ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿನ (NIA) ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಸೆಕ್ಷನ್ ಆಫೀಸರ್/ಆಫೀಸ್ ಸೂಪರಿಂಟೆಂಡೆಂಟ್, ಅಸಿಸ್ಟೆಂಟ್, ಅಕೌಂಟೆಂಟ್, ಸ್ಟೆನೋಗ್ರಾಫರ್ ಗ್ರೇಡ್-I ಮತ್ತು ಅಪ್ಪರ್ ಡಿವಿಷನ್ ಕ್ಲರ್ಕ್ (UDC) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

ಹುದ್ದೆಗಳ ಸಂಖ್ಯೆ: 48
ವಿಭಾಗ ಅಧಿಕಾರಿ/ಕಚೇರಿ ಅಧೀಕ್ಷಕರು –  03 ಹುದ್ದೆಗಳು
ಸಹಾಯಕ –  09 ಹುದ್ದೆಗಳು
ಅಕೌಂಟೆಂಟ್ –  01 ಹುದ್ದೆ
ಸ್ಟೆನೋಗ್ರಾಫರ್ ಗ್ರೇಡ್-I – 23 ಹುದ್ದೆಗಳು
ಅಪ್ಪರ್ ಡಿವಿಷನ್ ಕ್ಲರ್ಕ್ (UDC) –  12 ಹುದ್ದೆಗಳು
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್ ಪ್ರಾವಿಣ್ಯತೆ ಹೊಂದಿರಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಿ.

ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ವೇತನವಾಗಿ ರೂ. 44900 ರಿಂದ ರೂ. 142400 ವೇತನ ಸಿಗಲಿದೆ.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 56 ವರ್ಷಗಳು ಮೀರಿರಬಾರದು.

ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 28, 2022

ಅರ್ಜಿ ಕಳುಹಿಸಬೇಕಾದ ವಿಳಾಸ: SP- NIA Office, NIA Building, Opp, Lodhi Rd, CGO Complex, New Delhi- 110003

By admin

Leave a Reply

Your email address will not be published. Required fields are marked *

error: Content is protected !!