ತಮಿಳುನಾಡಿನ ತಿರುಚ್ಚಿಯಲ್ಲಿ 16 ವರ್ಷದ ಬಾಲಕಿಯೊಬ್ಬಳು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ 22 ವರ್ಷದ ಯುವಕ ಆಕೆಯನ್ನು 14 ಬಾರಿ ಇರಿದು ಕೊಂದಿದ್ದಾನೆ. ಆರೋಪಿ ವ್ಯಕ್ತಿಯನ್ನು ಕೇಶವನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಹುಡುಕುತ್ತಿದ್ದಾಗ ಆತನೂ ಕೂಡ ಶವವಾಗಿ ಪತ್ತೆಯಾಗಿದ್ದಾನೆ. ತಿರುಚ್ಚಿಯ ಅತಿಕುಲಂ ನಿವಾಸಿಯಾಗಿರುವ ಬಾಲಕಿ 11ನೇ ತರಗತಿಯಲ್ಲಿ ಓದುತ್ತಿದ್ದಳು. ಪರೀಕ್ಷೆ ಮುಗಿಸಿ ಸಂತ್ರಸ್ತೆ ತನ್ನ ಸಂಬಂಧಿಯನ್ನು ಭೇಟಿಯಾಗಲು ತೆರಳುತ್ತಿದ್ದಾಗ ಆರೋಪಿ ಕೇಶವನ್ ರೈಲ್ವೇ ಮೇಲ್ಸೇತುವೆ ಬಳಿ ಆಕೆಯನ್ನು ತಡೆದಿದ್ದಾನೆ.

ಕೇಶವನ್ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಜೂನ್ 2021ರಲ್ಲಿ ಅದೇ ಹುಡುಗಿಯನ್ನು ಅಪಹರಿಸಿದ್ದಕ್ಕಾಗಿ ಕೇಶವನ್ ಅವರನ್ನು ಈಗಾಗಲೇ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, 2012 (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಸಂತ್ರಸ್ತೆಯ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಅವರು ಈತ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಚೂರಿ ಇರಿತದ ದಿನ ತಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಕೇಶವನ್ ಬಾಲಕಿ ಆತನ ಪ್ರೀತಿ ನಿರಾಕರಿಸಿದಾಗ ಚಾಕುವಿನಿಂದ ಇರಿದಿದ್ದಾನೆ. ಜೊತೆಗೆ ಬಾಲಕಿ ಸಹಾಯಕ್ಕಾಗಿ ಕೂಗುವಾಗ ಕೇಶವನ್ ಆಕೆಗೆ 14 ಬಾರಿ ಇರಿದಿದ್ದಾನೆ. ಬಳಿಕ ಚಾಕುವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾನೆ. ಬಾಲಕಿ ಕೆಳಗೆ ಬಿದ್ದಿರುವುದನ್ನು ಕಂಡ ಪ್ರಯಾಣಿಕರು ಆಕೆಯ ದೇಹದಿಂದ ರಕ್ತ ಹರಿಯುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಕೆ ಚಿಂತಾಜನಕ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಆರೋಪಿಯನ್ನು ತಿರುಚ್ಚಿಯ ಪೋತಮೆಟ್ಟುಪಟ್ಟಿ ನಿವಾಸಿ ಕೇಶವನ್ ಎಂದು ಗುರುತಿಸಿರುವ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.ತನ್ನ ಪ್ರೇಮ ಪ್ರಸ್ತಾಪವನ್ನು ಒಪ್ಪದ ಅಪ್ರಾಪ್ತ ಬಾಲಕಿಗೆ ಕೇಶವನ್ 14 ಬಾರಿ ಚಾಕುವಿನಿಂದ ಇರಿದಿದ್ದಾನೆ. ಆತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಮೂರು ವಿಶೇಷ ತಂಡಗಳು ಶೋಧ ನಡೆಸುತ್ತಿದ್ದವು. ಮಂಗಳವಾರ ರಾತ್ರಿ ರೈಲ್ವೆ ಹಳಿ ಮೇಲೆ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!