ಮಂಡ್ಯ: ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಜಾಮೀನು ಮಂಜೂರು ಮಾಡಿ ಶ್ರೀರಂಗಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಭಾಕರ್ ಭಟ್‌ಗೆ ಜಾಮೀನು ಮಂಜೂರು ಮಾಡುವ ವೇಳೆ ಮಹತ್ವದ ಅಂಶವೊಂದನ್ನು ಉಲ್ಲೇಖಿಸಿದ್ದ ನ್ಯಾಯಾಲಯವು, ಆರೋಪಿಯು ಇನ್ನು ಮುಂದೆ ಯಾವುದೇ ದ್ವೇಷ ಭಾಷಣ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಒಂದು ವೇಳೆ ದ್ವೇಷ ಭಾಷಣ ಮಾಡಿದ ಬಗ್ಗೆ ದೂರು ದಾಖಲಾದರೆ ಈಗ ಸಿಕ್ಕಿರುವ ಜಾಮೀನು ರದ್ದಾಗುತ್ತದೆ ಎಂದು ಹೇಳಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪತ್ರಕರ್ತ ನವೀನ್ ಸೂರಿಂಜೆ, “ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡುವಂತಿಲ್ಲ. ದ್ವೇಷ ಭಾಷಣ ಮಾಡಿದ ಬಗ್ಗೆ ದೂರು ದಾಖಲಾದರೆ ಈಗ ಸಿಕ್ಕಿರುವ ಜಾಮೀನು ರದ್ದಾಗುತ್ತದೆ’
ಶ್ರೀರಂಗಪಟ್ಟಣ ನ್ಯಾಯಾಲಯ ಜಾಮೀನು ನೀಡುವ ವೇಳೆ “ಆರೋಪಿಯು ಯಾವುದೇ ಕಾರಣಕ್ಕೂ ಇಂತಹ ಕೃತ್ಯವನ್ನು ಪುನರಾವರ್ತಿಸಬಾರದು. ಈ ರೀತಿಯ ಆರೋಪಗಳನ್ನು ಮತ್ತೆ ಎದುರಿಸಬಾರದು” ಎಂದು ಷರತ್ತು ವಿಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡುವಂತಿಲ್ಲ. ದ್ವೇಷ ಭಾಷಣ ಮಾಡಿದ ಬಗ್ಗೆ ದೂರು ದಾಖಲಾದರೆ ಈಗ ಸಿಕ್ಕಿರುವ ಜಾಮೀನು ರದ್ದಾಗುತ್ತದೆ’
ಶ್ರೀರಂಗಪಟ್ಟಣ ನ್ಯಾಯಾಲಯ ಜಾಮೀನು ನೀಡುವ ವೇಳೆ ಆರೋಪಿಯು ಯಾವುದೇ ಕಾರಣಕ್ಕೂ ಇಂತಹ ಕೃತ್ಯವನ್ನು ಪುನರಾವರ್ತಿಸಬಾರದು. ಈ ರೀತಿಯ ಆರೋಪಗಳನ್ನು ಮತ್ತೆ ಎದುರಿಸಬಾರದು” ಎಂದು ಷರತ್ತು ವಿಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.
“ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಇರುವ ಹಲವು ಖಾಯಿಲೆಗಳು, ವಯಸ್ಪೂ ಸೇರಿದಂತೆ ಕೆಲ ವಿಷಯಗಳನ್ನು ಆಧರಿಸಿ ಕೋರ್ಟ್ ಜಾಮೀನು ನೀಡಿದೆ. ಇನ್ಮುಂದೆ ಕಲ್ಲಡ್ಕ ಪ್ರಭಾಕರ್ ಭಟ್ ಎಲ್ಲೇ ದ್ವೇಷ ಭಾಷಣ ಮಾಡಿದರೂ ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನೀವು ದಾಖಲಿಸಿದ ಎಫ್‌ಐಆರ್ ಗೂ ಜಾಮೀನು ಸಿಗಲ್ಲ, ಈಗ ಶ್ರೀರಂಗಪಟ್ಟಣದಲ್ಲಿ ಸಿಕ್ಕಿರುವ ಜಾಮೀನೂ ರದ್ದಾಗುತ್ತದೆ. ಸ್ವಸ್ಥ ಸಮಾಜಕ್ಕಾಗಿ ಇಷ್ಟು ಮಾಡುವುದು ಅನಿವಾರ್ಯ”

By admin

Leave a Reply

Your email address will not be published. Required fields are marked *

error: Content is protected !!