ಮಂಗಳೂರು, ಸತ್ಯ, ನ್ಯಾಯ ನೀತಿಯ ಪರವಾಗಿರುವವರೇ ನೈಜ ಪತ್ರಕರ್ತರು ಎಂದು ಸಂದೇಶವೊಂದು ಮಂಗಳೂರಿನ ಕ್ರೈಸ್ತ ಪತ್ರಕರ್ತರ ಸಮ್ಮಿಲನದಲ್ಲಿ ಕೇಳಿಬಂತು. ನಗರದ ಜೆಪ್ಪು ಸಂತ ಅಂತೋಣಿ ಆಶ್ರಮದ ಸಭಾಂಗಣದಲ್ಲಿ ರವಿವಾರ ನಡೆದ ಕ್ಯಾಥೋಲಿಕ್ ಕ್ರೈಸ್ತ ಪತ್ರಕರ್ತರ ಸಹಮಿಲನ ನಡೆದಿದ್ದು ಭಾಗವಹಿಸಿದ ಪ್ರಮುಖರು ತಮ್ಮ ಅಭಿಪ್ರಾಯ ಮಂಡಿಸಿದರು.
ಸಮಾರಂಭವನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ. ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದು ಕ್ರೈಸ್ತ ಪರ್ತಕರ್ತರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದಾಗಿಯೂ, ಸತ್ಯ, ಧರ್ಮದ ಹಾದಿಯನ್ನು ತುಳಿದು ಮುನ್ನಡೆಯುವುದು ಅಗತ್ಯವಾಗಿದೆ ಎಂದರು.
ದೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಹಾಗೂ ಹಿರಿಯ ಪತ್ರಕರ್ತ ರೋನ್ಸ್ ಬಂಟ್ವಾಳ ಮಾತನಾಡಿ ಪತ್ರಕರ್ತರಿಗೆ ಎದುರಾಗುವ ಸವಾಲುಗಳ ಬಗ್ಗೆ ವಿವರಿಸಿದರು.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಅಧ್ಯಕ್ಷರಾದ ಆಲ್ವಿನ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಡಾ|ಜೆ.ಬಿ. ಸಲ್ಡಾನ್ಹಾ, ಜೆಪ್ಪು ಸಂತ ಆಂತೋಣಿಯವರ ಆಶ್ರಮದ ನಿರ್ದೇಶಕರ ವಂದನೀಯ ಫಾ| ಜೆ.ಬಿ. ಕ್ರಾಸ್ತರವರು ವೇದಿಕೆಯಲ್ಲಿ ಭಾಗವಹಿಸಿದ್ದರು. ಕರಾವಳಿ ಸುದ್ದಿ ವಾರ್ತಾ ಪತ್ರ ಸಂಪಾದಕ ಮತ್ತು ಪ್ರಕಾಶಕ ರೋಷನ್ ಬೊನಿಫಾಸ್ ಮಾರ್ಟಿಸ್ , ಕಥೊಲಿಕ್ ಸಭಾ ಕೇಂದ್ರೀಯ ಕಾರ್ಯದರ್ಶಿಯಾದ ಶ್ರೀಮತಿ ವಿಲ್ಮಾ ಮೊಂತೇರೊ, ಕಾರ್ಯಕ್ರಮದ ಸಂಚಾಲಕರಾದ ಶ್ರೀ ಪಾವ್ಲ್ ರೋಲ್ಫಿ ಡಿಕೋಸ್ತಾ ಕಾರ್ಯಕ್ರಮದ ಅತಿಥಿಗಳಾಗಿದ್ದರು. ಕೆಪಿಎಸ್ಸಿ ಸಮಿತಿ ಸದಸ್ಯರೊನಾಲ್ಡ್ ಫೆರ್ನಾಂಡಿಸ್, ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಕಾರ್ಯದರ್ಶಿಯಾದ ಜೋನ್ ಡಿಸಿಲ್ವಾ, ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ)ಇದರ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಎಮ್ಸಿಸಿ ಬ್ಯಾಂಕಿನ ಚೇರ್ಮೆನ್ ಅನಿಲ್ ಲೋಬೊ, ರಾಕ್ಣೊ ಕೊಂಕಣಿ ಪತ್ರಿಕೆಯ ಸಂಪಾದಕರಾದ ವಂದನೀಯ ಫಾ| ರೂಪೇಶ್ ಮಾಡ್ತಾ ಉಪಸ್ಥಿತರಿದ್ದರು.
ನೋರ್ಬರ್ಟ್ ಮಿಸ್ಕಿತ್ ಮತ್ತು ಲವೀನಾ ಗ್ರೆಟ್ಟಾ ಡಿಸೋಜಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

By admin

Leave a Reply

Your email address will not be published. Required fields are marked *

error: Content is protected !!