ಆಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನದ ಗರ್ಭಗೃಹ ನಿರ್ಮಾಣಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಡಿಗಲ್ಲು ಹಾಕಲಿದ್ದಾರೆ. ಕೆತ್ತಿರುವ ಮೊದಲ ಇಟ್ಟಿಗೆಯನ್ನು ಗರ್ಭಗೃಹದಲ್ಲಿಟ್ಟು ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಒಟ್ಟು ಮೂರು ಗಂಟೆ ಅವಧಿ ದೇಗುಲಕ್ಕೆ ಸಮಯ ನೀಡಲಿದ್ದಾರೆ.

ಗರ್ಭಗೃಹ ನಿರ್ಮಾಣಕ್ಕೆ ರಾಜಸ್ಥಾನದ ಮಕ್ರನಾ ಪರ್ವತದ ಅಮೃತಶಿಲೆಯನ್ನು ಬಳಸಿಕೊಳ್ಳಲಾಗುತ್ತದೆ. ಒಟ್ಟು 13,300 ಕ್ಯೂಬಿಕ್‌ ಅಡಿಗಳಷ್ಟು ಶಿಲೆಗಳು ಇಲ್ಲಿ ಬಳಕೆಯಾಗಲಿವೆ. ಇವನ್ನೆಲ್ಲ ಸುಂದರ ಕೆತ್ತನೆಗಳಿಂದ ಅಲಂಕರಿಸಲಾಗಿದೆ.

ಇಡೀ ಶ್ರೀರಾಮ ದೇಗುಲ ನಿರ್ಮಾಣಕ್ಕೆ 8ರಿಂದ 9 ಲಕ್ಷ ಕ್ಯೂಬಿಕ್‌ ಅಡಿಗಳಷ್ಟು ಮರಳಗಲ್ಲು, 6.37 ಲಕ್ಷ ಗ್ರಾನೈಟ್‌, 4.70 ಲಕ್ಷ ಕ್ಯೂಬಿಕ್‌ ಅಡಿಗಳಷ್ಟು ಗುಲಾಬಿ ಮರಳಗಲ್ಲನ್ನು ಬಳಸಿಕೊಳ್ಳಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!