ಬಂಟ್ವಾಳ, ಸೆ.16: ಇಲ್ಲಿಗೆ ಸಮೀಪದ ಮಾರ್ನಬೈಲ್ ಎಂಬಲ್ಲಿರುವ ಪ್ರತಿಷ್ಠಿತ ಮೆಲ್ಕಾರ್ ಪದವಿ ಕಾಲೇಜು, ಇಲ್ಲಿನ ವಿಧ್ಯಾರ್ಥಿಗಳ ಒಂಭತ್ತನೇ ವಾರ್ಷಿಕ ಪದವಿ ಪ್ರದಾನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಎ.ಎಂ. ಖಾನ್ ರವರು, ಪದವಿ ಎಂಬುವುದು ನಿಮ್ಮ ಕಲಿಕೆಯ ಅಂತ್ಯವಲ್ಲ, ಅದೊಂದು ಹಂತ ಮಾತ್ರ, ಆದುದರಿಂದ ಪ್ರತಿಯೊಬ್ಬರು ಸದಾ ತಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಲು ಪುಸ್ತಕಗಳನ್ನು ಓದುವುದರೊಂದಿಗೆ, ಪತ್ರಿಕೆಗಳು, ವಾರ್ತೆಗಳು ಮತ್ತು ಇತರೆ ಮಾಹಿತಿಗಳನ್ನು ಕಲೆ ಹಾಕುತ್ತಾ ತಮ್ಮ ಮಸ್ತಕವನ್ನು ಬೆಳೆಸಿಕೊಳ್ಳಬೇಕೆಂದು, ತಮ್ಮ ಅತಿಥಿ ಭಾಷಣದಲ್ಲಿ, ಹೇಳಿದರು. ಅದಲ್ಲದೆ ಲೋಕಾನುಭವದೊಂದಿಗೆ
ವೈಜ್ಞಾನಿಕ, ವೈಚಾರಿಕ, ಚಿಂತನಾಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಎಸ್. ಎಂ. ರಶೀದ್ ಹಾಜಿಯವರು
ಕಲಿಕೆಯೊಂದಿಗೆ ಶಿಸ್ತು, ದೇಶಾಭಿಮಾನ, ಸಾಮರಸ್ಯದ ಬದುಕು, ರೂಢಿಸಿಕೊಂಡು ವ್ಯಕ್ತಿತ್ವ ವಿಕಸನವನ್ನು ಮಾಡಿಕೊಂಡು, ಸಮಾಜದಲ್ಲಿ ಸಭ್ಯ ನಾಗರಿಕರಾಗಿ,
ಗಣ್ಯ, ಮಾನ್ಯ ವ್ಯಕ್ತಿಯಾಗಿ, ಬದುಕಬೇಕೆಂದು ವಿದ್ಯಾರ್ಥಿಗಳಿಗೆ ಉಪದೇಶಿಸಿದರು. ಕಾಲೇಜಿನ ಪ್ರಾಂಶುಪಾಲರಾದ
ಬಿ.ಕೆ. ಅಬ್ದುಲ್ ಲತೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದವಿ ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸಿದ ಬಿ.ಕಾಂ. ವಿಭಾಗದ ರಶೀನಾ
ಹಾಗೂ ಬಿ.ಎ. ವಿಭಾಗದ ಫಾತಿಮಾ ಫರ್ವೀನಾ ಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಹಾಗೂ ಒಟ್ಟು ಸರಿಸುಮಾರು
64 ವಿದ್ಯಾರ್ಥಿನಿಯರಿಗೆ
ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕ ವೃಂದದವರು, ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯ ನಂತರ ದ್ವಿತೀಯ
ಬಿ.ಕಾಂ. ವಿದ್ಯಾರ್ಥಿನಿ ನಝ್ಮಿಯಾ ಜಾಸ್ಮಿನ್
ಸ್ವಾಗತಿಸಿದರು, ಅಂತಿಮ ಬಿ.ಎ. ವಿದ್ಯಾರ್ಥಿನಿ ಪಿ. ಝುಬೈದಾ ಸಲ್ಹಾ ಕಾರ್ಯಕ್ರಮವನ್ನು ನಿರೂಪಿಸಿದರು, ಕೊನೆಯಲ್ಲಿ ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ನುಸೈಬ ಬಾನು ಧನ್ಯವಾದವಿತ್ತರು.

By admin

Leave a Reply

Your email address will not be published. Required fields are marked *

error: Content is protected !!