Tag: napatte

ಮೆಹಂದಿ ದಿನದಂದು ನಾಪತ್ತೆಯಾಗಿದ್ದ ಮಧುಮಗ ಬೆಂಗಳೂರಿನಲ್ಲಿ ಪತ್ತೆ-ಮನೆ ಮಂದಿಗೆ ಒಪ್ಪಿಸಿದ ಕೊಣಾಜೆ ಪೊಲೀಸರು

ಉಳ್ಳಾಲ, ಜೂ.17:  ಮೆಹಂದಿ ಶಾಸ್ತ್ರದಂದೇ ನಾಪತ್ತೆಯಾಗಿದ್ದ ವರ್ಕಾಡಿ ದೇವಂದಪಡ್ಪುವಿನ ಕಿಶನ್ ನನ್ನು ಕೊಣಾಜೆ ಪೊಲೀಸರು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಠಾಣೆಗೆ ಕರೆದು ತಂದಿದ್ದು ಮನೆಮಂದಿ ವಶಕ್ಕೆ ಒಪ್ಪಿಸಿದ್ದಾರೆ. ಕೊಣಾಜೆ ಪೊಲೀಸರು ಬೆಂಗಳೂರಿ‌ನ ಲಾಡ್ಜ್ ಒಂದರಲ್ಲಿದ್ದ ಕಿಶನ್ ನನ್ನು ಕರೆತಂದು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.…

ಬಂಟ್ವಾಳ: ಬೆಂಗಳೂರಿಗೆ ಹೋಗುವುದಾಗಿ ಹೇಳಿ ಯುವತಿ ನೇಹಾ ನಾಪತ್ತೆ-ಫೋನ್ ಸ್ವಿಚ್ ಆಫ್-ಕಾಲ್ ಮೆಸೇಜ್ ಮಾಡದೆ ಮನೆಗೆ ಪತ್ರ ಬರೆದ ಯುವತಿ-ಯುವತಿ ಬರೆದ ಪತ್ರದಲ್ಲೇನಿದೆ?

ಬಂಟ್ವಾಳ; ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ತಿಳಿಸಿದ ಯುವತಿಯೋರ್ವಳು ಅ ಬಳಿಕ ಯಾವುದೇ ಸುದ್ದಿಯಿಲ್ಲದೆ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿ.ಮೂಡ ಕಸ್ಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ರಮೇಶ್ ಸಾಲಿಯಾನ್ ಅವರ ಮಗಳು ನೇಹಾ…

ಮಂಗಳೂರು: ನಾಪತ್ತೆಯಾಗಿದ್ದ ಯುವತಿ ವಾರದ ಬಳಿಕ ಪ್ರಿಯಕರನೊಂದಿಗೆ ವಿವಾಹವಾಗಿ ಪತ್ತೆ

ಮಂಗಳೂರು, ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ಪತ್ತೆಯಾಗಿದ್ದಾಳೆ. ನಾಪತ್ತೆಯಾಗಿದ್ದ ಕಮಲಾಕ್ಷ ಎಂಬವರ ಪುತ್ರಿ, ನಗರದ ಫೈನಾನ್ಸ್‌ ಕಂಪನಿಯೊಂದರ ಉದ್ಯೋಗಿ ಶಿವಾನಿ (20)ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದು, ಪೊಲೀಸರು ತಂತ್ರಜ್ಞಾನ ಮಾಹಿತಿ ಆಧಾರದಲ್ಲಿ ಪತ್ತೆ ಮಾಡಿ ಕರೆ ತಂದಿದ್ದಾರೆ. ಜ.24ರಂದು…

ಕಾಲೇಜಿನಿಂದ ಅನುಮತಿ ಪಡೆದು ಮನೆಗೆ ಹೊರಟ ವಿದ್ಯಾರ್ಥಿನಿ ನಾಪತ್ತೆ

ಉಡುಪಿ: ಉಡುಪಿಯ ಕಾಲೇಜಿನಿಂದ ಅನುಮತಿ ಪಡೆದು ಹೊರ ಹೋದ ವಿದ್ಯಾರ್ಥಿನಿ, ಪಡುಬೆಳ್ಳೆ ನಿವಾಸಿ ಸ್ಟೀಫನ್ ಅಮ್ಮನ್ನ ಎಂಬವರ ಪುತ್ರಿ ರಿಯೋನಾ ಅಮ್ಮನ್ನ(20) ಎಂಬವರು ನಾಪತ್ತೆಯಾಗಿದ್ದಾರೆ. ಈಕೆ ಜ.13ರಂದು ಉಡುಪಿಯ ಕಾಲೇಜಿಗೆ ಹೋಗಿದ್ದು, ಮಧ್ಯಾಹ್ನ ಅನುಮತಿ ಪಡೆದು ಹೊರ ಹೋಗಿದ್ದಳು. ಆ ಬಳಿಕ…

1 ವರ್ಷದ ಹೆಣ್ಣು ಮಗುವಿನೊಂದಿಗೆ ತಾಯಿ ಅನ್ಸಿಯಾ ನಾಪತ್ತೆ

ಉಡುಪಿ: ತನ್ನ ಒಂದು ವರ್ಷದ ಹೆಣ್ಣು ಮಗುವಿನೊಂದಿಗೆ ಮನೆಯಿಂದ ಹೋದ ಮಹಿಳೆಯೊಬ್ಬರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿರುವ ಘಟನೆ ಪಡುತೋನ್ಸ್ ಗ್ರಾಮ ಹೊಡೆಯಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಹೂಡೆಯ ನಿವಾಸಿ ಉಸ್ತಾದ್ ಝುಬೈರ್ ಎಂಬವರ ಪತ್ನಿ ಅನ್ಸಿಯಾ‌ (32) ಹಾಗೂ ಅವರ ಒಂದು…

ಪುತ್ತೂರು ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

ಪುತ್ತೂರಿನ ವಸತಿ ಶಾಲೆಯೊಂದರಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದ ಮೈಸೂರಿನವರಾದ ತಿಪ್ಪೇಶ್ ಮತ್ತು ಅಭೀಷೆಕ್ ನವೆಂಬರ್ 7ರ ಸಂಜೆಯಿಂದ ನಾಪತ್ತೆಯಾಗಿದ್ದಾರೆ.ಶಾಲೆ ಮುಗಿಸಿದ ಇಬ್ಬರೂ ಮತ್ತೆ ತಮ್ಮ ಹಾಸ್ಟೆಲ್‌ಗೆ ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ಶಾಲಾ ಆಡಳಿತ ಸಮಿತಿ…

ಶಾಲೆಗೆ ಹೊರಟ 12ರ ಬಾಲಕಿ ನಾಪತ್ತೆ

ಶಾಲಾ ಬಾಲಕಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‌‌ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹುರುಡಿ ಗ್ರಾಮದ ನಿವಾಸಿಪುಟ್ಟರಾಜ್ ಅವರ ಮಗಳು ಕಲ್ಲಡ್ಕದ ಅಮ್ಟೂರಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿರುವ ಪೃಥ್ವಿ (12) ಕಾಣೆಯಾದ ಬಾಲಕಿ. ಪುಟ್ಟರಾಜ್…

ತಾಯಿ ಮನೆಗೆ ತೆರಳಿದ ವಿವಾಹಿತ ಮಹಿಳೆ ನಾಪತ್ತೆ

ವಿಟ್ಲ: ವಿವಾಹಿತ ಮಹಿಳೆ ಪೇಟೆಗೆಂದು ಹೋದವರು ಹಿಂತಿರುಗಿ ಬಾರದೇ ನಾಪತ್ತೆಯಾಗಿರುವ ಬಗ್ಗೆ ವಿಟ್ಲ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ನಾಗೇಶ್ ಅವರ ಪತ್ನಿ ಕವಿತಾ(29) ನಾಪತ್ತೆಯಾದ ಮಹಿಳೆ. ಕವಿತಾ ಮಂಗಳೂರು ರಸ್ತೆಯಲ್ಲಿರುವ ಎನ್. ಆರ್.…

ಮಣಿಪಾಲ ಕಾಲೇಜಿನ 18 ವರ್ಷದ ವಿದ್ಯಾರ್ಥಿ ಸಚಿನ್ ನಾಪತ್ತೆ

ಮಣಿಪಾಲ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಮಣಿಪಾಲದ ಎಂಜೆಸಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಸಚಿನ್ (18) ಅಕ್ಟೋಬರ್ 20 ರಿಂದ ನಾಪತ್ತೆಯಾಗಿದ್ದಾರೆ.ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೈಸಾಲದ ಸುಳಿಯಲ್ಲಿ ಸಿಲುಕಿ 2 ಲಕ್ಷ ಬ್ಯಾಂಕ್ ಸಾಲ ಪಡೆದು ಯುವಕ ನಾಪತ್ತೆ

ಹಣವಿದ್ದ ಬ್ಯಾಗ್‌ನೊಂದಿಗೆ ಮನೆಯಿಂದ ಹೋದ ಯುವಕನೋರ್ವ ಮನೆಗೂ ಬಾರದೆ, ಕೆಲಸಕ್ಕೆ ಹಾಜರಾಗದೇ ನಾಪತ್ತೆಯಾಗಿದ್ದಾನೆ. ನಗರದ ಮಾಯಾ ಟ್ರೇಡರ್ಸ್‌ನಲ್ಲಿ ಉದ್ಯೋಗಿಯಾಗಿರುವ ಕೃಷ್ಣ ಶೆಣೈ (23) ನಾಪತ್ತೆಯಾದ ಯುವಕ. ಈತನ ತಂದೆ ಪಾಡುರಂಗ ಶೆಣೈ ಬರ್ಕೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.ಕೃಷ್ಣ ಮೂರು…

error: Content is protected !!