ಹಾಸನ, ಮದುವೆಯಲ್ಲಿ ಸುಂದರವಾಗಿ ಕಾಣಲು ಬ್ಯೂಟಿಪಾರ್ಲರ್‌ಗೆ ಹೋದ ಯುವತಿಯ ಮುಖ ವಿಕಾರಗೊಂಡು ವರ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಅರಸೀಕೆರೆ ಗ್ರಾಮದ ವಧು ತಾನು ಮದುವೆಯಲ್ಲಿ ಚೆನ್ನಾಗಿ ಕಾಣಬೇಕೆಂದು ಸ್ಥಳೀಯ ಬ್ಯೂಟಿಪಾರ್ಲರ್‌ಗೆ ತೆರಳಿದ್ದಳು. ಆದರೆ ಬ್ಯೂಟಿಶಿಯನ್ ಮಾಡಿದ ಎಡವಟ್ಟಿನಿಂದಾಗಿ ಆಕೆಯ ಜೀವನದ ಸುಂದರ ಕ್ಷಣವೇ ನಿಂತು ಹೋಗಿದೆ. ಫೌಂಡೇಶನ್ ಬಳಿಕ ಉಗಿ ತೆಗೆದುಕೊಂಡಾಗ ವಧುವಿನ ಮುಖ ಸುಟ್ಟು ಊದಿಕೊಂಡಿದೆ. ಇದರಿಂದ ಆಕೆಯ ಮುಖ ಕಪ್ಪು ಬಣ್ಣಕ್ಕೆ ತಿರುಗಿದೆ.

ವಧುವಿನ ಮುಖ ಬದಲಾಗಿರುವುದನ್ನು ನೋಡಿದ ವರ ಮದುವೆಯನ್ನೇ ರದ್ದುಪಡಿಸಿದ್ದಾನೆ. ಇದೀಗ ಬ್ಯೂಟಿಪಾರ್ಲರ್ ಮಾಲಕಿ ಗಂಗಾ ಎಂಬಾಕೆಯ ವಿರುದ್ದ ವಧುವಿನ ಕುಟುಂಬದವರು ದೂರು ದಾಖಲಿಸಿದ್ದಾರೆ. ಪೊಲೀಸರು ಆಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!