ಬೆಂಗಳೂರು: ನಿಷೆಧಿತ ಸಂಘಟನೆ ಪಿಎಫ್‌ಐ ಕಚೇರಿಗಳಿಗೆ ಪೊಲೀಸರು ಕಾರ್ಯಾಚರಣೆ ಮಾಡುವುದರ ಮುಖೇನ ಹಲವು ಕಚೇರಿಗಳನ್ನು ಸೀಲ್ ಮಾಡಿದ್ದಾರೆ ಹೊರತು ಪ್ರತ್ಯೇಕವಾಗಿ ಎಸ್‌ಡಿಪಿಐ ಕಚೇರಿಗಳನ್ನು ಸೀಲ್ ಮಾಡಿಲ್ಲ. ಪಿಎಫ್‌ಐ ತನ್ನ ಕಾರ್ಯಚಟುವಟಿಕೆಗಳಿಗೆ ಬಳಸುತ್ತಿದ್ದ ಎಸ್‌ಡಿಪಿಐ ಕಚೇರಿಗಳಲ್ಲಿ ಮಾತ್ರ ಶೋಧ ನಡೆಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಈ ಹಿನ್ನೆಲೆ ಇಂದು ಟ್ವೀಟ್ ಮಾಡಿರುವ ಅವರು ‘ಕಾನೂನಾತ್ಮಕ ಕ್ರಮದ ಉದ್ದೇಶದಿಂದ ಕೆಲವು ಕಚೇರಿಗಳ ಮೇಲೆ ದಾಳಿ ನಡೆದಿದೆ.

ಒಂದು ವೇಳೆ ಎಸ್‌ಡಿಪಿಐ ಕಚೇರಿ ಸೀಲ್ ಆಗಿದ್ದರೆ ಅಂತಹ ಸ್ಥಳಗಳ ಬಗ್ಗೆ ಮಾಹಿತಿ ನೀಡಿ’ ಎಂದು ಹೇಳಿದ್ದಾರೆ.

ಪಿಎಫ್‌ಐ ಕಚೇರಿಗಳ ಜೊತಗೆ ಎಸ್‌ಡಿಪಿಐ ಕಚೇರಿಗಳನ್ನೂ ಮುಚ್ಚಲಾಗಿದೆ ಎಂಬ ಆರೊಪ ಹಾಗೂ ವದಂತಿಗಳು ಬಂದಿರುವ ಕಾರಣಕ್ಕಾಗಿ ಎಡಿಜಿಪಿ ಅಲೋಕ್ ಕುಮಾರ್ ಟ್ವಿಟ್ ಮಾಡುವುದರ ಮೂಲಕ ಸ್ಪಷ್ಟನೆ ನೀಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!