ಕುಂದಾಪುರ : ಹಿಂದೂ ಯುವತಿಯರ ಮೇಲೆ ಕಣ್ಣು ಹಾಕುವ ಜಿಹಾದಿಗಳ ಕಣ್ಣುಗಳನ್ನು ಕಿತ್ತು ಬಿಸಾಕಬೇಕು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು. ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ, ಕುಂದಾಪುರ ಪ್ರಖಂಡದಿಂದ ಲವ್ ಜಿಹಾದ್ ವಿರುದ್ಧ ನಡೆದ ಬೃಹತ್ ಪ್ರತಿಭಟನೆ, ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಶಿಲ್ಪಾಳದ್ದು ಆತ್ಮಹತ್ಯೆಯಲ್ಲ, ಜಿಹಾದಿಗಳ ಕೌರ್ಯದಿಂದ ನಡೆದ ಕೊಲೆಯೆಂದೇ ಭಾವಿಸಬಹುದು. ಮತ್ತೆ ಮತ್ತೆ ಇಂಥಹ ಘಟನೆಗಳು ಕಾಶ್ಮೀರ, ಕೇರಳದಂತೆ ಈ ಭಾಗದಲ್ಲಿಯೂ ನಡೆಯುತ್ತಿದೆ. ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ. ಲವ್ ಜಿಹಾದ್ ನಂತಹ ಕೃತ್ಯಗಳಿಗೆ ಮುಸ್ಲಿಂ ಮುಖಂಡರು ಸಹಕಾರ ಕೊಡುತ್ತಿದ್ದಾರೆ. ಇಂತಹ ಚಟುವಟಿಕೆಗಳನ್ನು ಮುಂದುವರಿಸಿದರೆ ತಕ್ಕ ಉತ್ತರ ಹಿಂದೂ ಸಮಾಜ ನೀಡಲಿದೆ. ಹಿಜಾಬ್ ವಿಚಾರದಲ್ಲಿ ಆರ್ಥಿಕ ನಿರ್ಭಂಧ ವಿಧಿಸಿದಂತೆ ಕುಂದಾಪುರದಲ್ಲಿಯೂ ಆರ್ಥಿಕ ಬಹಿಷ್ಕಾರ ಮಾಡಲಿದ್ದಾರೆ ಎಂದು ಗುಡುಗಿದರು.

ಕಳೆದ 20 ವರ್ಷಗಳಿಂದ ಲವ್ ಜಿಹಾದ್ ಮೂಲಕ ಇಸ್ಲಾಂಗೆ ಮತಾಂತರ ನಡೆಸುವ ಕೃತ್ಯ ನಡೆಯುತ್ತಲೆ ಬಂದಿದೆ. ಅದರ ಬಗ್ಗೆ ಸಮಾಜವನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಿಕೊಂಡು ಬಂದರೂ ಕೂಡಾ ಶಿಲ್ಪಾಳ ಸಾವಾಗಿದೆ. ನಮ್ಮ ಹಿಂದೂ ಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳಬೇಕಾಗಿದೆ. ಜಿಹಾದಿಗಳ ಷಡ್ಯಂತ್ರವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಶರಣ್ ಪಂಪ್ವೆಲ್ ಹೇಳಿದರು.

ಆರೋಪಿ ಅಜೀಜ್ನ ಬಂಧನವಾಗಿದೆ. ಆತನ ಪತ್ನಿ ಸಲ್ಮಾಳ ಬಂಧನವಾಗಬೇಕು, ಈ ಬಗ್ಗೆ ಉನ್ನತ ತನಿಖೆಯಾಗಬೇಕು. ಇದರ ಹಿಂದೆ ಯಾವ ಸಂಘಟನೆಯ ಕೈವಾಡ ಇದೆ ಎನ್ನುವುದು ಬಹಿರಂಗವಾಗಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲ್ಲಿದ್ದೇವೆ. ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.
ಮೃತ ಶಿಲ್ಪ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!