ಪುತ್ತೂರು : ನಗರಸಭೆ ಉಪಚುನಾವಣೆ ಸಂದರ್ಭ ಮಹತ್ವದ ಬೆಳವಣಿಗೆ : ಬಿಜೆಪಿ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಡಾ | ಸುರೇಶ್ ಪುತ್ತೂರಾಯ..!

ವಿದಾನಸಭಾ ಚುನಾವಣೆ ವೇಳೆ ಅರುಣ್ ಪುತ್ತಿಲ ಜತೆ ಗುರುತಿಸಿಕೊಂಡಿದ್ದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಳೆದ ವಿಧಾನ ಸಭೆ ಚುನಾವಣೆ ಹಾಗೂ ಆ ಬಳಿಕ ನಿನ್ನೆಯವರೆಗೆ ಪುತ್ತೂರಿನ 3ನೇ ರಾಜಕೀಯ ಶಕ್ತಿಯಾಗಿ ಕಾಣಿಸಿಕೊಳ್ಳುತ್ತಿರುವ ಪುತ್ತಿಲ ಪರಿವಾರದ ಭಾಗವಾಗಿದ್ದ ಪುತ್ತೂರಿನ ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯ ದಿಢೀರ್ ಪಾಳಯ ಬದಲಿಸಿದ್ದಾರೆ.
ಪುತ್ತೂರು ನಗರ ಸಭೆಗೆ ತೆರವಾದ ಎರಡು ಸ್ಥಾನಗಳಿಗೆ ಡಿ 27 ರಂದು ಉಪ ಚುನಾವಣೆ ನಿಗದಿಯಾಗಿದ್ದು, ಆ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳು ಇಂದು ನಾಮ ಪತ್ರ ಸಲ್ಲಿಸಿದರು. ವಾರ್ಡ್ 1 ಕ್ಕೆ ಸುನೀತಾ ಹಾಗೂ ವಾರ್ಡ 11ಕ್ಕೆ ರಮೇಶ್ ರೈಯವರು ನಾಮಪತ್ರ ಸಲ್ಲಿಸಿದರು.


ನಾಮಪತ್ರ ಸಲ್ಲಿಕೆಗೂ ಮೊದಲು ಇಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಅಭ್ಯರ್ಥಿಗಳು ಹಾಗೂ ಬಿಜೆಪಿ ಮುಖಂಡರು ಪ್ರಾರ್ಥನೆ ಸಲ್ಲಿಸಿದರು . ಈ ವೇಳೆ ಅಲ್ಲಿಗೆ ಆಗಮಿಸಿದ ಡಾ| ಪುತ್ತೂರಾಯರು ಇಬ್ಬರು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.
ಡಾ ಸುರೇಶ್ ಪುತ್ತೂರು ದಿಢೀರ್ ಪಾಳಯ ಬದಲಾಯಿಸಲು ಕಾರಣವೇನು ಎಂದು ತಿಳಿದು ಬಂದಿಲ್ಲ.
ಈ ವೇಳೆ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅದ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಿರಿಯ ಬಿಜೆಪಿ ಮುಖಮಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ್ ಜೈನ್, ದಿನೇಶ್ ಜೈನ್ , ರಾಮದಾಸ ಹಾರಾಡಿ ಮುಂತಾದವರು ಇದ್ದರು,
ಬಳಿಕ ಬಿಜೆಪಿ ಅಭ್ಯರ್ತಿಗಳು ಹಾಗೂ ಬಿಜೆಪಿ ಮುಖಂಡರು ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.

By admin

Leave a Reply

Your email address will not be published. Required fields are marked *

error: Content is protected !!