಾಕಿಸ್ತಾನ ಏಕದಿನ ಮತ್ತು ಟೆಸ್ಟ್ ಸರಣಿಗಾಗಿ ಎರಡು ಬಾರಿ ಪರಸ್ಪರ ಪ್ರವಾಸ ಮಾಡಿದ್ದವು. ಆದರೆ 2007 ರಿಂದ ಈವರೆಗೆ ಸಾಂಪ್ರದಾಯಿಕ ಎದುರಾಳಿಗಳು ಕೇವಲ ಒಂದು ದ್ವಿಪಕ್ಷೀಯ ಸರಣಿಯನ್ನು ಮಾತ್ರ ಆಡಿವೆ. 2012/13 ರಲ್ಲಿ ಪಾಕಿಸ್ತಾನ ಎರಡು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ಇನ್ನು ಟೀಂ ಇಂಡಿಯಾ 2008 ರಲ್ಲಿ ಏಷ್ಯಾಕಪ್ಗಾಗಿ ಪಾಕಿಸ್ತಾನಕ್ಕೆ ಕೊನೆಯ ಭೇಟಿ ನೀಡಿತ್ತು. 2007 ರಿಂದ ಎರಡೂ ತಂಡಗಳು ಪರಸ್ಪರ ಟೆಸ್ಟ್ ಪಂದ್ಯವನ್ನು ಆಡಿಲ್ಲ.

By admin

Leave a Reply

Your email address will not be published. Required fields are marked *

error: Content is protected !!