ಅದೆಷ್ಟೋ ಮಹಿಳೆಯರು ಮದುವೆಯಾದ ಬಳಿಕ ಸಾಧನೆಯನ್ನು ಮಾಡಲೇ ಸಾಧ್ಯವಿಲ್ಲ ಎನ್ನುವವರ ಮಧ್ಯೆ ಸಣ್ಣ ವಯಸ್ಸಿನ್ನಲ್ಲಿ ವಿವಾಹವಾಗಿ ಅನೇಕ ಕೌಟುಂಬಿಕ ಸಮಸ್ಯೆಗಳನ್ನೂ ಮೆಟ್ಟಿನಿಂತು ಸಾಧನೆ ಗೈದ ಒಬ್ಬ ಮಹಿಳೆಯ ಸಾಧನೆಯ ಯಶೋಗಾಥೆಯನ್ನು ತಿಳಿಯೋಣ.

ಹೌದು ಇವರ ಹೆಸರು ಸವಿತಾ ಪ್ರಧಾನ್ ಇವರು ಮಧ್ಯಪ್ರದೇಶದ ಮಂಡೈ ಗ್ರಾಮದಲ್ಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಸವಿತಾ ಪ್ರಧಾನ್ ಅವರ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟೊಂದು ಅನುಕೂಲಕರವಾಗಿರಲಿಲ್ಲ ಇವರು ಬಾಲ್ಯದಿಂದಲೇ ಬಡತನವನ್ನು ಅನುಭವಿಸಿದ್ದರು

ಬಾಲ್ಯದಿಂದಲೇ ಇವರಿಗೆ ಓದುವುದರಲ್ಲಿ ಆಸಕ್ತಿ ಹೆಚ್ಚಾಗಿಯೇ ಇತ್ತು ಹಾಗೂ ಅವರು ಶಾಲೆ ಹಾಗೂ ಕಾಲೇಜಿನಲ್ಲಿ ಸ್ಕಾಲರ್ಶಿಪ್ ಅನ್ನು ಪಡೆಯುತ್ತಿದ್ದು ಆದ್ದರಿಂದ ಅವರ ಪೋಷಕರು ಅವರಿಗೆ ವಿಧ್ಯಾಭ್ಯಾಸವನ್ನು ಕೊಡಿಸಿದ್ದರು.

ತಮ್ಮ ಹಳ್ಳಿಯಲ್ಲಿ 10ನೇ ತರಗತಿ ಮುಗಿಸಿದ ಮೊದಲ ಹುಡುಗಿ. ನಂತರ ಅವರು 7 ಕಿಲೋಮೀಟರ್ ದೂರದ ಕಾಲೇಜಿನಲ್ಲಿ ಪ್ರವೇಶ ಪಡೆದರು. ಕಾಲೇಜಿಗೆ ಬಸ್ ಹತ್ತಿಕೊಂಡು ಹೋದರೆ ಬಸ್ ದರ ಸಹ ಕೊಡುವ ಪರಿಸ್ಥಿತಿಯಲ್ಲಿ ಅವರು ಇರಲಿಲ್ಲ ಅಂತಹ ಪರಿಸ್ಥಿತಿ ಅವರದಾಗಿತ್ತು, ತಾಯಿ ವಿವಿದೆಡೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಅದರಿಂದ ಬಂದ ಹಣವನ್ನು ಮಗಳಿಗಾಗಿ ಕೊಡುತ್ತಿದ್ದರು, ಅಂತಿಮವಾಗಿ ಇವರು ಕಾಲೇಜು ಇರುವ ಸ್ಥಳದಲ್ಲೇ ಸ್ಥಳಾಂತರಗೊಂಡರು.

ಸವಿತಾ ರವರು ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ವೈದ್ಯರಾಗುವ ಕನಸನ್ನು ಹೊಂದಿದ್ದರು. ಇವರ ವಿದ್ಯಾಭ್ಯಾಸ ಮುಗಿಸುತ್ತಿದ್ದಂತೆ ಶ್ರೀಮಂತ ಕುಟುಂಬವೊಂದು ಆಕೆಗೆ ಮದುವೆ ಪ್ರಸ್ತಾಪ ಮಾಡಿತ್ತು, ಆಗ ಅವರಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಆದರೆ ಅವರ ಕುಟುಂಬ ಅವರನ್ನು ಒತ್ತಾಯದಿಂದ ಮದುವೆಯನ್ನು ಮಾಡಿಸಿದರು.

ಇವೆಲ್ಲದ್ದಕ್ಕಿಂತಲೂ ಇವರ ಮದುವೆಯ ಬಳಿಕ ಇವರಿಗೆ ಮೊದಲಿಗಿಂತ ದುಪ್ಪಟ್ಟು ಕಷ್ಟಗಳು ಎದುರಾದವು ಅವರ ಗಂಡ ಹಾಗೂ ಅತ್ತೆಯಿಂದ ಅನೇಕ ತೊಂದರೆ ಗಳನ್ನು ಕೊಡುತ್ತಿದ್ದು ಕೌಟುಂಬಿಕ ಹಾಗೂ ಮಾನಸಿಕವಾಗಿ ಹಿಂಸೆಯನ್ನು ನೀಡಿದರು. ನಿರಂತರವಾಗಿ ಪತಿ ಅವರಿಗೆ ದೈಹಿಕ ಹಿಂಸೆ ಹಾಗೂ ಕೊಲೆ ಬೆದರಿಕೆಯನ್ನು ಕೂಡಾ ಹಾಕುತ್ತಿದ್ದರು.

ಇವೆಲ್ಲ ಕಷ್ಟವನ್ನು ಸಹಿಸಿ ಸಹಿಸಿ ಇನ್ನು ಇವನ್ನು ಸಹಿಸುವುದಕ್ಕಿಂತ ಸಾಯುವುದೇ ವಾಸಿ ಎಂದು ಕೊಂಡು ಫ್ಯಾನಿಗೆ ನೇಣನ್ನು ಹಾಕಿಕೊಳ್ಳಲು ಮುಂದಾದಾಗ ಅವರ ಅತ್ತೆ ಹಾಗೂ ಮನೆಯವರು ಇವರು ಸಾಯುದನ್ನೂ ಯಾವುದೇ ಕರುಣೆ ಇಲ್ಲದೇ ನೋಡುತ್ತಿರುವುದನ್ನು ಕಂಡು ಇಂತಹಾ ಜನರಿಗಾಗಿ ತನ್ನ ಪ್ರಾಣವನ್ನು ತ್ಯಜಿಸುವುದು ವ್ಯರ್ಥ ಅಂತ ಸವಿತಾ ಅರ್ಥ ಮಾಡಿಕೊಂಡರು.

ಇವೆಲ್ಲ ವನ್ನೂ ನೋಡಿ ನಾನು ನನ್ನ ಮಕ್ಕಳಿಗೋಸ್ಕರ ಆದರೂ ಬದುಕ ಬೇಕು ಬದುಕಿ ಏನಾದರೂ ಸಾಧಿಸಬೇಕು ಎಂದು ಹಠವನ್ನು ಹಿಡಿದುಕೊಂಡು ತನ್ನ ಇಬ್ಬರು ಮಕ್ಕಳೊಂದಿಗೆ ಹಾಗೂ ಕೇವಲ 2700 ರೂ. ಗಳನ್ನು ಹಿಡಿದುಕೊಂಡು ಗಂಡನ ಮನೆಯನ್ನು ಬಿಟ್ಟುಬಂದರು.

ಮನೆಯಿಂದ ಹೊರಟು ಬಂದ ಅವರು ಬ್ಯೂಟಿ ಸಲೂನ್ ಸ್ಥಾಪಿಸಿದರು ಹಾಗೂ ಮಕ್ಕಳಿಗೆ ಟ್ಯೂಷನ್ ಕೊಟ್ಟು ಜೀವನ ಸಾಗಿಸುತ್ತಿದ್ದರು. ಇವರ ಈ ಸಮಸ್ಯೆಗಳನ್ನು ಅರಿತ ಅವರ ಪೋಷಕರು ಹಾಗೂ ಒಡಹುಟ್ಟಿದವರು ಆಕೆಯನ್ನು ಬೆಂಬಲಿಸಿದರು.

ಬಳಿಕ ಅವರು ಭೋಪಾಲ್ನ ಬರ್ಕತುಲ್ಲಾ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಬಿಎಗೆ ಸೇರಿಕೊಂಡರು. ಆ ಬಳಿಕ ಅವರಿಗೆ ನಾಗರಿಕ ಸೇವೆಗಳ ಬಗ್ಗೆ ಅರಿವಾಯಿತು.

ನಂತರ ಅವರು ರಾಜ್ಯ ನಾಗರಿಕ ಸೇವೆಗಳ ಬಗ್ಗೆ ತಿಳಿದುಕೊಂಡರು ಮತ್ತು ಆ ಪರೀಕ್ಷೆಗೆ ತಯಾರಿ ನಡೆಸಿ ಅದನ್ನು ಬರೆದರು. ತಮ್ಮ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆ ಪಾಸ್ ಮಾಡಿ ತಮ್ಮ 24ನೇ ವಯಸ್ಸಿನಲ್ಲಿ ಅವರು ಮುಖ್ಯ ಪುರಸಭೆಯ ಅಧಿಕಾರಿಯಾಗಿ ನೇಮಕಗೊಂಡರು.

By admin

Leave a Reply

Your email address will not be published. Required fields are marked *

error: Content is protected !!