ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 70 ನೇ ಜನ್ಮದಿನೋತ್ಸವ – ಅಮೃತೋತ್ಸವ 2023 ಕಾರ್ಯಕ್ರಮವು ಅ.8 ರಂದು ಉರ್ವ ಸ್ಟೋರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಬೋಳೂರು ಮಾತಾ ಅಮೃತಾನಂದಮಯಿ ಮಠದ ಸೇವಾ ಸಮಿತಿ ಅಧ್ಯಕ್ಷ ಡಾ. ವಸಂತ ಕುಮಾರ್ ಪೆರ್ಲ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.8 ರಂದು ಬೆಳಗ್ಗೆ 9 ಗಂಟೆಯಿಂದ ಮಠಾಧಿಪತಿಗಳಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ: ಪ್ರಾಣ ಇವರ ಮುಂದಾಳತ್ವದಲ್ಲಿ ಶ್ರೀ ಗುರು ಪಾದುಕಾಪೂಜೆ, ಧ್ಯಾನ, ಸತ್ಸಂಗ, ಭಜನೆ, ಮಂಗಳಾರತಿ, ಮಠದ ಸಮಾಜಸೇವಾ ಕಾರ್ಯಕ್ರಮಗಳಿಗೆ ಚಾಲನೆ, ಪ್ರಸಾದ ಹಾಗೂ ಮಹಾಪ್ರಸಾದ ವಿತರಣೆ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಸನ್ಮಾನ್ಯ ಸದಸ್ಯರಾದ ತಿಪ್ಪಣಪ್ಪ ಕಮಕನೂರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಠದ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಗೌರವಾನ್ವಿತ ಅತಿಥಿಗಳಾಗಿ ಮಂಗಳೂರಿನ ಮೇಯ‌ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕರಾವಳಿ ಕಾವಲು ಪಡೆಯ ಜಿಲ್ಲಾ ಕಾರ್ಯಾಧಿಕಾರಿಗಳಾದ ಲೆಫ್ಟಿನಂಟ್ ಕರ್ನಲ್‌ ವಿವೇಕ್ ಬಿಂದ್ರಾ ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭ ಸೇವಾ ಸಮಿತಿಯ ಉಪಾಧ್ಯಕ್ಷ ಸುರೇಶ್ ಅಮೀನ್, ಕಾರ್ಯದರ್ಶಿ ಡಾ. ಅಶೋಕ್ ಶೆಣೈ ಉಪಸ್ಥಿತರಿದ್ದರು.

BERLIN, GERMANY – NOVEMBER 12: Mata Amritanandamayi Devi, primarily known simply as Amma (‘Mother’), the hugging saint, hugs a devotee in the event hall Arena, on November 12, 2014 in Berlin, Germany. Amritanandamayi, an Indian guru, has hugged over 33 million people around the world, her own form of a Hindu blessing known as a Darshan, a gesture she believes ‘can help to awaken dormant spiritual energy within them.’ Amma also runs a group of global charities, known as Embracing the World. (Photo by Adam Berry/Getty Images)

By admin

Leave a Reply

Your email address will not be published. Required fields are marked *

error: Content is protected !!