ಮಂಗಳೂರು, ಶ್ರೀ ರಾಮನನ್ನು ಅವಮಾನ ಮಾಡಿದ ಆರೋಪ ಪ್ರಕರಣ ಹಲವು ಆಯಾಮಗಳನ್ನು ಪಡೆದುಕೊಂಡು ಅಂತಿಮವಾಗಿ ಶಿಕ್ಷಕಿಯನ್ನು ವಜಾ ಮಾಡಲಾಗಿದೆ. ಸಂವಿಧಾನವೆಂಬ ಪವಿತ್ರ ಗಂಥವನ್ನು ಮುಂದಿಟ್ಟು ಸಮಾನತೆಯ ತತ್ವದೊಂದಿಗೆ ಶಿಕ್ಷಣ ಧಾರೆ ಎರೆಯುವ ವೇಳೆ ಜಾತಿ, ಧರ್ಮ, ಮೇಲೂ ಕೀಳು ಎಂಬುವ ವ್ಯತ್ಯಾಸಗಳನ್ನು ಕಂಡುಕೊಳ್ಳಲು ಅವಕಾಶಗಳಿಲ್ಲ. ತಪ್ಪು ಯಾರೇ ಮಾಡಿದ್ದರೂ ಅದನ್ನು ಸಮರ್ಥಿಸಿಕೊಳ್ಳಲು ಅವಕಾಶಗಳೇ ಇಲ್ಲ. ಶಾಲಾ ಶಿಕ್ಷಕಿ ಮೇಲ್ನೋಟಕ್ಕೆ ತಪ್ಪು ಮಾಡಿರುವುದು ಕಂಡುಬರುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಒಂದೊಮ್ಮೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ಕೋರ್ಟ್ ಎಷ್ಟರ ಮಟ್ಟಿಗೆ ಈ ಸಾಕ್ಷಿ ಒಪ್ಪಿಕೊಳ್ಳುತ್ತದೆ ಎಂಬುವುದು ಪ್ರಶ್ನಾತೀತ. ವಿದ್ಯಾರ್ಥಿಗಳು ಅಪ್ರಾಪ್ತರು. ಕೋರ್ಟ್ ಅವರ ಹೇಳಿಕೆಗಳನ್ನು ಪರಿಗಣಿಸದೇ ಇರಬಹುದು. ಒಂದೊಮ್ಮೆ ಪರಿಗಣಿಸಿದ್ದಲ್ಲಿ,ಪ್ರತಿ ದೂರು ಸಲ್ಲಿಸಿ ಅಂತಹ ಮಾತುಗಳನ್ನು ಶಿಕ್ಷಕಿ ಹೇಳಿಲ್ಲವೆಂದು ವಾದಿಸಬಹುದು. ಮತ್ತೊಂದು ಸಮುದಾಯದ ವಿದ್ಯಾರ್ಥಿಗಳನ್ನು ಇಲ್ಲಿ ಸಾಕ್ಷಿ ನುಡಿಯಲು ಎತ್ತಿಕಟ್ಟಲೂ ಬಹುದು. ಈ ವೇಳೆ ದಾಖಲೆ ಹುಡುಕಾಡಿದರೆ ಹೇಳಿಕೆ ಎಲ್ಲೂ ದಾಖಲಾಗಿಲ್ಲ ಎನ್ನುವ ಕಾರಣಕ್ಕೆ ಪ್ರಕರಣ ಶಿಕ್ಷಕಿಯ ಪರವಾಗಬಹುದು.

ಫೋಟೋ ವೈರಲ್ ಮಾಡಿದವರಿಗೆ ಸಂಕಷ್ಟ!

ಯಾವುದೇ ವ್ಯಕ್ತಿಯ ಬಗ್ಗೆ ಅವಹೇಳನ, ಮಾನಹಾನಿಯಾಗುವಂತೆ ನಿಂದಿಸುವಂತೆ ಅಥವಾ ಚಿತ್ರಹಿಂಸೆ ನೀಡುವ ರೀತಿಯಲ್ಲಿ ಮಾಡಿದ್ದಲ್ಲಿ ಅನುಭವಿಸುವ ವ್ಯಕ್ತಿ ಆರೋಪಿದಾತನ ವಿರುದ್ಧ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮ್ಮೆ ಹೂಡಬಹುದು. ಇಲ್ಲಿ ಶಿಕ್ಷಕಿಗೆ ಈ ಅವಕಾಶಗಳು ಹೆಚ್ಚಿವೆ. ಮಾನನಷ್ಟ ಮೊಕದ್ದಮೆ ಹೂಡಿದ್ದಲ್ಲಿ ಶಾಸಕರಿಗೂ, ಸಂಘಟನೆಯ ಮುಖಂಡರಿಗೂ ಏನೂ ಮಾಡಲು ಅಸಾಧ್ಯ. ಶಿಕ್ಷಕಿ ತಪ್ಪು ಮಾಡಿದ್ದಲ್ಲಿ ಅವರ ವಿರುದ್ಧ ಶಾಲಾ ಆಡಳಿತ ಹಾಗೂ ಶಿಕ್ಷಣ ಇಲಾಖೆ ಅಥವಾ ಪೊಲೀಸರಿಗೆ ದೂರು ನೀಡಲು ಅವಕಾಶವಿದೆ. ಅದನ್ನು ಬಿಟ್ಟು ಫೋಟೋ ವೈರಲ್ ಮಾಡಲು ಅವಕಾಶಗಳಿಲ್ಲ. ಪೋಟೋ ವೈರಲ್ ಮಾಡಿದ ಅಷ್ಟೂ ಜನರಿಗೆ ಮಾಧ್ಯಮಗಳಿಗೆ ಕೋರ್ಟ್ ನೋಟೀಸ್ ನೀಡಬಹುದು.

ಶಾಸಕರಿಗೆ ಅನರ್ಹತೆಯ ಶಿಕ್ಷೆ!

ಶಾಸಕ ಜನರ ಪ್ರತಿನಿಧಿ. ಒಂದು ಸಮುದಾಯದ ಪ್ರತಿನಿಡಿಯಾಗಲು ಅಸಾಧ್ಯ. ಕಾಂಗ್ರೆಸ್ ನವರು ಶಾಲೆಗೆ ತೆರಳಿದರು ಎಂದ ಮಾತ್ರಕ್ಕೆ ಸೇಡು ತೀರಿಸಿಕೊಳ್ಳಲು ಗೇಟ್ ಬಳಿ ಬಂದು ಗಲಾಟೆ ಮಾಡುವುದು ಶಾಸಕನ ಕೆಲಸವಲ್ಲ. ಅಧಿಕಾರಿಗಳೊಂದಿಗೆ ಹಾಗೂ ಸಂಸ್ಥೆಯೊಂದಿಗೆ ಸಭೆ ನಡೆಸಿ ಸಭೆಯಲ್ಲಿ ಸೂಚನೆ ಎಚ್ಚರಿಕೆ ನೀಡಬಹುದು. ಆ ಬಳಿಕವೂ ಕ್ರಮ ವಹಿಸದೇ ಇದ್ದಲ್ಲಿ ಹೋರಾಟಕ್ಕೆ ಮುಂದಾಗಬಹುದು.

ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತಿದ್ದು!

ಜೈ ಶ್ರೀರಾಮ್ ಘೋಷಣೆ ಕೂಗಿ ಶಿಕ್ಷಕಿಯರನ್ನು ಅವಮಾನ ಮಾಡಿ ಎಂದು ಗೇಟ್ ಬಳಿಯಿಂದ ಸೂಚಿಸಿದ್ದು.

ಪೇಪರ್ ಕಿತ್ತು ಗಲಾಟೆಗೆ ಮುಂದಾಗಿದ್ದು!

ಶಿಕ್ಷಕಿಯೊಬ್ಬರು ಶಾಸಕರ್ ಮುಂದೆ ಆದೇಶದ ಪ್ರತಿ ಓದುವ ವೇಳೆ ಪೇಪರ್ ಕಿತ್ತು ಗಲಾಟೆಗೆ ಮುಂದಾಗಿದ್ದು ವೀಡಿಯೋಗಳಲ್ಲಿ ದಾಖಲಾಗಿದೆ.

ಮುಂದೆ ನಡೆಯುವ ಗಲಾಟೆಗಳಿಗೆ ನಾವು ಹೊಣೆಯಲ್ಲ!

ಓರ್ವ ಶಾಸಕನಾಗಿ ಗಲಾಟೆ ಘರ್ಷಣೆಯನ್ನು ಶಾಂತಗೊಳಿಸುವ ಬದಲು ಗಲಾಟೆಗೆ ಪ್ರಚೋದನೆ ನೀಡಿದ್ದಾರೆ. ಇದರಲ್ಲಿ ಶಾಸಕರ ಉದ್ದೇಶವೇನು ಎಂಬುವುದು ಬಹಿರಂಗಗೊಂಡಿದೆ.

ಜಿಲ್ಲಾಧಿಕಾರಿ, ಶಿಕ್ಷಣಾಧಿಕಾರಿಯವರನ್ನು ನಿಂದಿಸಿ ಅವಮಾಣಿಸಿದರೂ ಯಾರೂ ಶಾಸಕರನ್ನು ಪ್ರಶ್ನಿಸಿಲ್ಲ. ಅದಕ್ಕೆ ಅವಕಾಶವೂ ಇರಲಿಲ್ಲ. ಸರಕಾರದ ಹಂತದಲ್ಲೂ ಯಾವುದೇ ಶಿಸ್ತು ಕ್ರಮಕೈಗೊಂಡಿಲ್ಲ.

ರಾಮನನ್ನು ಅವಮಾನಿಸಿದ ಶಾಲೆಗೆ ಹೋಗಲ್ಲ ಎಂದು ಒಮ್ಮೆ ಹೇಳಿದರೆ, ಅದೇ ವ್ಯಕ್ತಿ ನನ್ನನ್ನು ಶಾಲೆಯೊಳಗೆ ಕರೆಸಿಕೊಂಡಿಲ್ಲ ಎಂದು ಆವಾಜ್ ಹಾಕಲು ಮುಂದಾಗುತ್ತಾರೆ.

ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ಶಾಸಕರ ಉದ್ದೇಶವೇನು ಎಂಬುವುದು ಸ್ಪಷ್ಟವಾಗುತ್ತದೆ.

ಸಂವಿಧಾನಿಕ ಸ್ಥಾನದಲ್ಲಿರುವ ಶಾಸಕರೊಬ್ಬರು ಮತೀಯವಾದವನ್ನು ತುಂಬಿಕೊಂಡು ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಮಾಡುವ ವೇಳೆ ಅವರ ವಿರುದ್ಧವೂ ಕ್ರಮಕೈಗೊಳ್ಳುವ ಅಗತ್ಯವಿದೆ. ಹೇ

By admin

Leave a Reply

Your email address will not be published. Required fields are marked *

error: Content is protected !!