ಕೃಷ್ಣಜನ್ಮಾಷ್ಟಮಿ ತಯಾರಿಗಳು ಕೃಷ್ಣ ನಗರಿ ಉಡುಪಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಕಟಪಾಡಿಯ ಸಮಾಜ ಸೇವಕ ರವಿ ಕಟಪಾಡಿ ಕೂಡಾ ಈ ಬಾರಿ ವಿಶಿಷ್ಟ ವೇಷದೊಂದಿಗೆ ಜನರ ಮನರಂಜಿಸಲು ವೇಷ ಹಾಕಿದ್ದಾರೆ.
ಈ ಬಾರಿ ರವಿ ಕಟಪಾಡಿ ಅವರು ಸೀ ಪೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಧರಿಸಿದ್ದು, ಉದ್ಯಾವರ, ಉಡುಪಿ, ಮಲ್ಪೆ, ಪಡುಕೆರೆ ಮತ್ತು ಇತರ ಪ್ರದೇಶಗಳಲ್ಲಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ತಿರುಗಾಟ ನಡೆಸಿ ಜನರನ್ನು ರಂಜಿಸಲಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿಯೂ ಕುಂದಾಪುರ ಮೂಲದ ೨ ವರ್ಷದ ಮಗುವಿನ ಚಿಕಿತ್ಸೆಗೆ ಹಣವನ್ನು ನೀಡಲು ರವಿ ಕಟಪಾಡಿ ನಿರ್ಧಾರ ಮಾಡಿದ್ದಾರೆ.
ಮಂಗಳವಾರ ರಾತ್ರಿ ೯ ಗಂಟೆಗೆ ವೇಷಕ್ಕಾಗಿ ಕುಳಿತಿದ್ದು, ಬುಧವಾರ ಬೆಳಿಗ್ಗೆ ೯ ಗಂಟೆಗೆ ವೇಷ ಪೂರ್ಣಗೊಂಡಿದೆ.
ಸರಿ ಸುಮಾರು ೪೦ಗಂಟೆಗಳ ಕಾಲ ರವಿಯವರು ಅನ್ನಾಹಾರ ಇಲ್ಲದೆ ವೇಷ ಧರಿಸಿ ಇರಲಿದ್ದಾರೆ.
ಈ ಸಂದರ್ಭ ರವಿ ಕಟಪಾಡಿ ಮಾತನಾಡಿ, “ಕಳೆದ ೮ ವರ್ಷಗಳಿಂದ ಸುಮಾರು 113 ಮಕ್ಕಳಿಗೆ ಸುಮಾರು 1ಕೋಟಿಗೂ ಮಿಕ್ಕಿ ಧನಸಹಾಯ ಮಾಡಿದ್ದು, ಇದರ ಸಂತೃಪ್ತಿ ನಮಗಿದೆ. ಈ ಬಾರಿ ವೇಷ ಹಾಕಿದರೂ, ಜನರ ಬಳಿಗೆ ತೆರಳಿ ಬಾಕ್ಸ್ ನಲ್ಲಿ ಹಣ ಸಂಗ್ರಹ ಮಾಡುವುದಿಲ್ಲ. ಬದಲಾಗಿ ಜನರು ನಮ್ಮ ಉದ್ದೇಶಕ್ಕೆ ಸಹಕಾರ ನೀಡಲು ಇಚ್ಛಿಸಿದ್ದಲ್ಲಿ ನಮ್ಮ ವಾಹನದ ಬಳಿಗೆ ಬಂದು ತಮ್ಮ ಧನ ಸಹಾಯವನ್ನು ನೀಡಬಹುದು. ಇದು ನಮ್ಮ ರವಿ ಫ್ರೆಂಡ್ಸ್ ಕಟಪಾಡಿ ತಂಡದ ನಿರ್ಧಾರ. ನನ್ನಂತೆಯೇ ಹಲವಾರು ತಂಡಗಳು ರೋಗಿಗಳ ಚಿಕಿತ್ಸೆಗಾಗಿ ವೇಷ ಧರಿಸಿ ಹಣ ಪಡೆಯುತ್ತಾರೆ. ನನ್ನ ಪ್ರೇರಣೆಯಿಂದಾಗಿ, ಹತ್ತು ಹಲವು ಮಂದಿ ಸಹಾಯ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಈ ಸಂದರ್ಭ ತಂಡದ ಸದಸ್ಯರು ಉಪಸ್ಥಿತರಿದ್ದರು.

By admin

Leave a Reply

Your email address will not be published. Required fields are marked *

error: Content is protected !!