ಮದುವೆಯಾದರೆ ಸಾವಿರಾರು ಸಮಸ್ಯೆ ಎಂದುಕೊಂಡಿರುವ ಯುವತಿಯೊಬ್ಬಳು ಇದೀಗ ವಿಷ್ಣು ದೇವರನ್ನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾಳೆ.

ರಾಜಸ್ಥಾನದ ಗೋವಿಂದಗಢ ಸಮೀಪದ ಪುಟ್ಟ ಗ್ರಾಮ ನರಸಿಂಘಪುರದ ನಿವಾಸಿ ಪೂಜಾ ಸಿಂಗ್ (30) ಸಂಸಾರದ ಜಂಜಾಟವೇ ಬೇಡವೆಂದು ದೇವರನ್ನೇ ಪತಿಯೆಂದು ಸ್ವೀಕಾರ ಮಾಡಿದ್ದಾಳೆ.

ಇನ್ನು ಯುವತಿಯೂ ಬಾಲ್ಯದಿಂದಲೂ ದೇವರ ಮೇಲೆ ಅಪಾರ ಭಕ್ತಿ ಬೆಳೆಸಿಕೊಂಡಿದ್ದು, ದೇವರ ಶಕ್ತಿಯ ಮುಂದೆ ಎಲ್ಲವೂ ಶೂನ್ಯ ಎಂದು ವಾದಿಸುತ್ತಿದ್ದಳು. ಮದುವೆಯವರು ಯಾವ ಗಂಡು ತೋರಿಸಿದರೂ ಒಪ್ಪದ ಪೂಜಾ ಇದೀಗ ದಿನಾ ಕಿತ್ತಾಟ. ಬೇಡದ್ದಕ್ಕೆಲ್ಲ ಪರದಾಟ. ಯಾರಿಗೆ ಬೇಕು ಆ ಬದುಕು? ಕಚ್ಚಾಟ ಮಾಡದ ಭಗವಂತನೇ ನನಗೆ ಸಾಕು ಎಂದಿದ್ದಾಳೆ.

ಗ್ರಾಮದ ವಿಷ್ಣು ಮಂದಿರದಲ್ಲಿ ಪೂಜಾ ಹಸೆ ಮಣೆ ಏರಿದ್ದು, ಆಕೆ ಈಗ ವಿಷ್ಣು ಪರಮಾತ್ಮನನ್ನು ಮದುವೆಯಾಗಿದ್ದಾಳೆ.

By admin

Leave a Reply

Your email address will not be published. Required fields are marked *

error: Content is protected !!