ಕಯ್ಯಾರ್ ಕ್ರಿಸ್ತರಾಜ ದೇವಾಲಯದ ವಾರ್ಷಿಕ ಹಬ್ಬ ಹಾಗೂ ನೂತನ ಇಗರ್ಜಿಯ ಯೋಜನೆಗೆ ಆದಿತ್ಯವಾರ ಚಾಲನೆ ನೀಡಲಾಯಿತು. ವಾರ್ಷಿಕ ಹಬ್ಬದಂಗವಾಗಿ ಆದಿತ್ಯವಾರ ಸಂಜೆ ಇಗರ್ಜಿ ಮೈದಾನದಲ್ಲಿ ದಿವ್ಯ ಬಲಿಪೂಜೆ ನೆರವೇರಿತು. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ದಿವ್ಯ ಬಲಿಪೂಜೆಯ ನೇತೃತ್ವ ನೀಡಿದರು. ಕಯ್ಯಾರ್ ಇಗರ್ಜಿಯ ಧರ್ಮಗುರು ವಂದನೀಯ ಫಾದರ್ ವಿಶಾಲ್ ಮೊನಿಸ್ ಹಾಗೂ ಪೆರ್ಮುದೆ ಇಗರ್ಜಿಯ ವಂದನೀಯ ಫಾದರ್ ಕ್ಲೋಡ್ ಕೋರ್ಡ ಉಪಸ್ಥಿತರಿದ್ದರು . ದಿವ್ಯ ಬಲಿಪೂಜೆ ಬಳಿಕ ಪರಮ ಪ್ರಸಾದದ ಮೆರವಣಿಗೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮ ದಲ್ಲಿ ಕಯ್ಯಾರ್ ನೂತನ ಇಗರ್ಜಿ ಯೋಜನೆಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮಾಜಿ ಶಾಸಕ ಜೆ. ಆರ್. ಲೋಬೊ, ಉದ್ಯಮಿ ಹಾಗೂ ದಾನಿ ಪೆರ್ಮುದೆಯ ನವೀನ್ ರಂಜಿತ್ ಡಿಸೋಜ , ಫಾದರ್ ವಿಶಾಲ್ ಮೊನಿಸ್ , ವಿಜಯ ಜೇಸುರಾಜ್ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಜಾಸ್ಮಿನ್ ಲೂವಿಸ್,ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿಸೋಜ , ಕಾರ್ಯದರ್ಶಿ ಝೀನಾ ಡಿ ಸೋಜ , ಆಶಿಕಾ ಡಿ ಸೋಜ , ಪಂಚಾಯತ್ ಸದಸ್ಯ ಅವಿನಾಶ್ ಮಚಾದೊ, ಮೊದಲಾದವರು ಉಪಸ್ಥಿತರಿದ್ದರು. ಯೋಜನೆಯ ಯಶಸ್ವಿಗಾಗಿರುವ ‘ಕ್ರಿಸ್ತ್ ರಾಯಾಕ್ ನವೆನ್ ‘ ಪ್ರಾರ್ಥನೆಯ ಪ್ರತಿಯನ್ನುಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ, ಧನ ಸಂಗ್ರಹ ಕ್ಕೆ ಜೆ. ಆರ್. ಲೋಬೊ, ಯೋಜನೆಯ ಸಮಗ್ರ ಮಾಹಿತಿ ಒಳಗೊಂಡಿರುವ ಕಾರ್ಡ್ ನ್ನು ನವೀನ್ ರಂಜಿತ್ ಡಿಸೋಜ ಬಿಡುಗಡೆಗೊಳಿಸಿದರು. ಕೆಥೋಲಿಕ್ ಸಭಾ ವತಿಯಿಂದ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಬಹುಮಾನ ವಿತರಿಸಿದರು.

ಫಾದರ್ ವಿಶಾಲ್ ಮೋನಿಸ್ ಸ್ವಾಗತಿಸಿ , ರೋಶನ್ ಡಿ ಸೋಜ ವಂದಿಸಿದರು. ಜೋಸ್ಟಲ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು

By admin

Leave a Reply

Your email address will not be published. Required fields are marked *

error: Content is protected !!