ಸುಳ್ಯ: ಸುಳ್ಯ ತಾಲೂಕಿನ ಬೆಳ್ಳಾರೆಯ ಯುವ ಉದ್ಯಮಿ ನವೀನ್ ಎಂಬವರನ್ನು ಅಪಹರಣ ಮಾಡಲಾಗಿದೆ ಎಂದು ನವೀನ್ ತಾಯಿ ದೂರು ದಾಖಲಿಸಿದ್ದಾರೆ. ಬೆಳ್ಳಾರೆ ಕಾಮದೇನು ಮಾದವ ಗೌಡರ ಪುತ್ರ ನವೀನ್ ಅಪಹರಣಕ್ಕೀಡಾದ ಯುವ ಉದ್ಯಮಿ ಯುವಕನಾಗಿದ್ದು, ಕೇರಳ ನೋಂದಣಿಯ ಅಂಬ್ಯುಲೆನ್ಸ್ ನಲ್ಲಿ ಅಪಹರಿಸಿದ್ದಾರೆ ಎಂದು ನವೀನ್ ತಾಯಿ ಗಂಭೀರ ಆರೋಪವನ್ನು ಮಾಡಿದ್ದು ಅಪಹರಣಕಾರರು ನವೀನ್ ರವರ ತಾಯಿಗೂ ಹಲ್ಲೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ. ಸದ್ಯ ನವೀನ್ ರವರ ತಾಯಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ನವೀನ್, ಕಿಡ್ನಾಪ್ ಆದ ಉದ್ಯಮಿ ದಿವ್ಯಪ್ರಭಾ, ಕಾಂಗ್ರೆಸ್ ನಾಯಕಿ

ಅಪಹರಣಕ್ಕೀಡಾದ ಯುವ ಉದ್ಯಮಿಯ ತಾಯಿ ಈ ಈ ಕೃತ್ಯವನ್ನು ಕಾಂಗ್ರೆಸ್ ದಿವ್ಯಪ್ರಭಾ ನಡೆಸಿದ್ದಾರೆ ಎಂದು ಗಂಭೀರ ರೀತಿಯಲ್ಲಿ ಆರೋಪಿಸಿದ್ದಾರೆ, ಬೆಳ್ಳಾರೆ ಠಾಣೆಯಲ್ಲಿ ಕೇಸು ನೀಡಿದರೂ ಪೋಲಿಸರು ಪ್ರಕರಣ ದಾಖಲಿಸಲಿಲ್ಲ ಎಂದು ಪೋಲಿಸ್ ಇಲಾಖೆಯ ವಿರುದ್ದ ಆರೋಪಿಸಿದ್ದಾರೆ.

ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾವಿನಮೂಲೆ ಧರ್ಮಶ್ರೀ ನಿಲಯದಲ್ಲಿ ನವೀನ್ ಅವರು ವಾಸ್ತವ್ಯವಿದ್ದು, ಮನೆಯಲ್ಲಿ ನವೀನ್ ಅವರ ತಾಯಿ ಮತ್ತು ಅವರ ಅಣ್ಣನ ಮಗನ ಪತ್ನಿ ಇದ್ದ ವೇಳೆ ಇಂದು‌ ಮಧ್ಯಾಹ್ನ 12:45 ರ‌ ಸುಮಾರಿಗೆ ಈ ಮನೆಗೆ ಕದಂಬ ಆಂಬ್ಯುಲೆನ್ಸ್ ಬಂದಿದೆ. ಅಂಬ್ಯುಲೆನ್ಸ್ ನಲ್ಲಿ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಅವರ ಪುತ್ರಿ ಸ್ಪಂದನಾ ಹಾಗೂ ಪರಶು ಎಂಬವರಲ್ಲದೇ ಇನ್ನೂ ಏಳೆಂಟು ಜನರ ತಂಡವಿತ್ತು‌ ಎನ್ನಲಾಗಿದೆ. ಅಂಬ್ಯುಲೆನ್ಸ್ ನಿಂದ ಇಳಿದು ಬಂದ ದುಷ್ಕರ್ಮಿಗಳು ಏಕಾಏಕಿ ನವೀನ್ ಅವರನ್ನು ಅಪಹರಿಸಲು ಯತ್ನಿಸಿದ್ದು, ತಡೆಯಲು ಹೋದ ನವೀನ್ ಅವರ ತಾಯಿ ಹಾಗೂ ಅತ್ತಿಗೆ ಮೇಲೆ ಹಲ್ಲೆಗ ನಡೆಸಿದ್ದು, ಕಾಲಿನಿಂದ ಒದ್ದು ನವೀನ್ ಅವರನ್ನು ಎಳೆದೊಯ್ದಿದ್ದಾರೆ ಎಂದು ನವೀನ್ ಅವರ ತಾಯಿ ಹೇಳಿಕೆ ನೀಡಿದ್ದಾರೆ.

ಅಲ್ಲದೇ ದುಷ್ಕರ್ಮಿಗಳ ಬಳಿ ತಲವಾರ್ ಕೂಡ ಇತ್ತು ಎನ್ನಲಾಗಿದ್ದು, ಈ ಬಗ್ಗೆ ಬೆಳ್ಳಾರೆ ಪೋಲಿಸ್ ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ ದೂರು ಪಡೆಯಲು ನಿರಾಕರಿಸಿದ್ದಾರೆ ಎಂದು ನವೀನ್ ಅವರ ತಾಯಿ ಆರೋಪಿಸಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಮಡಿಕೇರಿ ಬಳಿ ನವೀನ್ ಅವರನ್ನು ಅಪಹರಿಸಿರುವ ವಾಹನವನ್ನು ತಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.. ಪುತ್ತೂರಿನ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಕಾಂಗ್ರೆಸ್ ನ ಮಹಿಳಾ ನಾಯಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮತ್ತು ಆಕೆಯ ಮಗಳು ಸ್ಪಂದನಾ ಹಾಗೂ ಇನ್ನೂ‌ ಹಲವರು ಸೇರಿಕೊಂಡು ನವೀನ್ ಮಲ್ಲಾರ ಎಂಬವರನ್ನು ಅಪಹರಿಸಿರುವ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.

By admin

Leave a Reply

Your email address will not be published. Required fields are marked *

error: Content is protected !!